Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
Team Udayavani, Nov 24, 2024, 12:52 PM IST
ಈ ವ್ಯವಸ್ಥೆಯೇ ಹಾಗೆ… ಯಾರೇ ಬರಲಿ, ಎಷ್ಟೇ ಬದಲಾವಣೆ ತರಲಿ ಕಿಂಚಿತ್ತೂ ಬದಲಾಗದ ಸಮಾಜ, ಜನರ ಮನಸ್ಥಿತಿ, ರಾಜಕೀಯ… ಎಷ್ಟೇ ರೀತಿ, ನೀತಿಗಳಿದ್ದರೂ ಅದು ಹೆಸರಿಗೆ ಮಾತ್ರ. ಕಣ್ಮುಂದೆ ಏನೆಲ್ಲ ನಡೆಯುತ್ತಿದ್ದರೂ ಏನೂ ಮಾಡದ ಅಸಹಾಯಕತೆ. ಇಷ್ಟೆಲ್ಲ ಅವ್ಯವಸ್ಥೆಗಳ ನಡುವೆ ಒಂದು ಕ್ರಾಂತಿಯ ಕಿಡಿ ಅನಿವಾರ್ಯವೇ ಸರಿ. ಈ ವಾರ ತೆರೆ ಕಂಡ ಪ್ರಭುತ್ವ ಸಿನಿಮಾ ಸದ್ಯ ಆ ಕಿಡಿ ಹೊತ್ತಿಸಿದೆ. ಪ್ರಭುತ್ವ, ಇದನ್ನು ಸಿನಿಮಾ ಎನ್ನುವುದಕ್ಕಿಂತ ವಿಚಾರದ ಹೂರಣ ಎನ್ನ ಬಹುದು. ಇಲ್ಲಿ ಉಪದೇಶಗಳೇ ಸಂಭಾಷಣೆಗಳಾಗಿ ಬದಲಾಗಿವೆ.
ಇನ್ನು ಕಥೆಯ ಬಗ್ಗೆ ಹೇಳುವುದಾದರೆ, ಕಥಾನಾಯಕ ಮನು ವೃತ್ತಿಯಿಂದ ಮೆಕ್ಯಾನಿಕ್. ತನ್ನ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳಿಗೆ ಸದ್ದಿಲ್ಲದೇ ನ್ಯಾಯ ಕೊಡಿಸುವಾತ. ಅದಕ್ಕಾಗಿ ಒಂದಿಷ್ಟು ರಕ್ತಪಾತ, ಕೊಲೆಗಳೂ ಆಗುತ್ತವೆ. ಅಲ್ಲಿಂದ ಹಲವು ತಿರುವು ಪಡೆಯುವ ಕಥೆಯಲ್ಲಿ ನಾಯಕ ಹೋರಾಟ ಮಾಡುತ್ತ, ಚುನಾವಣೆಗೂ ನಿಲ್ಲುತ್ತಾನೆ. ಆತ ಗೆಲ್ಲುತ್ತಾನೋ? ಸೋಲುತ್ತಾನೋ? ಮುಂದೆ ಅವನ ನಡೆ ಏನಿರಬಹುದು ಎಂಬುದೇ ಚಿತ್ರದ ಜೀವಾಳ.
ನಟ ಚೇತನ ಚಂದ್ರ ನಾಯಕ ಸ್ಥಾನದಲ್ಲಿ ಭರವಸೆ ಮೂಡಿಸಿದ್ದಾರೆ. ನಾಯಕಿ ಪಾವನ ಜೊತೆಗಿನ ಪ್ರೇಮ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ. ಸಂಭಾಷಣೆಗಳೇ ಚಿತ್ರದ ಪ್ಲಸ್ ಎನ್ನಬಹುದು. ರಾಜೇಶ್ ನಟರಂಗ್, ನಾಸರ್ ಅವರ ಪೋಷಕ ಪಾತ್ರಗಳು ಗಮನ ಸೆಳೆಯುತ್ತವೆ. ಉಳಿ ದಂತೆ ವೀಣಾ ಸುಂದರ್, ಶಶಿಕುಮಾರ್, ಪೂಜಾ ಲೋಕೇಶ್, ಆದಿ, ಶರತ್ ಲೋಹಿತಾಶ್ವ ನಟಿಸಿದ್ದಾರೆ. “ಪ್ರಭುತ್ವ’ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಚಿತ್ರವಾಗಿದೆ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.