BGT 2024: ಪರ್ತ್‌ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
295 ರನ್ ಜಯಭೇರಿ, ಆಸ್ಟ್ರೇಲಿಯದಲ್ಲಿ ಭಾರತಕ್ಕೆ ಅತೀ ದೊಡ್ಡ ಜಯ, 1-0 ಸರಣಿ ಮುನ್ನಡೆ
Team Udayavani, Nov 25, 2024, 1:21 PM IST
ಪರ್ತ್: ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಸಾಮಾನ್ಯ ಪರಾಕ್ರಮ ಮೆರೆದ ಭಾರತ, 295 ರನ್ನುಗಳ ಬೃಹತ್ ಜಯಭೇರಿಯೊಂದಿಗೆ “ಬೋರ್ಡರ್-ಗಾವಸ್ಕರ್ ಟ್ರೋಫಿ’ ಸರಣಿಯನ್ನು ಅಮೋಘ ರೀತಿಯಲ್ಲಿ ಆರಂಭಿಸಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಜತೆಗೆ, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ.
ಗೆಲುವಿಗೆ 534 ರನ್ನುಗಳ ಅತ್ಯಂತ ಕಠಿನ ಗುರಿ ಪಡೆದಿದ್ದ ಆಸ್ಟ್ರೇಲಿಯ, 4ನೇ ದಿನವಾದ ಸೋಮವಾರ ಬ್ಯಾಟಿಂಗ್ ಮುಂದುವರಿಸಿ 58.4 ಓವರ್‌ಗಳಲ್ಲಿ 238ಕ್ಕೆ ಆಲೌಟ್ ಆಯಿತು. 3ನೇ ದಿನ 12ಕ್ಕೆ 3 ವಿಕೆಟ್ ಕಳೆದುಕೊಂಡಾಗಲೇ ಆಸ್ಟ್ರೇಲಿಯದ ಪತನ ಖಾತ್ರಿಯಾಗಿತ್ತು. 4ನೇ ದಿನದಾಟದಲ್ಲಿ ಅದು ಹೆಚ್ಚೇನೂ ಪ್ರತಿಹೋರಾಟ ನೀಡದೆ ಶರಣಾಗತಿ ಸಾರಿತು.
ಇದು ಆಸ್ಟ್ರೇಲಿಯದಲ್ಲಿ ಭಾರತ ರನ್ ಅಂತರದಲ್ಲಿ ಸಾಧಿಸಿದ ಅತೀ ದೊಡ್ಡ ಗೆಲುವು. ಹಿಂದಿನ ದೊಡ್ಡ ಗೆಲುವು 46 ವರ್ಷಗಳ ಹಿಂದೆ, 1978ರ ಮೆಲ್ಬರ್ನ್ ಟೆಸ್ಟ್‌ನಲ್ಲಿ ಒಲಿದಿತ್ತು. ಅಂತರ 222 ರನ್.
ಅಚ್ಚರಿ, ವಿಸ್ಮಯ…
ಮೊನ್ನೆ ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಲ್ಲಿ 3-0 ವೈಟ್‌ವಾಶ್ ಅನುಭವಿಸಿದ ತಂಡವೊಂದು ಆಸ್ಟ್ರೇಲಿಯ ನೆಲದಲ್ಲಿ ಖಂಡಿತ ಎದ್ದು ನಿಲ್ಲದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದೂ ಅಲ್ಲದೆ ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್ ಗೈರು ಕೂಡ ಕಾಡಿತ್ತು. ಶಮಿ ಲಭ್ಯವಿರದ ಕಾರಣ ವೇಗದ ಬೌಲಿಂಗ್ ವಿಭಾಗ ಕೂಡ ಘಾತಕವಾಗಿರಲಿಲ್ಲ. ಇಬ್ಬರು ಆಟಗಾರರಿಗೆ ಇದು ಪದಾರ್ಪಣ ಟೆಸ್ಟ್ ಕೂಡ ಆಗಿತ್ತು. ಅನುಭವದಲ್ಲಿ ಎಷ್ಟೋ ಹಿಂದುಳಿದಿತ್ತು.
