Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ
Team Udayavani, Nov 26, 2024, 5:52 PM IST
ನನ್ನ ಕನಸಿನ ಪ್ರಕೃತಿಯಲ್ಲಿ ಅಲ್ಲಿ ಪ್ರಾಣಿ-ಪಕ್ಷಿಗಳು, ಬೆಟ್ಟಗುಡ್ಡಗಳು, ಚಿಲಿಪಿಲಿ ಗಾನ, ಜತೆಗೆ ತಂಗಾಳಿ ಅಲ್ಲೊಂದು ಪುಟ್ಟ ಮನೆ. ಆ ಪ್ರಕೃತಿ ನಿಶ್ಯಬ್ದವಾಗಿ ತನ್ನ ಕೆಲಸದಲ್ಲಿ ಲೀನವಾಗಿತ್ತು.
ಎತ್ತ ನೋಡಿದರೂ ಬರೀ ಹಸಿರು. ಆಕೆ ಅದೆಷ್ಟು ಸುಂದರವಾಗಿ ಕಾಣುತ್ತಿದ್ದಳು. ನನಗೆ ಒಂದು ಬಾರಿ ಮೈ ಜುಮ್ ಎಂದಿತ್ತು. ತನ್ನ ಪಾಡಿಗೆ ಹರಿಯುವ ನದಿ, ಆ ನದಿಯಲ್ಲಿ ಈಜಾಡುವ ಪುಟ್ಟ ಮೀನುಗಳು, ಸುಂದರ ತಾವರೆ ಹೂಗಳು, ನಾನು ಆ ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ ಹಾಗೆ ಅರೇ ನಿದ್ರೆಗೆ ಜಾರಿದೆ. ಅದು ಎಷ್ಟೊಂದು ಸುಮಧುರ ನಿದ್ರೆ ಗೊತ್ತೇಆ ಪ್ರಕೃತಿ ಮಾತೆ ನನ್ನನ್ನು ಮಾಯ ಲೋಕವೊಂದಕ್ಕೆ ಕೊಂಡೊಯ್ದಿದ್ದಳು.
ನನ್ನ ಹಣೆಯ ಮೇಲೆ ಒಂದು ಇಬ್ಬನಿ ಬಿದ್ದಾಗ ಎಚ್ಚರಗೊಂಡೆ. ತಾಯಿ ಮಗುವನ್ನು ಲಲ್ಲಗೆರೆದು ಎಬ್ಬಿಸುತ್ತಾಳಲ್ಲಾ ಆ ಅನುಭವ. ಎದ್ದವಳೇ ಪ್ರಕೃತಿಯ ಮಡಿಲಲ್ಲಿ ಕುಳಿತೆ, ನೋಡುತ್ತಾ ನನ್ನಲ್ಲಿ ನಾನೇ ಕಳೆದು ಹೋದೆ. ನನಗೆ ಪ್ರಕೃತಿ ಮಾತೆಯ ಸೊಬಗನ್ನು ವರ್ಣಿಸಲು ಪದಗಳೇ ಸಿಗಲಿಲ್ಲ. ಸ್ವರ್ಗವೆಂದರೆ ಅದೇ ಇರಬೇಕು.
ಪ್ರಕೃತಿ ಮಾತೆಗೆ ಒಂದಷ್ಟು ನೋವಾದರೂ ಅದು ನನಗೇ ಆದ ಭಾವ.
-ಅನುಶ್ರೀ ಆರ್
ವಿ.ವಿ. ಕಾಲೇಜು ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.