Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಇಂದು ಸಂವಿಧಾನ ದಿನ

Team Udayavani, Nov 26, 2024, 6:45 AM IST

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

1949 ನವೆಂಬರ್‌ 26ರಂದು ಸಂವಿಧಾನ ರಚನಾ ಸಭೆಯಿಂದ ಸ್ವತಂತ್ರ ಭಾರತದ ಸಂವಿಧಾನ ಅಂಗೀಕೃತ ಗೊಂಡಿತ್ತು. ಈ ದಿನವನ್ನೇ ಪ್ರತೀ ವರ್ಷ “ಸಂವಿಧಾನ ದಿನ’ ವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ನಮ್ಮ ಭಾರತ ಸಂವಿಧಾನಕ್ಕೀಗ 75ರ ಹರೆಯ ತುಂಬಿದೆ. ಸಂವಿಧಾನದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಇಲ್ಲೆರಡು ಅಭಿ ಮಾನದ ಬಳ್ಳಿ ಟಿಸಿಲೊಡೆದಿದೆ- ಒಂದು ನಮ್ಮ ನೆರೆಯ ಪಾಕಿಸ್ಥಾನ, ಬಾಂಗ್ಲಾ, ನೇಪಾಲ, ಚೀನ, ಮ್ಯಾನ್ಮಾರ್‌-ಹೀಗೆ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳ ಸಂವಿಧಾನಗಳ ನೆಲೆಗಟ್ಟು ಸಂಪೂರ್ಣ ಕುಸಿದು ಹೊಸ ಹೊಸ ಸಂವಿಧಾನಗಳೇ ರೂಪುಗೊಂಡವು. ಆದರೆ ನಮ್ಮ ಮೂಲ ಹೊತ್ತಗೆ ಭದ್ರ ನೆಲೆಯಲ್ಲಿ ನಮ್ಮ ನಾಡಿನ ನಾಡಿಮಿಡಿತಕ್ಕೆ ಸಂವಾದಿಯಾಗಿ ಮುನ್ನಡೆಯುತ್ತಿದೆ. ಸ್ಥಿರತೆಯನ್ನು ತನ್ನದಾಗಿಸಿದ ವಿಶ್ವದ ಸುದೀರ್ಘ‌ ರಾಜ್ಯಾಂಗ ಘಟನೆ ನಮ್ಮದು ಎಂಬುದು ಹೆಮ್ಮೆಯ ವಿಚಾರ. ಎರಡನೆಯದಾಗಿ, “ಸಂಪೂರ್ಣ ಪ್ರಭುತ್ವ ಸಂಪನ್ನ, ಪ್ರಜಾ ತಂತ್ರೀಯ ಗಣರಾಜ್ಯ’ವಾಗಿ ಪ್ರಸ್ತಾವನೆಯಲ್ಲೇ ಘೋಷಿಸಿದ ನಮ್ಮಿ ಮೂಲ ದಾಖಲೆಯ ರಚನೆಯಲ್ಲಿ ಯಾವುದೇ ವಿದೇಶಿಗರ ಪಾತ್ರವಿಲ್ಲ ಎಂಬುದು.

