Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
ಲೋಕಸಭಾ ಚುನಾವಣೆಯಲ್ಲಿ ಇವಿಎಂ ಸರಿಯಾಗಿತ್ತು ... ಅಜಿತ್ ಪವಾರ್ ತಿರುಗೇಟು
Team Udayavani, Nov 28, 2024, 7:42 PM IST
ಮುಂಬಯಿ: ನವೆಂಬರ್ 20 ರಂದು ಸಂಜೆ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ನಂತರ ಶೇಕಡಾ 7 ಕ್ಕಿಂತ ಹೆಚ್ಚು ಮತದಾನದ ಹೆಚ್ಚಳವಾಗಿರುವ ಕುರಿತು ಚುನಾವಣ ಆಯೋಗ ಸ್ಪಷ್ಟಪಡಿಸಬೇಕೆಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಗುರುವಾರ(ನ28) ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಟೋಲೆ, ಮತದಾನದ ಅಂಕಿಅಂಶಗಳಲ್ಲಿನ ವ್ಯತ್ಯಾಸಗಳು ಭಾರತದ ಚುನಾವಣ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತವೆ’ ಎಂದಿದ್ದಾರೆ.
ಸಂಜೆ 5 ಗಂಟೆಗೆ 58.22 ರಷ್ಟು ಮತದಾನವಾಗಿತ್ತು ಆದರೆ ರಾತ್ರಿ 11.30 ಕ್ಕೆ 7.83 ಪರ್ಸೆಂಟೇಜ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ವ್ಯತ್ಯಾಸದ ಕುರಿತು ಚುನಾವಣ ಆಯೋಗ ಸ್ಪಷ್ಟಪಡಿಸಬೇಕು. ಏಕೆಂದರೆ ಇದು ಪಾರದರ್ಶಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯಾಗಲಿದೆ. ಇದು ಜನರ ಮತಗಳ್ಳತನ. ನಾವು ಕಾನೂನಿನ ಆಶ್ರಯವನ್ನು ಹುಡುಕುತ್ತೇವೆ ಮತ್ತು ಜನರಿಗೆ ಅರಿವು ಮೂಡಿಸಲು ಬೀದಿಗಿಳಿಯುತ್ತೇವೆ ಎಂದು ಪಟೋಲೆ ಹೇಳಿದ್ದಾರೆ.
ರಾತ್ರಿ 11.30ರವರೆಗೆ ಮತದಾನ ನಡೆದ ಬೂತ್‌ಗಳ ಭಾವಚಿತ್ರವನ್ನು ಚುನಾವಣ ಆಯೋಗ ಪ್ರಕಟಿಸಬೇಕು. ಆಯೋಗದ ಪ್ರಕಾರ, ಇವಿಎಂ ಮತಗಳ ಪ್ರಕಾರ ಮಹಾರಾಷ್ಟ್ರ ಚುನಾವಣೆಯಲ್ಲಿ ಅಂತಿಮ ಮತದಾನ ಶೇಕಡಾ 66.05 ಆಗಿತ್ತು, ಇದು 2019 ರಲ್ಲಿ ಶೇಕಡಾ 61.1 ರಿಂದ ಹೆಚ್ಚಾಗಿದೆ. ಯಾರು ಗೆದ್ದರು ಅಥವಾ ಯಾರು ಸೋತರು ಎಂಬುದು ಅಲ್ಲ, ತಮ್ಮ ಪಕ್ಷವು ಪ್ರಜಾಪ್ರಭುತ್ವವನ್ನು ಉಳಿಸಲು ಬಯಸಿದೆ ಎಂದು ಪಟೋಲೆ ಆರೋಪ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಇವಿಎಂ ಸರಿಯಾಗಿತ್ತು…
”ಲೋಕಸಭಾ ಚುನಾವಣೆಯಲ್ಲಿ ಇವಿಎಂ ಸರಿಯಾಗಿತ್ತು ಏಕೆಂದರೆ ಫಲಿತಾಂಶವು ಮಹಾ ವಿಕಾಸ್ ಅಘಾಡಿ ಪರವಾಗಿ ಬಂದಿತ್ತು, ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶವು ವಿಭಿನ್ನವಾಗಿದ್ದರಿಂದ ಅವರು ಇವಿಎಂ ಅನ್ನು ದೂಷಿಸುತ್ತಿದ್ದಾರೆ” ಎಂದು ಎನ್ ಸಿಪಿ ನಾಯಕ, ಮಾಜಿ ಡಿಸಿಎಂ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.
“ನಮ್ಮ ಎನ್ ಸಿಪಿ ಪಕ್ಷ ರಾಷ್ಟ್ರೀಯ ಪಕ್ಷವಾಗಿತ್ತು, ಅದಕ್ಕಾಗಿ ನಾವು ಈಗ ಹೆಚ್ಚು ಕೆಲಸ ಮಾಡಬೇಕಾಗಿದೆ, ನಾವು ಹೋರಾಡುತ್ತೇವೆ ಮತ್ತು ನಾವು ಯಶಸ್ಸನ್ನು ಸಾಧಿಸುತ್ತೇವೆ” ಎಂದು ಪವಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu;ಸೈಕ್ಲೋನ್ ದುರ್ಬಲವಾದ್ರೂ ಭಾರೀ ಮಳೆ?
2000 ಇಸವಿಯಿಂದ 1.44 ಲಕ್ಷ ಕೋಟಿ ರೂ. ಟೋಲ್ ಸಂಗ್ರಹ: ಗಡ್ಕರಿ
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.