CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Team Udayavani, Nov 27, 2024, 4:21 PM IST
ಮಣಿಪಾಲ: ಸಿಎಸ್ಐ ಕರ್ನಾಟಕ ದಕ್ಷಿಣ ಸಭಾಪ್ರಾಂತ್ಯದ ಸಭಾಪಾಲಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ, ರೆವರೆಂಡ್ ಜಾನ್ ಬೆನೆಡಿಕ್ಟ್ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ (ನ 26) ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಬಾಲ್ಯದಿಂದಲೇ ಸೇವೆಯತ್ತ ಆಸಕ್ತಿ ವಹಿಸಿ, ದೈವಜ್ಞಾನ ತರಬೇತಿ ಪಡೆದು 1985 ರಲ್ಲಿ ಸೇವೆಗೆ ನಿಯುಕ್ತಿಗೊಂಡು ಸಭಾ ಸೇವೆ ಆರಂಭಿಸಿ, 1989ರಲ್ಲಿ ಸಭಾಪಾಲಕರಾಗಿ ಸೇವೆಯನ್ನು ಮುಂದುವರೆಸಿದರು. ಹಲವು ವರ್ಷಗಳ ಕಾಲ ಮುಂಬಯಿಯ ಮರೋಲ್ ಸಭೆಯಲ್ಲಿ ಸೇವೆ ಸಲ್ಲಿಸಿ, ಮುಂದೆ ಪಾದೂರು, ಆನಂದಪುರ, ಕಸ್ತೂರ್, ಚಿಕ್ಕಮಗಳೂರು, ಕೊಪ್ಪ, ಉಚ್ಚಿಲ, ಪಾಂಗಾಳಗುಡ್ಡೆ ಹಾಗೂ ಮಣಿಪಾಲ ಸಭೆಗಳಲ್ಲಿ ಸಭಾಪಾಲಕರಾಗಿ ಅತ್ಯುತ್ತಮ ಸೇವೆಗೈದಿದ್ದರು.
ಸಭಾಪಾಲಕರಾಗಿ ತನ್ನ ಜ್ಞಾನ, ಪ್ರೀತಿ, ಸಹಾಯ ಹಸ್ತ, ಮಾರ್ಗದರ್ಶನದಿಂದ ಜನರ ಪ್ರೀತಿಪಾತ್ರರಾಗಿದ್ದ ಅವರ ನಾಯಕತ್ವದಲ್ಲಿ ಕೊಪ್ಪ ಸಭೆಯಲ್ಲಿ ಸುಂದರ ಆಲಯ ನಿರ್ಮಿಸಲಾಗಿತ್ತು. ಕುತ್ಯಾರಿನ ಆಲಯ ನಿರ್ಮಾಣದಲ್ಲೂ ಅವರ ಸಹಕಾರವಿತ್ತು. ಇತ್ತೀಚೆಗಷ್ಟೇ ಸೇವೆಯಿಂದ ಸ್ವಯಂನಿವೃತ್ತಿ ಪಡೆದಿದ್ದ ಅವರ ಅಗಲುವಿಕೆಯಿಂದ ಪ್ರಾಟೆಸ್ಟೆಂಟ್ ಸಮುದಾಯ ಕಂಬನಿ ಮಿಡಿದಿದ್ದು, ಅವರ ಅಗಲುವಿಕೆಗೆ ಕರ್ನಾಟಕ ಸಭಾಪ್ರಾಂತ್ಯದ ಧರ್ಮಾಧ್ಯಕ್ಷರು, ಸಭಾಪಾಲಕರು, ಗಣ್ಯರು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.