Simple Life: ಬದುಕು ನಿರಾಡಂಬರವಾಗಿರಲಿ


Team Udayavani, Nov 27, 2024, 3:43 PM IST

11-uv-fusion

ಆಡಂಬರದ ಬದುಕು ಶಾಶ್ವತವಲ್ಲವೆಂದು ಅರಿತರೂ ಜನಕ್ಕೆ ಆಡಂಬರವೆಂದರೆ ಪಂಚಪ್ರಾಣ. ದುಡಿಯುವ ಮೂರುಕಾಸಿನಲ್ಲಿ ಹಾಗಿರಬೇಕು ಹೀಗಿರಬೇಕು ಎಂದೆಲ್ಲ ಚಿಂತಿಸಿ ಆಡಂಬರದಲ್ಲಿ ಬದುಕಬೇಕೆಂಬ ಮಹದಾಸೆ ಹೊತ್ತು ಜೀವನ ಸಾಗಿಸುತ್ತಾರೆ. ಅಷ್ಟಕ್ಕೂ ಆಡಂಬರ ಬೇಕು ಎಷ್ಟುಬೇಕು ಅಷ್ಟಿರಲಿ ದುಡಿದದ್ದಕ್ಕಿಂತ ಖರ್ಚು ಹೆಚ್ಚಾದರೆ ಅದು ಅತ್ಯಾಡಂಬರವಾಗುತ್ತದೆ. ಹಾಸಿಗೆಯಿದ್ದಷ್ಟೆ ಕಾಲುಚಾಚು ಎಂದು ಹಿರಿಯರು ಹೇಳಿಲ್ಲವೆ.

ಒಬ್ಬೊಬ್ಬರ ಸ್ಥಿತಿ ಹೀಗಿರುತ್ತದೆ. ಅವರನ್ನು ನೋಡಿದರೆ ಅವರ ಮುಂದೆ ನಾವೇನೂ ಅಲ್ಲವೆಂಬ ಭಾವನೆ ಕ್ಷಣದಲ್ಲಿ ಮನದೊಳಗೆ ಹಾಯುತ್ತದೆ. ಅವರ ವೇಷ ಭೂಷಣ,ಹಾವ ಭಾವ, ಧರಿಸುವ ಕನ್ನಡಕ, ಬಳಸುವ ಬೈಕ್‌, ಹಾಕುವ ಶೂ ಎಲ್ಲವೂ ಬ್ರ್ಯಾಂಡೆಡ್‌ ಎಂದು ತೋರಿಕೆಗೆ ಸಾಕಷ್ಟು ರೂಪಾಯಿಗಳ ಖರ್ಚು ಮಾಡಿ ಬಾಳುವುದು ಅವಶ್ಯವೆ..? ಇರಲಿ ಎಲ್ಲವೂ ಬೇಕು ಇಲ್ಲದೆ ನಡೆಯುವುದಿಲ್ಲ ಹಾಗೆಂದು ಅತಿಯಾದರೂ ಕೂಡ ನಡೆಯುವುದಿಲ್ಲ. ಐದುನೂರು ದುಡಿದು ಸಾವಿರ ಖರ್ಚು ಮಾಡಿದರೆ ಹೇಗೆ ಹೀಗಾದರೆ ಅಗತ್ಯಕ್ಕಿಂತ ಖರ್ಚುಹೆಚ್ಚಾಗಿ ಸಾಲಗಾರನಾಗಬೇಕಾಗುತ್ತದೆ.

ನಡೆದಾಡುವ ದೇವರೆಂದು ಖ್ಯಾತಿಯಾದ ಸಿದ್ದೇಶ್ವರ ಸ್ವಾಮಿಗಳು ಹಾಕುವ ಬಟ್ಟೆಗೆ ಕಿಸೆಯಿಲ್ಲ ಎಂದರೆ ನಂಬಲಾದೀತೆ ನಂಬಲೆಬೇಕು ಏಕೆಂದರೆ ಜೀವನುದ್ದಕ್ಕೂ ನಿರಾಡಂಬರರಾಗಿ ಬದುಕಿದ ಮಹಾನ್‌ ಸಾಧಕರು ಇವರು. ಉಳಿದೆಲ್ಲವರ ಮಧ್ಯೆ ಇವರು ವಿಶೇಷವಾಗಿ ಕಾಣುವ ಮಹಾನ ಚೇತನರಿವರು. ಹಾಗೆ ನೋಡಿದರೆ ಇವರು ಐಶಾರಾಮಿ ಜೀವನದಲ್ಲಿ ಬದುಕಬಹುದಿತ್ತು ಇವರಿಗೆ ಗೊತ್ತಿದೆ ಜೀವನದಲ್ಲಿ ಎಲ್ಲವೂ ನಶ್ವರವೆಂದು ಹಾಗಾಗಿ ಸರಳತೆಯ ಹಾದಿಯಲಿ ಬದುಕಿದ ಪುಣ್ಯಾತ್ಮರಿವರು.

