Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

ಯಾವ ಕೇಸು ಎಂದು ಈಗಿನ ಆಡಳಿತ ಪಕ್ಷವನ್ನು ಕೇಳಿ..!!?...ಜೆಡಿಎಸ್ ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ...

Team Udayavani, Nov 27, 2024, 4:00 PM IST

Revanna

ಬೆಂಗಳೂರು: ‘ಜಿ.ಟಿ.ದೇವೇಗೌಡರನ್ನು ಕಾಂಗ್ರೆಸ್ ಸರಕಾರ ಬಂಧಿಸಲು ಸಿದ್ಧತೆ ನಡೆದಿತ್ತು, ಆಗ ಕುಮಾರಸ್ವಾಮಿ ಒಂದು ಗುಟುರು ಹಾಕಿ ಎಲ್ಲರನ್ನೂ ಓಡಿಸಿದ್ದರು’ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್ ಶಾಸಕರೊಂದಿಗೆ ಬುಧವಾರ(ನ27) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ ”2018 ರಲ್ಲಿ ಇದೇ ಕಾಂಗ್ರೆಸ್ ಸರಕಾರ ಇತ್ತು. ಜಿ.ಟಿ.ದೇವೇಗೌಡರನ್ನು ಬಂಧಿಸಲು ಸಿದ್ಧತೆ ನಡೆಸಲಾಗಿತ್ತು. ನಮ್ಮ ಅಭಿಮಾನಿ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಹೇಳಿ,ಜಿ.ಟಿ.ದೇವೇಗೌಡರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡ ಸಿದ್ಧವಾಗಿದೆ ಎಂದು ಮುನ್ಸೂಚನೆ ನೀಡಿದರು.ಜಿ.ಟಿ.ದೇವೇಗೌಡರೇನು ಲೂಟಿ ಹೊಡೆದಿದ್ದಾರಾ?. ಆಗ ಕುಮಾರಸ್ವಾಮಿ ಅವರು ಗುಟುರು ಹಾಕಿ ಎಲ್ಲರನ್ನೂ ಓಡಿಸಿದ್ದರು. ಯಾವ ಕೇಸು ಎಂದು ಈಗಿನ ಆಡಳಿತ ಪಕ್ಷವನ್ನು ಕೇಳಿ’ ಎಂದರು.

”ಕುಮಾರಣ್ಣ ಗುಟುರು ಹಾಕದಿದ್ದರೆ ಜಿ.ಟಿ.ದೇವೇಗೌಡರು ನನ್ನ ಹಾಗೆ ಜೈಲಿಗೆ ಹೋಗಬೇಕಿತ್ತು. ಬೇಕಾದರೆ ಯಾವ ದೇವರ ಮುಂದೆಯೂ ಹೇಳುತ್ತೇನೆ. ಜಿ.ಟಿ.ದೇವೇಗೌಡರನ್ನು ಮನವೊಲಿಸಲು ನಮ್ಮ ಪಕ್ಷಕ್ಕೆ ಗೊತ್ತಿದೆ” ಎಂದರು.

1989 ರಲ್ಲಿ ಸೋತಿದ್ದ ದೇವೇಗೌಡರು ನಾಲ್ಕೇ ವರ್ಷದಲ್ಲಿ ಸಿಎಂ

”1989 ರಲ್ಲಿ ದೇವೇಗೌಡರು ನಾನು ಸೋತಿದ್ದೆವು, ದೇವೇಗೌಡ್ರ ರಾಜಕೀಯ ಮುಗಿದೇ ಹೋಯಿತು ಅಂದಿದ್ದರು. ಕೇವಲ ಎರಡು ಸೀಟ್ ಗೆದ್ದಿದ್ದೆವು. ದೇವೇಗೌಡರು ಒಂದೇ ವರ್ಷದ ಒಳಗೆ ಲೋಕಸಭಾ ಸದಸ್ಯರಾದರು. ಏಳು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಇತ್ತು. ಅಂತಹ ಸನ್ನಿವೇಶದಲ್ಲಿ 1994 ರಲ್ಲಿ ದೇವೇಗೌಡರು ಜೆಡಿಎಸ್ ಪಕ್ಷ ಕಟ್ಟಿ 117 ಸೀಟು ಗೆದ್ದು ರಾಜ್ಯದ ಮುಖ್ಯಮಂತ್ರಿ ಆದರು. ನಮ್ಮ ಪಕ್ಷ ಹಲವು ಏಳು ಬೀಳು ಕಂಡಿದೆ. ನಮ್ಮ ಪಕ್ಷವನ್ನು ಯಾರೂ ಮುಗಿಸಲು ಸಾಧ್ಯವಿಲ್ಲ” ಎಂದು. ಸಿ.ಪಿ.ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.

