BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Team Udayavani, Nov 27, 2024, 3:23 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ರಾಜ – ಮಹಾರಾಣಿ ಪಟ್ಟಕ್ಕಾಗಿ ಮಾತಿನ ವಾಗ್ವಾದ ನಡೆದಿದೆ. ಸ್ನೇಹಿತರಂತಿದ್ದ ಸ್ಪರ್ಧಿಗಳ ನಡುವೆ ಬಿರುಕು ಕಾಣಿಸಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಮಂಜು (Ugram Manju) ಅವರು ಮಹಾರಾಜನಾಗಿ ಕಾಣಿಸಿಕೊಂಡಿದ್ದಾರೆ. ಅವರ ಆಜ್ಞೆಯಂತೆ ಮನೆಮಂದಿ ನಡೆದುಕೊಳ್ಳಬೇಕು. ಮನೆ ಕೆಲಸದಿಂದ ಹಿಡಿದು ನಾಮಿನೇಷನ್‌ವರೆಗೆ ಮಂಜು ತಮ್ಮ ಮಹಾರಾಜನ ಅಧಿಕಾರವನ್ನು ಬಳಸಿದ್ದಾರೆ.
ಇದನ್ನೂ ಓದಿ: Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
ಮಹಾರಾಜ ಮಂಜು ಅವರ ಅಧಿಕಾರ ಕಸಿದುಕೊಳ್ಳಲು ಯುವರಾಣಿಯಾಗಿ ಮೋಕ್ಷಿತಾ (Mokshitha Pai) ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮಹಾರಾಣಿ ಅವರು ಕಂಡ ಕೂಡಲೇ ಅವರಿಗೆ ತಲೆಬಾಗಬೇಕೆಂದು ಸುರೇಶ್ ಅವರು ಉಳಿದವರಿಗೆ ಹೇಳಿದ್ದಾರೆ. ಇದಕ್ಕೆ ಗೌತಮಿ ಅವರು ಯಾರು ಅಂತ ತಲೆಬಾಗಿಸಬೇಕು. ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಿದ್ದೇವೆ ಅಂಥ ಅರ್ಥ ಎಂದು ಹೇಳಿದ್ದಾರೆ.
ಇದು ಪಟ್ಟದ ಮೇಲಿನ ಸಿಟ್ಟಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/tPSOwQvyxH
— Colors Kannada (@ColorsKannada) November 27, 2024
ನಾಲಗೆಗೆ ಮೆತ್ತಿಕೊಂಡು, ನರಿ ಕಣ್ಣೀರು ಹಾಕಿಕೊಂಡು ಆಡಿದ್ದಲ್ಲ. ಕೊಟ್ಟಿರುವ ಭಿಕ್ಷೆ ಯಾರ ಯಾರ ಯೋಗ್ಯತೆ ಏನಂಥ ನಮಗೆ ಗೊತ್ತಿದೆ ಎಂದು ಮಂಜು ಮೋಕ್ಷಿತಾ ಮೇಲೆ ರೇಗಾಡಿದ್ದಾರೆ. ಮಂಜು ಅವರಿಗೆ ಹಾಡಿದ ʼಆಕಾಶದಲ್ಲಿ..ʼ ಹಾಡನ್ನು ವ್ಯಂಗ್ಯವಾಗಿ ಹಾಡಿ ತೋರಿಸಿದ್ದಾರೆ.
ಇದಕ್ಕೆ ಸಿಟ್ಟಾದ ಮೋಕ್ಷಿತಾ ನೀವೆಲ್ಲ ನನಗೆ ಭಿಕ್ಷೆ ಕೊಟ್ಟಿರುವುದು ಬಿಗ್ ಬಾಸ್ ಕೊಟ್ಟಿರುವುದು ಎಂದಿದ್ದಾರೆ. ಹಾಡನ್ನು ವ್ಯಂಗ್ಯವಾಗಿ ಹಾಡಿದ್ದಕ್ಕೆ ʼಥೂʼ ಎಂದು ಮಂಜುಗೆ ಮೋಕ್ಷಿತಾ ಹೇಳಿದ್ದಾರೆ.
ಈ ಸಂಚಿಕೆ ಬುಧವಾರ ರಾತ್ರಿ (ನ.27ರಂದು) ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.