Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
ಈಗ 3 ಸ್ಥಾನ, ಜನವರಿಯಲ್ಲಿ ಮತ್ತೊಂದು ಖಾಲಿ
Team Udayavani, Nov 25, 2024, 7:25 AM IST
ಬೆಂಗಳೂರು: ಉಪಸಮರದಲ್ಲಿ “ಕ್ಲೀನ್ ಸ್ವೀಪ್ ‘ ಮಾಡಿ ಬೀಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಈಗ ಮೇಲ್ಮನೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದ್ದು, ತೆರವಾದ ಮತ್ತು ತೆರವಾಗಲಿರುವ ಸ್ಥಾನಗಳಿಗಾಗಿ ಆಕಾಂಕ್ಷಿಗಳಿಂದ ಲಾಬಿ ಆರಂಭವಾಗಿದೆ.
ವಿಧಾನ ಪರಿಷತ್ತಿನ ಒಟ್ಟು 75 ಸ್ಥಾನಗಳ (ಸಭಾಪತಿ ಸೇರಿ) ಪೈಕಿ ನೂತನ ಶಾಸಕ ಸಿ.ಪಿ. ಯೋಗೇಶ್ವರ್ ರಾಜೀನಾಮೆಯಿಂದ ತೆರವಾದ ಸ್ಥಾನ ಸೇರಿ 3 ಸ್ಥಾನಗಳು ಈಗಾಗಲೇ ಖಾಲಿಯಾಗಿದ್ದರೆ, ಮತ್ತೂಂದು ಸ್ಥಾನ ಜನವರಿಯಲ್ಲಿ ತೆರವಾಗಲಿದೆ. ಇವುಗಳಿಗಾಗಿ ಪೈಪೋಟಿ ನಡೆದಿದೆ.
ವೆಂಕಟೇಶ್, ರಾಠೊಡ್‌ಗಿಲ್ಲ ಅವಕಾಶ?
ಕಾಂಗ್ರೆಸ್‌ನಿಂದ ನಾಮನಿರ್ದೇಶನಗೊಂಡಿದ್ದ ಬ್ರಾಹ್ಮಣ ಸಮುದಾಯದ ಯು.ಬಿ. ವೆಂಕಟೇಶ್ ಮತ್ತು ಲಂಬಾಣಿ ಸಮುದಾಯದ ಪ್ರಕಾಶ ರಾಠೊಡ್ ಅವರ ಅವಧಿ ಕಳೆದ ತಿಂಗಳಷ್ಟೇ ಮುಕ್ತಾಯವಾಗಿದೆ. ಈ ಪೈಕಿ ಈಗಾಗಲೇ ಪ್ರಕಾಶ ರಾಠೊಡ್ 2 ಬಾರಿ ಮೇಲ್ಮನೆ ಪ್ರವೇಶಿಸಿದ್ದರೆ, ವೆಂಕಟೇಶ ಅವರು ವಿಧಾನಸಭಾ ಚುನಾವಣೆಯ ಟಿಕೆಟ್ ಗಿಟ್ಟಿಸಿಕೊಂಡು ಸೋತಿದ್ದರು. ಈ ಎರಡೂ ಕಾರಣಗಳಿಂದ ಇಬ್ಬರಿಗೂ ಮತ್ತೆ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಆದರೂ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಅಧಿವೇಶನ ವೇಳೆ ಸ್ಪಷ್ಟ ಚಿತ್ರಣ?
ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿತ ಪ್ರಮುಖ ನಾಯಕರ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಈ ಸಂಬಂಧದ ಆಯ್ಕೆಯಲ್ಲೂ ಬಣಗಳ ನಡುವೆ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹೊತ್ತಿಗೆ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಹೇಳಲಾಗುತ್ತಿದೆ.
ಆಕಾಂಕ್ಷಿಗಳು
ವಿ.ಎಸ್. ಉಗ್ರಪ್ಪ, ಸಿ.ಎಸ್. ದ್ವಾರಕನಾಥ್, ಬಾಲರಾಜ ನಾಯ್ಕ, ಬಿ.ಎಲ್. ಶಂಕರ್, ವಿನಯ ಕಾರ್ತಿಕ್, ನಟರಾಜ ಗೌಡ, ಪ್ರಕಾಶ ರಾಠೊಡ್, ಯು.ಬಿ. ವೆಂಕಟೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.