ಎದುರಾಳಿ ಆಸ್ಟ್ರೇಲಿಯವಂತೂ ಕಳೆದೆರಡು ಸಲಕ್ಕಿಂತ ಹೆಚ್ಚು ಬಲಿಷ್ಠವಾಗಿತ್ತು. ಸೇಡು ತೀರಿಸಲು ಹೊಂಚುಹಾಕಿ ಕುಳಿತಿತ್ತು. ಅದೂ ಅಲ್ಲದೇ ಮೊದಲ ಇನ್ನಿಂಗ್ಸ್
ನಲ್ಲಿ 150ಕ್ಕೆ ಉದುರಿದ ತಂಡವೊಂದು ಕಮ್‌ಬ್ಯಾಕ್ ಮಾಡುವುದು ಖಂಡಿತ ಸುಲಭವಲ್ಲ. ಇಂಥ ಸನ್ನಿವೇಶದಲ್ಲಿ ಬುಮ್ರಾ ಸಾರಥ್ಯದಲ್ಲಿ ಭಾರತ ಅಸಾಮಾನ್ಯ ಸಾಧನೆಯನ್ನೇ ಗೈದಿತು. ಕ್ರಿಕೆಟ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿತು. ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದ ಗೆಲುವು ಇದೆಂಬುದರಲ್ಲಿ ಎರಡು ಮಾತಿಲ್ಲ.
ಕ್ಯಾಪ್ಟನ್ ಬುಮ್ರಾ, ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ ಆವರೆಲ್ಲ ಭಾರತದ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.
ಹೋರಾಡದೇ ಸೋತ ಆಸೀಸ್
ರವಿವಾರದ ಕೊನೆಯಲ್ಲಿ 12ಕ್ಕೆ 3 ಎಂಬ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ, 17 ರನ್ನಿಗೆ 4ನೇ ವಿಕೆಟ್ ಕಳೆದುಕೊಂಡಿತು. ಆರಂಭಕಾರ ಖ್ವಾಜಾ (4) ಅವರನ್ನು ಪಂತ್‌ಗೆ ಕ್ಯಾಚ್ ಕೊಡಿಸುವಲ್ಲಿ ಸಿರಾಜ್ ಯಶಸ್ವಿಯಾದರು. ಸ್ಮಿತ್-ಹೆಡ್ ಸೇರಿಕೊಂಡು ಮೊತ್ತವನ್ನು 79ಕ್ಕೆ ಏರಿಸಿದರು. ಆಗಲೂ ಸಿರಾಜ್ ನೆರವಿಗೆ ಬಂದು ಈ ಜೋಡಿಯನ್ನು ಬೇರ್ಪಡಿಸಿದರು. ಒಂದೂ ಬೌಂಡರಿ ಹೊಡೆತವಿಲ್ಲದೆ, 60 ಎಸೆತಗಳಿಂದ 17 ರನ್ ಮಾಡಿದ ಸ್ಮಿತ್ ಕೂಡ ಪಂತ್‌ಗೆ ಕ್ಯಾಚಿತ್ತರು.
ಹೆಡ್-ಮಿಚೆಲ್ ಮಾರ್ಷ್ ಒಂದಿಷ್ಟು ಹೊತ್ತು ಕ್ರೀಸ್ ಆಕ್ರಮಿಸಿಕೊಂಡು ಮೊತ್ತವನ್ನು 161ಕ್ಕೆ ತಂದು ನಿಲ್ಲಿಸಿದರು. ಆಗ ಬುಮ್ರಾ ದೊಡ್ಡದೊಂದು ಬ್ರೇಕ್ ಒದಗಿಸಿದರು. ಶತಕದತ್ತ ದೌಡಾಯಿಸುತ್ತಿದ್ದ ಹೆಡ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. 101 ಎಸೆತಗಳಿಂದ 89 ರನ್ ಮಾಡಿದ ಹೆಡ್, ಈ ಟೆಸ್ಟ್‌ನಲ್ಲಿ ಅರ್ಧ ಶತಕ ಹೊಡೆದ ಆಸ್ಟ್ರೇಲಿಯದ ಏಕೈಕ ಆಟಗಾರ. ಮಿಚೆಲ್ ಮಾರ್ಷ್ (47) ಅವರನ್ನು ಬೌಲ್ಡ್ ಮಾಡಿದ ನಿತೀಶ್ ರೆಡ್ಡಿ ತಮ್ಮ ಮೊದಲ ಟೆಸ್ಟ್ ವಿಕೆಟ್ ಉರುಳಿಸಿದರು. ಕೀಪರ್ ಅಲೆಕ್ಸ್ ಕ್ಯಾರಿ (36) ಅವರನ್ನು ಬೌಲ್ಡ್ ಮಾಡಿದ ರಾಣಾ ಭಾರತದ ಗೆಲುವನ್ನು ಸಾರಿದರು.
