Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
ಸದನ ಆರಂಭವಾಗುತ್ತಿದ್ದಂತೆ ಸರಕಾರದ ವಿರುದ್ಧ ವಿಪಕ್ಷಗಳ ಘೋಷಣೆ ಅದಾನಿ ಕೇಸಿನ ಚರ್ಚೆಗೆ ಆಗ್ರಹ, ಲೋಕಸಭೆಯಲ್ಲಿ ನಿಲುವಳಿ ಮಂಡನೆ
Team Udayavani, Nov 28, 2024, 5:32 AM IST
ಹೊಸದಿಲ್ಲಿ: ಅದಾನಿ ಸಮೂಹದ ಲಂಚ ಪ್ರಕರಣ ಸೇರಿ ವಿವಿಧ ವಿಷಯಗಳ ಚರ್ಚೆಗೆ ವಿಪಕ್ಷಗಳು ಪಟ್ಟುಹಿಡಿದ ಕಾರಣ ಉಭಯ ಸದನಗಳ ಕಲಾಪವನ್ನು ಬುಧವಾರ ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಬುಧವಾರ ಬೆಳಿಗ್ಗೆ ಲೋಕಸಭೆ ಆರಂಭ ವಾದ ಕೂಡಲೇ ವಿಪಕ್ಷ ನಾಯಕರು ಸರಕಾರದ ವಿರುದ್ಧ ಪ್ರತಿಭಟನೆ ಕೂಗಲು ಆರಂಭಿಸಿದ್ದರಿಂದ ಪ್ರಶ್ನೋತ್ತರ ಕಲಾಪವನ್ನು ಮೊಟಕುಗೊಳಿಸಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಯಿತು.
ಮತ್ತೆ ಕಲಾಪ ಆರಂಭವಾದಾ ಗಲೂ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ದಂತೆ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದು ಗಲಾಟೆ ಮಾಡಿದ ಕಾರಣ ಸ್ಪೀಕರ್ ಸ್ಥಾನದ ಲ್ಲಿದ್ದ ದಿಲೀಪ್ ಸೈಕಿಯಾ ಅವರು ಒಂದು ದಿನದ ಮಟ್ಟಿಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಸಹ ಅದಾನಿ ವಿಷಯ ವಾಗಿ ವಿಪಕ್ಷಗಳ ನಾಯಕರು ಗದ್ದಲ ಮಾಡಿದ್ದ ರಿಂದ ಒಂದು ದಿನ ಮುಂದೂಡಲಾಯಿತು. ಅದಾನಿ ಪ್ರಕರಣದ ತನಿಖೆಗೆ ಜೆಪಿಸಿ ಸೇರಿ 18 ನೋಟಿಸ್‌ಗಳನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ತಿರಸ್ಕರಿಸಿದರು.
ಲೋಕಸಭೆಯಲ್ಲೂ ನಿಲುವಳಿ: ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅನುಮತಿ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟಾಗೋರ್ ಅವರು ನಿಲುವಳಿ ಮಂಡಿಸಿದರು. ಸರಕಾರದ ಮೌನ ಭಾರತದ ಸಮಗ್ರತೆ ಮತ್ತು ಜಾಗತಿಕ ಸ್ಥಾನಮಾನದ ಬಗ್ಗೆ ಕಳವಳವನ್ನು ಉಂಟು ಮಾಡುತ್ತದೆ ಎಂದು ಅವರು ಕೋರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.