Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ


Team Udayavani, Nov 29, 2024, 1:12 PM IST

8-I-phone

ಆಪಲ್ ಐಫೋನ್ ಸಾಮಾನ್ಯವಾಗಿ ನಾಲ್ಕು ಮಾದರಿಯ ಐಫೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಈ ಬಾರಿಯೂ ಐಫೋನ್ 16, ಐಫೋನ್ 16 ಪ್ಲಸ್, 16 ಪ್ರೊ, 16 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಐಫೋನ್ ಕೊಳ್ಳಬೇಕು, ಬಜೆಟ್ ಸ್ವಲ್ಪ ಕಮ್ಮಿಯಿರಬೇಕು ಎಂದು ಬಯಸುವ  ಐಫೋನ್ ಫ್ಯಾನ್ ಗಳು ಆರಂಭಿಕ ಶ್ರೇಣಿಯಾದ ಐಫೋನ್ 16 ಬಯಸುತ್ತಾರೆ. ಪ್ಲಸ್, ಪ್ರೊ, ಮ್ಯಾಕ್ಸ್ ಮಾದರಿಗಳಿಗೆ ಹೋಲಿಸಿದರೆ ಇದರ ಬೆಲೆ ಅವುಗಳಿಗಿಂತ ಕಡಿಮೆಯಿರುತ್ತದೆ.

ಈ ಬಾರಿಯ ಐಫೋನ್ 16 ವೈಶಿಷ್ಟ್ಯಗಳೇನು? ಎಂಬುದರ ವಿವರ ಇಲ್ಲಿದೆ.

ಭಾರತದಲ್ಲಿ, iPhone 16 ಬೆಲೆ 79,900 ರೂ. (128 ಜಿಬಿ ಆಂತರಿಕ ಸಂಗ್ರಹ ಮಾದರಿ)

ಈ ಹೊಸ ಐಫೋನ್ ಸರಣಿಯಲ್ಲಿ ಕ್ಯಾಮರಾವನ್ನು ಬಟನ್ ಮೂಲಕವೇ ನಿಯಂತ್ರಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಈ ಬಟನ್ ಕೇವಲ ಸ್ಪರ್ಶಿಸುವ ಮೂಲಕ ಫೋಟೋ, ವಿಡಿಯೋಗಳ ಸೆಟಿಂಗ್ ಗಳನ್ನು ಹೊಂದಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಆಪಲ್ ಇಂಟೆಲಿಜೆನ್ಸ್ (ಎಐ ಅನ್ನು ಆಪಲೀಕರಣಿಸಲಾಗಿದೆ) ಸಾಫ್ಟ್ ವೇರ್ ಫೀಚರ್ ಪರಿಚಯಿಸಲಾಗಿದೆ. ಇವೆರಡು ಈ ಸರಣಿಯ ಹೊಸತನಗಳು.

ವಿನ್ಯಾಸ: ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಇಲ್ಲ. 16 ಮತ್ತು ಪ್ಲಸ್ ಎರಡೂ ಮಾದರಿಗಳಲ್ಲಿ ಕ್ಯಾಮರಾ ಲೆನ್ಸ್ ಗಳನ್ನು ಡಯಾಗ್ನಲ್ ಬದಲು, ಒಂದರ ಮೇಲೆ ಒಂದರಂತೆ ಲಂಬವಾಗಿ ಇರಿಸಲಾಗಿದೆ. ಆಪಲ್ ಐಫೋನ್ 16 “ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ” ನಿಂದ ತಯಾರಿಸಲಾಗಿದೆ. ಅಲ್ಟ್ರಾಮರೀನ್, ಟೀಲ್, ಪಿಂಕ್, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಐಫೋನ್ ದೊರಕುತ್ತದೆ. 6.1-ಇಂಚಿನ ಪರದೆ ಹೊಂದಿದ್ದು, 2000nits ಗರಿಷ್ಠ ಬ್ರೈಟ್ ನೆಸ್ ಹೊಂದಿವೆ.

ಬಟನ್ ಮೂಲಕವೇ ಕ್ಯಾಮರಾ ನಿಯಂತ್ರಣ: ಐಫೋನ್ 16 ಹೊಸ ಕ್ಯಾಮರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಆನ್/ಆಫ್ ಸ್ವಿಚ್ ನಿಂದ ಸ್ವಲ್ಪ ಕೆಳಗೆ ಇದೆ. ಇದನ್ನು ಟಚ್ ಮಾಡಿದರೆ ಕ್ಯಾಮರಾ ಆ್ಯಪ್ ಓಪನ್ ಆಗುತ್ತದೆ. ಆಗ ಬಟನ್ ಮೇಲೆ ಬೆರಳನ್ನು ಸ್ಲೈಡ್ ಮಾಡುವ ಮೂಲಕ ಸೆಟ್ಟಿಂಗ್ ಗಳನ್ನು ಹೊಂದಿಸಿಕೊಳ್ಳಬಹುದು.