ಎಕ್ಸ್‌ಟ್ರಾ ಇನ್ನಿಂಗ್ಸ್
ಆಸ್ಟ್ರೇಲಿಯ ನೆಲದಲ್ಲಿ ಭಾರತ ರನ್ ಅಂತರದ ಅತೀ ದೊಡ್ಡ ಗೆಲುವು ಸಾಧಿಸಿತು (295 ರನ್). ಹಿಂದಿನ ದಾಖಲೆ 222 ರನ್. ಇದು 1978ರ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಒಲಿದಿತ್ತು. ಒಟ್ಟಾರೆಯಾಗಿ ಇದು ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ 2ನೇ ದೊಡ್ಡ ಜಯ. 2008ರ ಮೊಹಾಲಿ ಪಂದ್ಯವನ್ನು 320 ರನ್ನುಗಳಿಂದ ಜಯಿಸಿದ್ದು ದಾಖಲೆ.
ಭಾರತ ಪರ್ತ್‌ನಲ್ಲಿ 2ನೇ, ಇಲ್ಲಿನ ನೂತನ “ಆಪ್ಟಸ್ ಸ್ಟೇಡಿಯಂ’ನಲ್ಲಿ ಮೊದಲ ಜಯ ಸಾಧಿಸಿತು. ಇದು ಈ ಅಂಗಳದಲ್ಲಿ ಆಡಲಾದ 5ನೇ ಟೆಸ್ಟ್. ಹಿಂದಿನ ನಾಲ್ಕೂ ಪಂದ್ಯಗಳನ್ನು ಆಸ್ಟ್ರೇಲಿಯ ಜಯಿಸಿತ್ತು. ಇದರಲ್ಲೊಂದು ಜಯ ಭಾರತದ ವಿರುದ್ಧವೇ ಬಂದಿತ್ತು (2018, ಅಂತರ 146 ರನ್).
ಪರ್ತ್‌ನಲ್ಲಿ ಭಾರತ 2008ರಲ್ಲಿ ಮೊದಲ ಜಯ ಸಾಧಿಸಿತ್ತು. ಅಂತರ 72 ರನ್. ಇದು “ವಾಕಾ’ದಲ್ಲಿ ನಡೆದ ಟೆಸ್ಟ್ ಆಗಿತ್ತು. ನಾಯಕರಾಗಿದ್ದವರು ಅನಿಲ್ ಕುಂಬ್ಳೆ.
ಭಾರತ ವಿದೇಶದಲ್ಲಿ 3ನೇ ಬೃಹತ್ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ವಿರುದ್ಧದ 2019ರ ಆ್ಯಂಟಿಗುವಾ ಟೆಸ್ಟ್ ಪಂದ್ಯವನ್ನು 318 ರನ್ನುಗಳಿಂದ, ಶ್ರೀಲಂಕಾ ವಿರುದ್ಧದ 2017ರ ಗಾಲೆ ಟೆಸ್ಟ್ ಪಂದ್ಯವನ್ನು 304 ರನ್ನುಗಳಿಂದ ಜಯಿಸಿತ್ತು.
ಆಸ್ಟ್ರೇಲಿಯ ಈ ಶತಮಾನದಲ್ಲಿ ತವರಿನ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 4ನೇ ಸಲ ಸೋಲನುಭವಿಸಿತು. ಹಿಂದಿನ ವಿಜೇತ ತಂಡಗಳೆಂದರೆ ದಕ್ಷಿಣ ಆಫ್ರಿಕಾ (2008 ಮತ್ತು 2016, ಪರ್ತ್) ಮತ್ತು ಭಾರತ (2018, ಅಡಿಲೇಡ್).
ಆಸ್ಟ್ರೇಲಿಯ 2012ರ ಬಳಿಕ ತವರಲ್ಲಿ ದೊಡ್ಡ ಸೋಲನುಭವಿ ಸಿತು. ಅಂದು ದಕ್ಷಿಣ ಆಫ್ರಿಕಾ ಕೈಯಲ್ಲಿ ಪರ್ತ್‌ನಲ್ಲೇ 309 ರನ್ನುಗಳಿಂದ ಎಡವಿತ್ತು.
ಬುಮ್ರಾ ಈ ಪಂದ್ಯದಲ್ಲಿ 72 ರನ್ನಿಗೆ 8 ವಿಕೆಟ್ ಉರುಳಿಸಿದರು. ಇದು ಭಾರತೀಯ ನಾಯಕರೊಬ್ಬರ 4ನೇ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 1983ರ ಅಹ್ಮದಾಬಾದ್ ಪಂದ್ಯದಲ್ಲಿ ಕಪಿಲ್‌ದೇವ್ 135ಕ್ಕೆ 10 ವಿಕೆಟ್ ಕೆಡವಿದ್ದು ದಾಖಲೆ.
ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬುಮ್ರಾ
ಸಂಕ್ಷಿಪ್ತ ಸ್ಕೋರ್
ಭಾರತ: 150 ಮತ್ತು 487-8 ಡಿಕ್ಲೇರ್
ಆಸ್ಟ್ರೇಲಿಯಾ: 104 ಮತ್ತು 238
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.