‘ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಈ ಪರಿಸ್ಥಿತಿ ಬಂತಲ್ಲ. ಯೋಗೇಶ್ವರ್ ಅವರ ಕಾಲು ಹಿಡಿದು ವಿಮಾನದಲ್ಲಿ ಕರೆದುಕೊಂಡು ಹೋಗಿ ರಾಜೀನಾಮೆ ಕೊಡಿಸಿ (ಪರಿಷತ್ ಸದಸ್ಯತ್ವ) ಶಾಸಕ ಮಾಡಿದರು. ಯೋಗೇಶ್ವರ್ ಅವರು ಒಳ್ಳೆಯ ಕೆಲಸ ಮಾಡಲಿ, ನಾವೂ ಅವರ ಹತ್ತಿರ ಕೆಲಸ ಮಾಡಿಸಿಕೊಳ್ಳುತ್ತೇವೆ’ ಎಂದರು.

‘2004 ರಲ್ಲಿ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರ ಮಾತು ಕೇಳಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ನನ್ನ, ದೇವೇಗೌಡ್ರ ಮಾತು ಕೇಳಿ ಈ ಪರಿಸ್ಥಿತಿ ಬಂತು. ಮೋದಿ ಅವರ ಮಾತು ಕೇಳಿದರೆ ರಾಜಕೀಯವೇ ಬೇರೆ ದಿಕ್ಕಿಗೆ ಹೋಗುತ್ತಿತ್ತು. ನಮಗೆ ಜೆಡಿಎಸ್ ನಲ್ಲಿ ದೇವೇಗೌಡರು, ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕರು’ ಎಂದರು.

‘ಆವತ್ತು ಒಬ್ಬರು ನಾಯಕನ ಮನೆಯಲ್ಲಿ ಕುಳಿತಿದ್ದೆ, ಐವರನ್ನು ಕರೆದುಕೊಂಡು ಬರುತ್ತೇನೇ ನೀವು ಡಿಸಿಎಂ ಆಗುತ್ತೀರಿ ಎಂದಿದ್ದರು. ಕಾಲ ಬಂದಾಗ ಅವರ ಹೆಸರು ಹೇಳುತ್ತೇನೆ.ಯಾರು ಯಾರು ಲೂಟಿ ಮಾಡಿ ದ್ದಾರೆ ಎನ್ನುವುದನ್ನು ಬಹಿರಂಗಪಡಿಸುತ್ತೇನೆ. ಅಧಿಕಾರದ ಆಸೆ ಇದ್ದರೆ ನಾನು ಅಂದೇ ಡಿಸಿಎಂ ಆಗಬಹುದಿತ್ತು’ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಟಿಡಿ ಪುತ್ರ
ಜೆಡಿಎಸ್ ನ ಮಹತ್ವದ ಸುದ್ದಿಗೋಷ್ಠಿಯಲ್ಲಿ, ಜೆಡಿಎಸ್ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿರುವ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಶಾಸಕ ಜಿ.ಟಿ.ಹರೀಶ್ ಅವರು ಉಪಸ್ಥಿತರಿದ್ದರು. ಎರಡೂ ಪಕ್ಷಗಳೂ ಒಟ್ಟಾಗಿ ಎಲ್ಲಾ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕರು ಹೇಳಿಕೆ ನೀಡಿದರು.

ಟಾಪ್ ನ್ಯೂಸ್

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.