ಡಾ| ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯ ಸಂವಿಧಾನ ರಚನಾ ಸಭೆ (Constituent Assembly) ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ರ ನೇತಾರಿಕೆಯ ಕರಡು ಸಮಿತಿ (Drafting Committee) ಪರಸ್ಪರ ಪೂರಕವಾಗಿ ವಿಶ್ವದ ಅತ್ಯಂತ ಸುದೀರ್ಘ‌ ಎಂಬ ಹೆಗ್ಗಳಿಕೆಯ ಈ ಹೊತ್ತಗೆಯನ್ನು ಸಿದ್ಧಗೊಳಿಸಿತು. ಸ್ವಾತಂತ್ರ್ಯ ರವಿ ಉದಯ ಈ ನೆಲದಲ್ಲಿ ಘಟಿಸುವ ಮುನ್ನವೇ, ಅಂದರೆ 1946 ಡಿಸೆಂಬರ್‌ 9ರಂದು ಶುಭಾರಂಭಗೊಂಡ ಈ ಪುಸ್ತಕ ರಚನಾ ಪ್ರಕ್ರಿಯೆ ಒಟ್ಟು 2 ವರ್ಷ, 11 ತಿಂಗಳು, 18 ದಿನ ಗಳಲ್ಲಿ ಮುಕ್ತಾಯಗೊಂಡಿತು. ಮೂಲತಃ ಕೈ ಬರಹದಲ್ಲೇ ರಚನೆಗೊಂಡ ಸಂವಿಧಾನ ಈ ನೆಲದ ಸರ್ವಮಾನ್ಯ ದಾಖಲೆ ಎನಿಸಿ ಹೊಸದಿಲ್ಲಿಯ ಸಂಸತ್‌ ಭವನದಲ್ಲಿ ಸಂವಿಧಾನ ರಚನಾ ಸಭೆಯ ಸರ್ವ ಸದಸ್ಯರ ಹಸ್ತಾಕ್ಷರದೊಂದಿಗೆ ನೆಲೆಯೂರಿತು. ಪ್ರಪ್ರಥಮ ಗಣರಾಜ್ಯೋತ್ಸವ ಎಂಬ ಆಚರಣೆಯ 1950 ಜನವರಿ 26ರಂದೇ ಈ ಮೂಲಭೂತ ಹೊತ್ತಗೆ ರಾಷ್ಟ್ರಾರ್ಪಣೆ ಗೊಂಡಿತು. 1930ರ ಜನವರಿ 26 ರಂದು ಲಾಹೋರಿನ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ “ಪೂರ್ಣ ಸ್ವರಾಜ್ಯವೇ ನಮ್ಮ ಗುರಿ’ ಎಂಬ ಘೋಷಣೆ ಮೊಳಗಿದ ದಿನವನ್ನು ಶಾಶ್ವತೀಕರಿಸುವ ನೆಲೆಯಲ್ಲಿ ಈ ನೆಲದ ಆಶಯ ಹೊತ್ತ ನಮ್ಮ ಸಂವಿಧಾನ ಲಿಖೀತ ರೂಪದಲ್ಲಿ ಹೊರ ಹೊಮ್ಮಿತು.

