Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು
Team Udayavani, Nov 29, 2024, 6:40 AM IST
ಕುಂದಾಪುರ: ಇಲ್ಲಿನ ಜಪ್ತಿಯಲ್ಲಿ ಅಂಬಿಕಾ ಮತ್ತು ಅವರ ಪತಿ ರಸ್ತೆ ಬದಿಯಲ್ಲಿ ನಡೆಸುತ್ತಿದ್ದ ತಗಡು ಶೀಟಿನ ಸಣ್ಣ ಅಂಗಡಿ ಬೆಂಕಿ ತಗಲಿ ಭಸ್ಮವಾಗಿದೆ. ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್ ಡ್ರಿಂಕ್ಸ್, ತರಕಾರಿ ಇನ್ನಿತರ ಸೊತ್ತುಗಳಿದ್ದವು.
ಅಂಗಡಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಅಂಗಡಿ ಸಮೀಪದ ಮನೆಯ ಅಭಿ ಅವರು ಫೋನ್ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ.
ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ. ಫ್ರಿಜ್, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ.
ಇದೇ ಅಂಗಡಿಯ ಸಮೀಪ ಸಂದೇಶ ಅವರು 3 ವರ್ಷದ ಹಿಂದೆ ತಗಡಿನ ಅಂಗಡಿ ಇಟ್ಟಿದ್ದು, ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಡಲು ಎಷ್ಟು ಧೈರ್ಯ ಎಂದು ಅಂಬಿಕಾ ದಂಪತಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿ ಅಂಗಡಿಗೆ ಬೆಂಕಿ ಬಿದ್ದ ಸಂದರ್ಭ ಸಂದೇಶ ಮತ್ತು ಶಿವಪ್ರಸಾದ ಅವರು ಅಂಗಡಿಯ ಬಳಿ ತಿರುಗಾಡಿಕೊಂಡಿದ್ದರು. ಬೆಂಕಿ ನಂದಿಸಿ ಹೋಗುವಾಗ ಅಂಗಡಿ ಬಾಗಿಲು ತೆಗೆದು ಕೋಲ್ಡ್ ಕೊಡುವಂತೆ ತಮಾಷೆ ಮಾಡಿದ್ದರು. ಅಂಗಡಿಗೆ ವಿದ್ಯುತ್ ಸಂಪರ್ಕ ಇಲ್ಲ. ಅವರ ಕುಹಕದ ನಡೆಯಿಂದಾಗಿ ಅವರೇ ಬೆಂಕಿ ಹಾಕಿರಬಹುದು ಎಂದು ಶಂಕೆ ಇರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಅಂಗಡಿಯ ಮಾಲಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.