Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್‌ ದೀಪಗಳಿಂದ ಶೃಂಗಾರ

ಇಂದಿನಿಂದ ಕಾರ್ತಿಕ ಮಾಸದ ದೀಪೋತ್ಸವ ಸಂಭ್ರಮ

Team Udayavani, Nov 26, 2024, 12:43 PM IST

1(1

ಬೆಳ್ತಂಗಡಿ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಮಂಗಳ ಪರ್ವದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ನಡೆಯುವ ಲಕ್ಷದೀಪೋತ್ಸವ ವೈಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪ್ರಯುಕ್ತ ಕ್ಷೇತ್ರವನ್ನು ವಿದ್ಯುದ್ದೀಪ ಹಾಗೂ ನಗರಲಂಕಾರದಿಂದ ಸಿಂಗರಿಸಿದ್ದು, ಭಕ್ತರನ್ನು ಕಣ್ಮನ ಸೆಳೆಯುವಂತಿದೆ.

ನ.26 (ಇಂದಿನಿಂದ) ನ.30ರ ವರೆಗೆ ನಡೆಯುವ ಲಕ್ಷದೀಪೋತ್ಸವ ಸಂಭ್ರಮಕ್ಕೆ ನಾಡಿನಾದ್ಯಂತ ಲಕ್ಷೋಪಮಂದಿ ಸೇರುತ್ತಾರೆ. ವರ್ಷದಲ್ಲಿ ಒಂದು ಬಾರಿ ದೇವರು ಗರ್ಭಗುಡಿಯಿಂದ ಹೊರಬಂದು ವಿವಿಧ ಉತ್ಸವದ ಮೂಲಕ ನಾಡಿನ ಭಕ್ತರಿಗೆ ದರ್ಶನ ನೀಡುತ್ತಾರೆ. ಉಳಿದ ಸಮಯದಲ್ಲಿ ಭಕ್ತರ ಮನೋರಂಜನೆಗಾಗಿ ಸಾಂಸ್ಕೃತಿಕ ಸಹಿತ ವಿವಿಧ ಪ್ರಕಾರದ ಸ್ಟಾಲ್‌ಗ‌ಳು, ಕೊನೆಗೆ ಸರ್ವಧರ್ಮ ಸಮ್ಮೇಳನದ ಮೂಲಕ ಜ್ಞಾನವ ಉಣಬಡಿಸುತ್ತಾ ಬಂದಿದೆ.

ಧರ್ಮಸ್ಥಳವು ಸರ್ವಧರ್ಮಗಳ ನೆಲೆವೀಡು. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪುಣ್ಯಭೂಮಿ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಇಲ್ಲಿ ನಿತ್ಯೋತ್ಸವ. ಇಲ್ಲಿನ ವಿಶಿಷ್ಠವಾದ ನ್ಯಾಯದಾನ, ಆಣೆಮಾತು ತೀರ್ಮಾನದಿಂದ ಅನೇಕ ಕುಟುಂಬಗಳ ಸಾಂಸಾರಿಕ, ವ್ಯವಹಾರ ಸಮಸ್ಯೆಗಳು ಸುಲಲಿತವಾಗಿ, ಸೌಹಾರ್ದಯುತವಾಗಿ ಪರಿಹಾರವಾಗಿ ಎಲರೂ ಪ್ರೀತಿ-ವಿಶ್ವಾಸದಿಂದ ಸುಖ-ಶಾಂತಿಯ ಜೀವನ ನಡೆಸುತ್ತಿದ್ದಾರೆ.

ಎಲ್ಲೆಡೆ ಆಕರ್ಷಕ ಅಲಂಕಾರ
ಧರ್ಮಸ್ಥಳದಲ್ಲಿ ದೇವಸ್ಥಾನ, ಬಸದಿ, ವಸತಿಛತ್ರಗಳು, ಪ್ರವೇಶದ್ವಾರ, ಉದ್ಯಾನ ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುದ್ದೀಪಗಳು ಹಾಗೂ ಸ್ವಾಗತ ಫಲಕಗಳನ್ನು ಹಾಕಲಾಗಿದೆ.

ಹೊಸಕಟ್ಟೆ ಉತ್ಸವದೊಂದಿಗೆ ಆರಂಭ
ಇಂದು ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ. ಮಂಗಳವಾರ ಅಪರಾಹ್ನ ಮೂರು ಗಂಟೆಗೆ 25 ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಉಜಿರೆಯಿಂದ ಹೊರಟು ಧರ್ಮಸ್ಥಳಕ್ಕೆ ಭಜನೆ, ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಬರುತ್ತಾರೆ. ಶಾಸಕ ಹರೀಶ್‌ ಪೂಂಜ ಮತ್ತು ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್‌ ಕೂಡಾ ಪಾದಯಾತ್ರೆಯಲ್ಲಿ ಭಾಗವಹಿಸುವರು. ಸಂಜೆ 7 ಗಂಟೆಗೆ ಹೆಗ್ಗಡೆಯವರು ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರಿಗೆ ಸಂದೇಶ ನೀಡುವರು.

ಇಂದಿನಿಂದ ವಸ್ತು ಪ್ರದರ್ಶನ
ನ.26 ರಿಂದ 30ರ ವರೆಗೆ ಪ್ರೌಢಶಾಲಾ ಆವರಣದಲ್ಲಿ ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿರುವ ರಾಜ್ಯಮಟ್ಟದ ಆಕರ್ಷಕ ವಸ್ತುಪ್ರದರ್ಶನ ಆಯೋಜಿಸಿದ್ದು, ಎಲ್ಲರಿಗೂ ಪ್ರವೇಶ ಉಚಿತವಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲೆಡೆಯಿಂದ ವಿಶೇಷ ಬಸ್‌
ಪ್ರತೀ ವರ್ಷದಂತೆ ಲಕ್ಷದೀಪೋತ್ಸವದ ದಿನ ಶನಿವಾರ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಧರ್ಮಸ್ಥಳಕ್ಕೆ ಬರುತ್ತಾರೆ. ಕೆ.ಎಸ್‌.ಆರ್‌.ಟಿ.ಸಿ. ನಾಡಿನ ವಿವಿಧ ಊರುಗಳಿಂದ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ. ಹಲವು ಮಂದಿ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಾರೆ. ಕೊನೆ ದಿನ ಭಕ್ತರಿಂದ ಲಕ್ಷಕ್ಕೂ ಅಧಿಕ ಮಂದಿಗೆ ಉಚಿತ ವಿವಿಧ ಭಗೆಯ ಭೋಜನ ವ್ಯವಸ್ಥೆಯು ಅನ್ನಪೂರ್ಣ ಛತ್ರದ ಹಿಂಭಾಗ ನಡೆಯುವುದು ವಿಶೇಷವಾಗಿದೆ.

ಪ್ರತಿದಿನ ಉತ್ಸವ
ಮಂಗಳವಾರ ರಾತ್ರಿ ಹೊಸಕಟ್ಟೆ ಉತ್ಸವ, ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ, ಗುರುವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ಮತ್ತು ಶನಿವಾರ ರಾತ್ರಿ ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯುತ್ತದೆ.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.