“ದೇವರ ಇರುವಿಕೆ ನಮ್ಮ ಚಿತ್ತ ಭಿತ್ತಿಯಲ್ಲಿ; ಹೃದ ಯದಲ್ಲಿ’; ಅದೇ ರೀತಿ, ನಮ್ಮ ಭಾರತ ರಾಜ್ಯಾಂಗ ಘಟನೆ ಯ ನೈಜ ಅಸ್ತಿತ್ವ ಇರುವುದು ನಮ್ಮಿà ವಿಶಾಲ ಪ್ರಜಾ ಕೋಟಿ ಯ ಮನದಲ್ಲಿ; ನೆಮ್ಮದಿಯ, ಸಂಘಟಿತ ಬದುಕಿನ ಆಶಯದ ಭದ್ರ ನೆಲೆಯಲ್ಲಿ, ಸರ್ವೋಚ್ಚ ನ್ಯಾಯಾಲಯ ತನ್ನ ಹಲವಾರು ತೀರ್ಪುಗಳಲ್ಲಿ ಪುನರುತ್ಛರಿಸುತ್ತಲೇ ಇರುವಂತೆ ಸಮಗ್ರ ಭಾರತದ ಸರ್ವೋನ್ನತ ಅಂತೆಯೇ ಸರ್ವವ್ಯಾಪಿ ಹೊತ್ತಗೆ ನಮ್ಮ ಸಂವಿಧಾನ. ಅದನ್ನು ಉಲ್ಲಂ ಸಲು ಕೇಂದ್ರ ಅಥವಾ ರಾಜ್ಯ ಸರಕಾರಕ್ಕಾಗಲಿ, ಶಾಸಕಾಂಗ, ಕಾರ್ಯಾಂಗ ಅಥವಾ ನ್ಯಾಯಾಂಗಕ್ಕಾಗಲಿ ಅಧಿಕಾರ ವಿಲ್ಲ. ಸಂಕ್ಷಿಪ್ತವಾಗಿ ಉಲ್ಲೇಖಿಸುವುದಿದ್ದರೆ ದಿಲ್ಲಿಯಿಂದ ಹಳ್ಳಿಯ ವರೆಗೆ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ವರೆಗೂ ಅಧಿಕಾರದ, ಕರ್ತವ್ಯಗಳ ನಿಖರ ಮಾಹಿತಿಯ ಆಕರವೇ ಸಂವಿಧಾನ. ಮಕ್ಕಳಿಗೆ ಉಣ ಬಡಿಸುವ ತಾಯಿಯಂತೆ ಅಥವಾ ಕಾಲುವೆಗಳಿಗೆ ನೀರುಣಿಸುವ ಅಪಾರ ಜಲಾಶಯದಂತೆ ಸಂವಿಧಾನ ಎಂಬುದಾಗಿ ಉಪಮೆಗಳನ್ನು ನೀಡ ಬಹುದಾಗಿದೆ. ಈ ನೂರಕ್ಕೂ ಅಧಿಕ ತಿದ್ದುಪಡಿಯನ್ನು ಅಂತರ್ಗತಗೊಳಿಸಿಯೂ ತನ್ನತನ ಉಳಿಸಿಕೊಂಡು ಇನ್ನೂ ಹಲವು ಶತಮಾನಗಳ ವರೆಗಿನ ಭವಿಷ್ಯಕ್ಕೂ ಭಾಷ್ಯ ಬರೆಯಲು ಶಕ್ತ ಎನಿಸಿದ ನಮ್ಮ ಸಂವಿಧಾನದ ಭದ್ರತೆಗೆ ಜನಮನದ ಸಾಮೂಹಿಕ ವಿವೇಚನೆ ಹಾಗೂ ಸಂಕಲ್ಪವೇ ಮೂಲಾಧಾರ.

ಸುದೀರ್ಘ‌ ರಾಜ ಪದ್ಧತಿ, ಪರಕೀಯರ ಆಳ್ವಿಕೆ ಇವೆಲ್ಲ ಗತ ಇತಿಹಾಸದ ಕಾಲಚಕ್ರದ ಪರಿಭ್ರಮಣೆಯೊಂದಿಗೆ “ನವ ಯುಗದ ಸೂತ್ರಧಾರಿ’ ಎನಿಸಿದ ಹೊತ್ತಗೆಯೇ ನಮ್ಮ ಭಾರತ ಸಂವಿಧಾನ. ಇದರಲ್ಲಿ ಮಿಂಚಿದ ಮೂಲ ಚಿಂತನೆಯನ್ನು ಮೆಲುಕು ಹಾಕುವ ಹಾಗೂ ಅನುಸಂಧಾನ ಗಳಿಸುವ ಸಾಮೂಹಿಕ ಯತ್ನದಲ್ಲಿ ಈ ನೆಲದ ಶಕ್ತಿ ಅಡಗಿದೆ. ಪ್ರಜಾತಂತ್ರದ ಭದ್ರ ನೆಲೆಯಲ್ಲಿ ಜನಮನದ ಆಶಯವನ್ನು ಈ ಪುಸ್ತಕದ ಪ್ರಸ್ತಾವನೆಯೇ (Preamble) ಹೊಮ್ಮಿಸುತ್ತದೆ. ಪ್ರಥಮ ಅಧ್ಯಾಯ ದಲ್ಲೇ , ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಈ ಒಕ್ಕೂಟ(Union)ದ ಹೊರಗೆ ಕಾಲಿರಿಸುವ ಸಾಧ್ಯತೆಯನ್ನೇ ಇಲ್ಲವಾಗಿಸಿದೆ. ಮಾತ್ರವಲ್ಲ ಜಮ್ಮು- ಕಾಶ್ಮೀರದ 370ನೇ ವಿಧಿಯಂತಹ ಶಿಥಿಲತೆಯ ದ್ವಾರವನ್ನೂ ಮುಚ್ಚಿ ಸಮಗ್ರತೆಯನ್ನು ಕಾಯ್ದುಕೊಳ್ಳುವ ಧೃಡ ಹೆಜ್ಜೆಗೆ ಸ್ಪಂದಿಸಿದೆ.

