Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Team Udayavani, Nov 28, 2024, 7:41 PM IST
ಮುಂಬೈ: ಕಳೆದ ಸೋಮವಾರ(ನ.25) ರಂದು ಅಂಧೇರಿಯ ಮರೋಲ್‌ನಲ್ಲಿರುವ ಫ್ಲಾಟ್ ನಲ್ಲಿ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಗೆಳೆಯ ದಿಲ್ಲಿ ಮೂಲದ ಆದಿತ್ಯ ಪಂಡಿತ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಸೃಷ್ಟಿ ಪೋಷಕರು, ಕುಟುಂಬ ಸದಸ್ಯರು ಇದು ಆತ್ಮಹತ್ಯೆಯಲ್ಲ ಇದೊಂದು ಕೊಲೆ ನಮ್ಮ ಮಗಳನ್ನು ಆದಿತ್ಯ ಹತ್ಯೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಸೃಷ್ಟಿಯ ಚಿಕ್ಕಪ್ಪ ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದು ಸೃಷ್ಟಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ವಿಚಾರ ಗೊತ್ತಾಗುವ ಹದಿನೈದು ನಿಮಿಷದ ಮೊದಲು ತಾಯಿ ಹಾಗೂ ಚಿಕ್ಕಮ್ಮನಿಗೆ ಕರೆ ಮಾಡಿದ್ದು ಈ ವೇಳೆ ಮನೆ ಮಂದಿಯೊಂದಿಗೆ ಖುಷಿ ಖುಷಿಯಲ್ಲಿ ಮಾತನಾಡಿದ್ದಾಳೆ ಇದಾದ ಹದಿನೈದು ನಿಮಿಷದಲ್ಲಿ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವಿಚಾರ ಗೊತ್ತಾಗಿದೆ ಇದು ಹೇಗೆ ಸಾಧ್ಯ ಹದಿನೈದು ನಿಮಿಷದ ಮೊದಲು ಖುಷಿಯಲ್ಲಿ ಕರೆ ಮಾಡಿದವಳು ಅಷ್ಟು ಬೇಗ ಆತ್ಮಹತ್ಯೆ ಮಾಡಲು ಕಾರಣವೇನು ? ಇದರ ಬಗ್ಗೆ ನಮಗೆ ಅನುಮಾನವಿದೆ ಅಲ್ಲದೆ ಆಕೆಯ ಗೆಳೆಯ ಆದಿತ್ಯ ಆಕೆಯನ್ನು ಹತ್ಯೆ ಮಾಡಿರಬೇಕು ಎಂದು ಶೇಕ್ ವ್ಯಕ್ತಪಡಿಸಿದ್ದಾರೆ. ಮಗಳನ್ನು ಆದಿತ್ಯನೇ ಹತ್ಯೆ ಮಾಡಿದ್ದಾನೆ ಆತನನ್ನು ಸರಿಯಾಗಿ ವಿಚಾರಣೆ ನಡೆಸಿ ಆತನಿಗೆ ಕಠಿಣ ಶಿಕ್ಷೆ ನೀಡಬೇಕು ನಮ್ಮ ಮಗಳು ಆತ್ಮಹತ್ಯೆ ಮಾಡುವ ಮನಸ್ಥಿತಿಯವಳಲ್ಲ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಆದಿತ್ಯ ಹೇಳಿದ್ದೇನು?
ಪೊಲೀಸರ ಮಾಹಿತಿ ಪ್ರಕಾರ, ಆದಿತ್ಯ ಮಾಂಸಾಹಾರ ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಸಾಕಷ್ಟು ಚರ್ಚೆಯಾಗಿ ಆಕೆಯನ್ನು ಅರ್ಧದಾರಿಯಲ್ಲೇ ಬಿಟ್ಟು ಆದಿತ್ಯ ಮನೆ ಕಡೆಗೆ ತೆರಳಿದ್ದಾನೆ. ಬಳಿಕ ಸೃಷ್ಟಿ ರವಿವಾರ ಸಂಜೆ ಕೆಲಸದ ಅವಧಿ ಮುಗಿಸಿ ವಾಪಸ್ ಬಂದ ಮೇಲೂ ಇಬ್ಬರ ನಡುವೆ ಮತ್ತೆ ಜಗಳವಾಗಿದೆ ಇದಾದ ಬಳಿಕ ಸೋಮವಾರ ಸಂಜೆ ಸೃಷ್ಟಿ ಆದಿತ್ಯನಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ವಿಚಾರ ತಿಳಿಯುತ್ತಲೇ ಗಾಬರಿಗೊಂಡ ಆದಿತ್ಯ ಆಕೆಯ ಮನೆಗೆ ಬಂದಿದ್ದಾನೆ ಆದರೆ ಆಕೆಯ ಮನೆಯ ಒಳಭಾಗದಲ್ಲಿ ಬಾಗಿಲಿಗೆ ಬೀಗ ಹಾಕಿತ್ತು. ಕೂಡಲೇ ಆತನ ಬಳಿ ಇದ್ದ ನಕಲಿ ಕೀ ಬಳಸಿ ಒಳ ಹೋಗಿ ನೋಡಿದಾಗ ಆಕೆ ಪ್ರಜ್ಞಾಹೀನಳಾಗಿದ್ದಳು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಕೆ ಬದುಕುಳಿಯಲ್ಲಿಲ್ಲ.
ಸದ್ಯ ಸೃಷ್ಟಿ ಪೋಷಕರ ಅನುಮಾನದ ಮೇರೆಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu;ಸೈಕ್ಲೋನ್ ದುರ್ಬಲವಾದ್ರೂ ಭಾರೀ ಮಳೆ?
2000 ಇಸವಿಯಿಂದ 1.44 ಲಕ್ಷ ಕೋಟಿ ರೂ. ಟೋಲ್ ಸಂಗ್ರಹ: ಗಡ್ಕರಿ
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.