ನಾವು ನೀವೆಲ್ಲ ಕೇವಲ ಒಂದು ಚಿಕ್ಕ ನೌಕರಿ ಸಿಕ್ಕರೆ ಸಾಕು ದುಬಾರಿ ವೆಚ್ಚದ ಬೈಕನ್ನು ಹಾಗೂ ಬಟ್ಟೆಗಳನ್ನು ಖರಿದೀಸಿ ನಾವೆ ಗ್ರೇಟ್‌ ಎನ್ನುವವರ ತರ ಬಾಳಲು ಶುರುಮಾಡುತ್ತೇವೆ. ಇದೇನು ದೊಡ್ಡದಲ್ಲ ಸಾಧನೆ ಇರಬಹುದು ಆದರೆ ಆಡಂಬರ ಎಷ್ಟು ದಿನ ಹೇಳಿ, ಇದಕ್ಕೂ ಒಂದು ಕೊನೆಯಿಲ್ಲವೆ. ಆಡಂಬರದಲ್ಲಿ ಬದುಕಬೇಕೆಂದು ನನ್ನ ಸ್ನೇಹಿತರೊಬ್ಬರು ಕಳೆದ ಹತ್ತುವರ್ಷಗಳಿಂದ ನಿತ್ಯವೂ ಹೇಳುತ್ತಲೆ ಇದ್ದರೂ ವೃತ್ತಿಯಿಂದ ಇಬ್ಬರೂ ಪ್ರೌಢಶಾಲಾ ಶಿಕ್ಷಕರಿದ್ದೆವು. ದುಬಾರಿ ವಸ್ತುಗಳನು ಖರೀದಿಸಿ ಹಾಗಿರಬೇಕು..? ಹೀಗಿರಬೇಕು..? ಎಂದೆಲ್ಲಾ ಹೇಳಿ ಈಗ ಅಹಮ್ಮಿನ ಕುದುರೆಯಾಗಿದ್ದಾನೆ. ಆಡಂಬರ  ಮಸ್ತಕಕೆ ಅಮಲೇರಿಸಿ ಕಡಿವಾಣವಿಲ್ಲದ ಕುದುರೆಯಂತೆ ಓಡಿಸಿ ಕೊನೆಗೊಂದು ದಿನ ಕೊಳ್ಳಕ್ಕೆ ಕೆಡುವುತ್ತದೆ.

ಸಮಾಜದಲ್ಲಿ ನಮ್ಮದೆ ವಿಶೇಷತೆಯಿಂದ ಗುರುತಿಸಿಕೊಳ್ಳಬೇಕು ನಿಜ ಆದರೆ ತೀರಾ ಶೋಕಿ ಜೀವನದಿಂದಲ್ಲ. ಇದರಿಂದ ಜನರು ನಿರಾಕರಣೆ ಹಾಗೂ ದೂಷಣೆ ಮಾಡುತ್ತಾರೆ.ಶಾಶ್ವತವಲ್ಲದ ಬದುಕಿಗೆ ಏಕಿಷ್ಟು ಆಡಂಬರ ಸತ್ತಾಗ ಚಿತೆ ಮೇಲೆ ತುಂಡು ಬಟ್ಟೆಯಿರದೆ ಮಲಗಿಸುತ್ತಾರೆ ಅದನ್ನು ತಿಳಿದು ತಿಳಿದು ಹೀಗೆ ಮೆರೆವ ಜನರಿಗೆ ಹೇಗೆ ಹೇಳಬೇಕೊ ಗೊತ್ತಾಗುತ್ತಿಲ್ಲ. ಇರುವಷ್ಟು ದಿನ ಮನುಷ್ಯ ನಿರಾಡಂಬರವಾಗಿ ಎಲ್ಲರೊಂದಿಗೆ ಬೆರೆಯುತ್ತ ಸಂತಸವನ್ನು ಹಂಚುತ್ತ , ಅವರಲ್ಲಿ ನಾವೂ ಒಂದಾಗಿ ಬದುಕನ್ನು ಸಾರ್ಥಕಗೊಳಿಸೋಣ.

ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು

10-uv-fusion

Rainy Season: ಮೊಬೈಲ್‌ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ

9-uv-fusion

UV Fusion: ಜೀವನದಲ್ಲಿ ಕ್ಷಮಾಗುಣ ಬೆಳೆಸೋಣ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

4-uv-fusion

Childhood Times: ಕಳೆದು ಹೋದ ಸಮಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.