ವಿಶ್ವದ ಜನಸಂಖ್ಯಾತ್ಮಕ ಅತ್ಯಂತ ಹಿರಿಯ ಪ್ರಜಾಪ್ರಭುತ್ವ ರಾಷ್ಟ್ರ ಸಮುದಾಯದ ಬಗೆಗಿನ ಪೌರತ್ವದ ವ್ಯಾಖ್ಯೆ ಎರಡನೇ ವಿಭಾಗದಲ್ಲಿದೆ. ರಾಷ್ಟ್ರದ ಬಿಡುಗಡೆಯ ಭಾಗ್ಯ ಪ್ರತಿಯೊಂದು ಮನೆಯ ಬಾಗಿಲಿಗೂ, ಮನದ ಭಾವನೆಗೂ ತಲುಪುವಂತಾಗಲಿ ಎಂಬ ಆಶಯ ಮೂರನೇ ವಿಭಾಗದ ಆರು ಮೂಲಭೂತ ಹಕ್ಕುಗಳಲ್ಲಿ ತುಂಬಿ ನಿಂತಿದೆ. ಮಾತ್ರವಲ್ಲ, ಸುಪ್ರೀಂ ಕೋರ್ಟ್‌ನ ವಿಶ್ಲೇಷಣೆಯಲ್ಲಿ, ಬದುಕುವ ಹಕ್ಕಿನ ವ್ಯಾಪ್ತಿ, ಶುದ್ಧಗಾಳಿ, ನೀರು, ಪರಿಸರ, ಉದ್ಯೋಗ- ಹೀಗೆ ಹಿರಿದು ಗೊಳ್ಳುತ್ತಾ ಸಾಗಿದೆ. ಇತರ ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರದ ರಾಷ್ಟ್ರ ನಿರ್ದೇಶನ ತತ್ತ Ìಗಳು ಎಂಬ ಮಾರ್ಗದರ್ಶಿ ಸೂತ್ರಗಳು ನಮ್ಮಿ ಹೊತ್ತಗೆಯ ಪ್ರತ್ಯೇಕ ವಿಭಾಗವಾಗಿ ಸೇರಿಕೊಂಡಿದೆ. 1976ರ 42ನೇ ತಿದ್ದುಪಡಿಯ ಮೂಲಕ ಮೂಲಭೂತ ಕರ್ತವ್ಯಗಳ ಗೊಂಚಲನ್ನೂ ಈ ಹೊತ್ತಗೆ ತುಂಬಿ ನಿಂತಿದೆ.

