Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣ; 24 ಗ್ರಾಮಗಳಿಗೆ 9 ಗ್ರಾಮಕರಣಿಕರು; ಗ್ರಾಮಕರಣಿಕರ ನೇಮಕಕ್ಕೆ ಆಗ್ರಹ
Team Udayavani, Nov 25, 2024, 5:30 PM IST
ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಬಳಿ 18.84 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗುರುಪುರ ನಾಡಕಚೇರಿಯ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.
ಕಂದಾವರ ಗ್ರಾಮ ಪಂಚಾಯತ್ನ ಕಟ್ಟಡದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಗುರುಪುರ ನಾಡಕಚೇರಿ ಹಲವಾರು ಸಮಸ್ಯೆಗಳನ್ನು ಕಂಡಿದ್ದು. ಹೆಂಚಿನ ಕಟ್ಟಡವಾದ ಕಾರಣ ಮಳೆ ನೀರು ಸೋರಿ ಕಂಪ್ಯೂಟರ್ಗಳ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಸಮರ್ಪಕ ಸ್ಥಳಾವಕಾಶದ ತೊಂದರೆಯೂ ಇಲ್ಲಿತ್ತು.
ಕಂದಾಯ ಇಲಾಖೆಯೂ ಎಲ್ಲ ಇಲಾಖೆಯ ತಾಯಿ ಎಂದು ಹೇಳಲಾಗುತ್ತಿದ್ದರೂ ಸ್ವಂತ ಕಟ್ಟಡ ಇಲ್ಲದೇ ತೊಂದರೆಯನ್ನು ಅನುಭವಿಸಿತ್ತು ಹಾಗೂ ಗುರುಪುರ ಹೋಬಳಿಯ ಗ್ರಾಮಸ್ಥರಿಗೆ ಸಮಸ್ಯೆಯೂ ಎದುರಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸುದಿನ ಗಮನವೂ ಸೆಳೆದಿತ್ತು.
ವಿದ್ಯುತ್, ಕುಡಿಯುವ ನೀರಿನ ಸಂಪರ್ಕ, ಕಚೇರಿ ಪೀಠೊಪಕರಣ ಹಾಗೂ ಇತರ ಅವಶ್ಯಕತೆ ಸೌಕರ್ಯಗಳು ಬಾಕಿ ಉಳಿದಿವೆ. ಕಟ್ಟಡದ ನಿರ್ಮಾಣವಾಗಿ ಹಲವು ತಿಂಗಳು ಕಳೆದಿವೆ. ಎದುರು ಹುಲ್ಲುಗಳು ಬೆಳೆದಿವೆ. ಮೂಲ ಸೌಕರ್ಯವನ್ನು ಶೀಘ್ರ ಕಲ್ಪಿಸಿ, ಉದ್ಘಾಟನೆಗೊಂಡು ಜನರಿಗೆ ಒಳ್ಳೆಯ ಸೇವೆ ದೊರಕುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಹೆಚ್ಚುತ್ತಿರುವ ಸರಕಾರ ಯೋಜನೆಗಳಿಗೆ ಸಮರ್ಪಕವಾಗಿ ಗ್ರಾಮಸ್ಥರಿಗೆ ಸ್ಪಂದಿಸಲು ಕಂದಾಯ ಇಲಾಖೆಗೆ ತನ್ನ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಜನರಿಗೆ ಹೆಚ್ಚು ಅನುಕೂಲಕರವಾಗಿ ಕಾರ್ಯನಿರ್ವಹಿಸಲು ಸಾಧ್ಯ.
