Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Team Udayavani, Nov 25, 2024, 9:34 AM IST
ನಾಲತವಾಡ: ವಿದ್ಯುತ್ ತಂತಿ ತಗುಲಿ ಶಾಕ್‌ನಿಂದ ಮೃತಪಟ್ಟಿದ್ದ ಕೋತಿಗೆ ನಾಲತವಾಡ ಪಟ್ಟಣದ ಜಗದೇವನಗರ ನಿವಾಸಿಗಳು ಹಣೆಗೆ ಕುಂಕುಮವಿಟ್ಟು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ರವಿವಾರ(ನ.24) ಸಂಜೆ ವರದಿಯಾಗಿದೆ.
ಜಗದೇವನಗರದ ಹನುಮಾನ ದೇವಸ್ಥಾನದ ಮರವೊಂದರಲ್ಲಿ ಆಟವಾಡುತ್ತಿದ್ದ ಕೋತಿಗಳ ಗುಂಪಿನ ದೊಡ್ಡ ಕೋತಿಯೊಂದು ಆಯ ತಪ್ಪಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಇದನ್ನು ಕಂಡ ಉಳಿದ ಕೋತಿಗಳು ಚೀರಾಟ ಮಾಡುತ್ತಲೇ ಸ್ಥಳೀಯರ ಗಮನ ಸೆಳೆಯಲು ಯತ್ನಿಸಿದೆ.
ಕೆಳಕ್ಕೆ ಬಿದ್ದ ಕೋತಿಯನ್ನು ಕಂಡ ಸ್ಥಳೀಯರು ಮೊದಲು ಬದುಕಿದೆಯೇ ಎಂದು ಪರಿಶೀಲಿಸಿದ್ದಾರೆ, ಆದರೆ ಕೋತಿ ಅದಾಗಲೇ ಮೃತ ಪಟ್ಟಿತ್ತು. ಸ್ಥಳೀಯರು ಆ ಕೋತಿಯನ್ನು ದೇವರೆಂಬ ಭಾವನೆಯಿಂದ ಪೂಜಿಸುತ್ತಾರೆ, ಹೀಗಾಗಿ ಕೋತಿಯ ಮೃತ ದೇಹಕ್ಕೆ ಮಾಲೆಗಳನ್ನು ತೊಡಿಸಿ, ಹಾಡು, ಬ್ಯಾಂಡ್ ಸಮೇತ ಕೋತಿಯ ಅಂತ್ಯಕ್ರಿಯೆಗೆ ಮೆರವಣಿಗೆ ನಡೆಸಿದರು. ಕೆಲ ಹಿರಿಯರು ,ಯುವಕರು. ಕ್ಷಣಗಳ ಕಾಲ ಭಾವುಕರಾದರು ಕೋತಿಯ ಮೃತ ದೇಹಕ್ಕೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ವೇಳೆ ಸದಸ್ಯರಾದ ರಮೇಶ ಆಲಕೊಪ್ಪರ ಮಹಮ್ಮದ ನಾಡದಾಳ ಗುರು ತಂಗಡಗಿ ರಾಚಯ್ಯ ಹಿರೆಮಠ ಮುದಕಪ್ಪ ಚಲವಾದಿ ಆನಂದ ಅಮರಣವರ ಬಾಬು ಕಸಾಬ್ ವೀರೇಶ ದಾರಿಮನಿ ಮಲ್ಲು ತಳವಾರ ಮಲ್ಲು ನೆರಬಂಚಿ ಬಸ್ಸು ಮುರಾಳ ಶರಣಪ್ಪ ಬಂಡಿವಡ್ಡರ ಹಾಗೂ ಜಗದೇವನಗರ, ವಿನಾಯಕ ನಗರದ ಹಿರಿಯರು,ಯುವಕರು ಜಗದೇವನಗರದ ಹನುಮಾನ ದೇವಾಲಯದ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದರು.
ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.