ನಮ್ಮ ಸಂವಿಧಾನ ವಿಶಾಲ ರಾಷ್ಟ್ರದ ಸಂವಾದಿಯಾಗಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ರಚನೆ, ಅವುಗಳ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಪರಿಧಿ ಎಲ್ಲವನ್ನೂ ಸುಂದರವಾಗಿ ವಿಶದೀಕರಿಸಿದ ಬೃಹತ್‌ ದಾಖಲೆ. ಜನತೆ ಮತ್ತು ಸರಕಾರ, ಅಂತೆಯೇ ಜನಪ್ರತಿನಿಧಿಗಳನ್ನು ಆಯ್ಕೆಗೊಳಿಸುವ ವಿಧಾನ, ಶಾಸಕಾಂಗದ ಅಧಿಕಾರ ವಲಯವನ್ನು ನಿಖರವಾಗಿ ಇದು ವಿವರಿಸಿದೆ. ಕಾರ್ಯಾಂಗ ಸಚಿವ ಸಂಪುಟದ ರಾಜಕೀಯ ಕಾರ್ಯಾಂಗ ಹಾಗೂ ಅಧಿಕಾರಿ ವರ್ಗದ ಶಾಶ್ವತ ಕಾರ್ಯಾಂಗ ಎಂಬ ವಿವರಣೆಯನ್ನು ಅಚ್ಚುಕಟ್ಟಾಗಿ ನಮ್ಮ ಘಟನೆ ನಮೂದಿಸಿದೆ. ಮಾತ್ರವಲ್ಲ ಕೇಂದ್ರದಲ್ಲಿ ರಾಷ್ಟ್ರಪತಿ ಹಾಗೂ ರಾಜ್ಯದಲ್ಲಿ ರಾಜ್ಯಪಾಲರ ಉನ್ನತ ಸ್ಥಾನ, ಜವಾಬ್ದಾರಿ ಹಾಗೂ ಜನಮನದ ಆಶಯಕ್ಕೆ ಹೇಗೆ, ಯಾವಾಗ ಮಿಡಿಯತಕ್ಕದ್ದು, ಎನ್ನುವ ಅಂತರ್ಗತ ಸೂಚನೆಯನ್ನೂ ಈ ಹೊತ್ತಗೆ ನೀಡುತ್ತದೆ. ಇನ್ನು ಅಧಿಕಾರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ, ಸಂವಿಧಾನವನ್ನು “ಇದಮಿತ್ಥಂ’ ಎಂದು ವ್ಯಾಖ್ಯಾನಿಸುವಲ್ಲಿ ಸಮಗ್ರ ವ್ಯವಸ್ಥೆಯನ್ನು ಕಾಪಿಡುವಲ್ಲಿ, ಪ್ರಜಾ ಸಮುದಾಯದ ಹಕ್ಕುಗಳನ್ನು ಸುರಕ್ಷಿಸುವಲ್ಲಿ ನ್ಯಾಯಾಂಗ ಪಾತ್ರದ ವಿವರಣೆಯೂ ಇದರಲ್ಲಿ ತುಂಬಿದೆ.

ಇದಲ್ಲದೆ, ನಮ್ಮ ಭಾರತ ಸಂವಿಧಾನ ಹತ್ತು ಹಲವು ವೈಶಿಷ್ಟéಗಳ ಖನಿ. ಸ್ವತಃ ತಿದ್ದುಪಡಿಯ ವಿಧಿ ವಿಧಾನಗಳ 368ನೇ ವಿಧಿ, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ, 352, 356 ಹಾಗೂ 360ನೇ ವಿಧಿಗಳು, ಪಂಚಾಯತ್‌ ರಾಜ್ಯ ವ್ಯವಸ್ಥೆಯ ರೇಖಾ ಚಿತ್ರಣ, ಕೇಂದ್ರ ರಾಜ್ಯಗಳಲ್ಲಿನ ಅಧಿಕಾರ ಹಂಚಿಕೆಯ ಸೂಕ್ಷ್ಮತಮ ವಿಚಾರಗಳನ್ನು ಇದು ಪಡಿ ಮೂಡಿಸಿದೆ. ಸ್ವತಂತ್ರ ಚುನಾವಣ ಆಯೋಗ, ಸಹಕಾರಿ ಸಂಘಗಳ ಬಗೆಗೂ ಸೇರಿ ಹತ್ತು ಹಲವು ಸುಂದರ, ಪರಿಷ್ಕೃತ ವಿವರಣೆಗಳ ಗುಚ್ಛವೇ ನಮ್ಮ ಸಂವಿಧಾನ.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಟಾಪ್ ನ್ಯೂಸ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.