24 ಗ್ರಾಮಗಳಿಗೆ 9 ಗ್ರಾಮಕರಣಿಕರು
24 ಗ್ರಾಮಗಳಲ್ಲಿ ಕೇವಲ 9 ಗ್ರಾಮಕರಣಿಕರು ಈಗ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರಿಗೆ ಅಲೆದಾಟಗಳಿಗೆ ಕಾರಣವಾಗಿದೆ. ಗ್ರಾಮಕರಣಿಕರನ್ನು ನೇಮಿಸುವ ಬಗ್ಗೆ ಗ್ರಾಮಸ್ಥರು ಬೇಡಿಕೆಯನ್ನು ಇಟ್ಟಿದ್ದಾರೆ. ಈ ತನಕ ಯಾವುದೇ ಸ್ಪಂದನೆ ದೊರಕಿಲ್ಲ.
24 ಗ್ರಾಮಗಳ ವ್ಯಾಪ್ತಿ
ಗುರುಪುರ ಹೋಬಳಿಯ 24 ಗ್ರಾಮಗಳು ಗುರುಪುರ ನಾಡಕಚೇರಿಯ ವ್ಯಾಪ್ತಿಗೆ ಬರುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಕುಡುಪು, ಪಚ್ಚನಾಡಿ, ತಿರುವೈಲು ಸಹಿತ 21 ಗ್ರಾಮಗಳಾದ ನೀರುಮಾರ್ಗ, ಅಡ್ಡೂರು, ಮೂಳೂರು, ಬೊಂಡಂತಿಲ, ಮಲ್ಲೂರು, ಉಳಾಯಿಬೆಟ್ಟು, ಬಡಗ ಎಡಪದವು, ಮೂಡುಪೆರಾರ, ಪಡುಪೆರಾರ, ತೆಂಕುಳಿಪಾಡಿ, ಬಡಗುಳಿಪಾಡಿ , ಮೊಗರು, ಅದ್ಯಪಾಡಿ, ಕೊಳಂಬೆ, ಕಂದಾವರ, ಕೊಂಪದವು, ಮುಚ್ಚಾರು, ತೆಂಕ ಎಡಪದವು, ಕಿಲೆಂಜಾರು, ಕೊಳವೂರು, ಮುತ್ತೂರು ಗುರುಪುರ ಹೋಬಳಿ ವ್ಯಾಪ್ತಿಗೆ ಬರುತ್ತದೆ. ಅಡ್ಯಾರು, ಅರ್ಕುಳ ಗ್ರಾಮಗಳು ಈಗ ಇದರಿಂದ ಬೇರ್ಪಟ್ಟಿವೆ.
ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ
ಒಟ್ಟು 18.84 ಲಕ್ಷ ರೂ.ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು 700 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಉಪತಹಶೀಲ್ದಾರರ, ಕಂದಾಯ ನಿರೀಕ್ಷಕರ, ದಾಖಲೆ ಇಡುವ ಕೋಣೆಯನ್ನು ಹೊಂದಿದೆ. ಎದುರಿಗೆ ಕಚೇರಿ ಸಿಬಂದಿಗಳ ಹಾಗೂ ನೆಮ್ಮದಿ ಕೇಂದ್ರದ ಕಚೇರಿಯನ್ನು ಹೊಂದಿದೆ. ಈಗಾಗಲೇ ಈ ಕಟ್ಟಡವನ್ನು ನಿರ್ಮಿತಿ ಕೇಂದ್ರ ಮಂಗಳೂರು ತಹಶೀಲ್ದಾರರಿಗೆ ಹಸ್ತಾಂತರಿಸಿದೆ. ಕಂದಾವರ ಗ್ರಾಮ ಪಂಚಾಯತ್ನಿಂದ ಕಂದಾವರ ಪಡ್ಡಾಯಿ ಪದವು ರಸ್ತೆಯಲ್ಲಿ ಸುಮಾರು 500 ಮೀಟರ್ ದೂರದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣವಾಗಿದ್ದು ಒಟ್ಟು 10 ಸೆಂಟ್ಸು ಜಾಗವನ್ನು ಹೊಂದಿದೆ. ಇದರ ಸಮೀಪದಲ್ಲಿಯೇ ಗುರುಪುರ ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರವೂ ಇದೆ. ಇದರಿಂದ ರೈತರಿಗೆ, ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.