Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Team Udayavani, Nov 28, 2024, 7:15 AM IST
ಉಡುಪಿ: ಪೊಲೀಸ್ ತನಿಖಾಧಿಕಾರಿಯೆಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ ಘಟನೆ ನಡೆದಿದೆ.
ವಿದ್ಯಾ ಅವರಿಗೆ ಅಪರಿಚಿತ ವ್ಯಕಿಯೋರ್ವ ಕರೆ ಮಾಡಿ ಏರ್‌ಟೆಲ್ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ನಿಮ್ಮ ಆಧಾರ್ ನಂಬರು ಬಳಸಿ ಮುಂಬಯಿಯಲ್ಲಿ ಯಾರೋ ಸಿಮ್ ಖರೀದಿ ಮಾಡಿ ಅದರಲ್ಲಿ ಸ್ಕ್ಯಾಮ್ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳುಹಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್ ನಂಬರ್ ಬ್ಲಾಕ್ ಮಾಡಲಾಗುವುದು ಎಂದು ಹೇಳಿದ. ಬಳಿಕ ಕರೆಯನ್ನು ಸಹರಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ.
ಬಳಿಕ ಅತ್ತ ಕಡೆಯಿಂದ ಮೋಹನ್ ಕುಮಾರ್ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂದು ತಿಳಿಸಿ ನಿಮ್ಮ ಆಧಾರ್ ಕಾರ್ಡ್‌ನ ಮುಖಾಂತರ ಮುಂಬಯಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು ಈ ಖಾತೆಯನ್ನು ವಿವೇಕ್‌ದಾಸ್ ಎಂಬವರು ಆಪರೇಟ್ ಮಾಡಿ ಸದರಿ ಖಾತೆಗೆ ಹ್ಯುಮೆನ್ ಟ್ರಾಫಿಕಿಂಗ್ ಮತ್ತು ಮನಿ ಲ್ಯಾಡ್ರಿಂಗ್ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ. ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್ ಪರಿಶೀಲನೆ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ.
ಬಂಧಿಸುವುದಾಗಿ ಬೆದರಿಕೆ
ತದನಂತರ ಮೋಹನ್ ಕುಮಾರ್ ಪೊಲೀಸ್ ಅಧಿಕಾರಿ ಎಂಬುದಾಗಿ ಹೇಳಿಕೊಂಡು ವಿದ್ಯಾ ಅವರಿಗೆ ಕರೆ ಮಾಡಿ ನೀವು ಕೂಡ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಿರಿ, ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂದು ಬೆದರಿಸಿ ನಿಮ್ಮ ಎಲ್ಲ ಅಕೌಂಟ್ ಸೀಜ್ ಆಗುತ್ತದೆ. ಆದ್ದರಿಂದ ನಿಮ್ಮ ಅಕೌಂಟ್‌ನಲ್ಲಿರುವ ಎಲ್ಲ ಹಣವನ್ನು ನಾನು ಹೇಳಿದ ಯುಪಿಐ ನಂಬರಿಗೆ ಹಾಗೂ ಬ್ಯಾಂಕ್ ಖಾತೆಗೆ ಕಳುಹಿಸಿ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ವಿದ್ಯಾ ಅ. 16ರಿಂದ ನ. 7ರ ವರೆಗೆ ಹಂತ ಹಂತವಾಗಿ 19,71,679 ರೂ.ಗಳನ್ನು ವರ್ಗಾಯಿಸಿ, ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. ಘಟನೆ ಸಂಬಂಧ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.