ಈ ಬಟನ್ ಸ್ಯಾಫೈರ್ ಗ್ಲಾಸ್ ನಿಂದ ತಯಾರಾಗಿದೆ. ಒಂದನೇ ಕ್ಲಿಕ್ ಕ್ಯಾಮರಾವನ್ನು ತೆರೆಯುತ್ತದೆ. ಎರಡನೇ ಕ್ಲಿಕ್ ಫೋಟೋ ಸೆರೆಹಿಡಿಯುತ್ತದೆ. ಆ ಬಟನ್ ಒತ್ತಿ ಹಿಡಿದಾಗ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಕ್ಯಾಮರಾ ನಿಯಂತ್ರಣವನ್ನು ಟಚ್ ಗೆಸ್ಟರ್ ಮೂಲಕ ಮಾಡಬಹುದು. ಪೂರ್ಣ ಕ್ಲಿಕ್ ಮತ್ತು ಹಗುರವಾದ ಪ್ರೆಸ್ ಆಯ್ಕೆಗಳಿವೆ. ಹಗುರವಾದ ಪ್ರೆಸ್ ನಿಂದ ಪ್ರೀವ್ಯೂ ನೀಡುತ್ತದೆ. ಶಾಟ್ ಅನ್ನು ಹೆಚ್ಚು ನಿಖರವಾಗಿ ರೂಪಿಸಲು ಸಹಾಯ ಮಾಡುತ್ತದೆ. ಹೊಸ ಓವರ್ಲೇ ಜೂಮ್ ನಂತಹ ಅಗತ್ಯ ಕ್ಯಾಮರಾ ಸೆಟಿಂಗ್ ಗಳಿಗೆ ಇದು ಸಹಕಾರಿಯಾಗಿದೆ.

ಐಫೋನ್ 16 ಅದರ ಹಿಂದಿನ ಮಾದರಿಗಳಂತೆ ಅದೇ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ ಪ್ಲೇ ಯನ್ನು ಉಳಿಸಿಕೊಂಡಿದೆ. 2,556 x 1,179-ಪಿಕ್ಸೆಲ್ ರೆಸಲ್ಯೂಶನ್, 460 ppi, 2,000 ನಿಟ್ಸ್ ಗರಿಷ್ಠ ಪ್ರಕಾಶ ಹೊಂದಿದೆ.  60Hz ರಿಫ್ರೆಶ್ ದರವನ್ನು ಹೊಂದಿದೆ. ಉತ್ತಮ ಡಿಸ್ ಪ್ಲೇಯಿಂದಾಗಿ ಬಿಸಿಲಿನಲ್ಲೂ ಪರದೆ ಮಂಕಾಗುವುದಿಲ್ಲ. ಹೊರಾಂಗಣದಲ್ಲೂ ಆರಾಮಾಗಿ ಬಳಸಬಹುದು.

ಹೊಸ ಚಿಪ್ ಸೆಟ್ ಕಾರ್ಯಾಚರಣೆ: ಐಫೋನ್ 16 ಆಪಲ್‌ ಹೊಸದಾದ A18 ಪ್ರೊಸೆಸರ್ ಒಳಗೊಂಡಿದೆ. ಇದು 2ನೇ ತಲೆಮಾರಿನ 3nm ತಂತ್ರಜ್ಞಾನ ಬಳಸುತ್ತದೆ. A18 ಚಿಪ್ 6-ಕೋರ್ CPU ಹೊಂದಿದೆ. Apple ಪ್ರಕಾರ, iPhone 15 ನಲ್ಲಿರುವ A16 ಬಯೋನಿಕ್ ಗೆ ಹೋಲಿಸಿದರೆ iPhone 16 ಶೇಕಡಾ 30 ರಷ್ಟು ವೇಗದ ಕಾರ್ಯಕ್ಷಮತೆ ಹೊಂದಿದೆ. ಈ ಚಿಪ್ ಸೆಟ್ ಎಲ್ಲ ರೀತಿಯ ವೇಗದ ಕಾರ್ಯಾಚರಣೆಗೆ ಬೆಂಬಲ ಒದಗಿಸುತ್ತದೆ. ಹಾಗಾಗಿ ಫೋನ್ ಯಾವುದೇ ಹಂತದಲ್ಲೂ ನಿಧಾನವಾಗುವುದಿಲ್ಲ. 8GB RAM ನೊಂದಿಗೆ ಸಂಯೋಜಿಸಿದ A18 ಚಿಪ್ ಸೆಟ್ ದಿನನಿತ್ಯದ ಬಳಕೆಗೆ ಆರಾಮದಾಯಕವಾಗಿದೆ. ಸಂದೇಶ ಕಳುಹಿಸುವಿಕೆ, ಸೋಶಿಯಲ್ ಮೀಡಿಯಾ, ಬ್ರೌಸಿಂಗ್, ಇತ್ಯಾದಿ ಬಳಕೆಯಲ್ಲಿ 3nm ಚಿಪ್ ಸೆಟ್ ಸಮರ್ಥವಾಗಿದೆ.

ಕ್ಯಾಮರಾ: ಐಫೋನ್ 16,  48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ, ಇದು 48MP ಮತ್ತು 12MP ಫೋಟೋಗಳನ್ನು ಒಂದು ಸ್ಪಷ್ಟವಾದ 24MP ಚಿತ್ರಕ್ಕೆ ಸಂಯೋಜಿಸುತ್ತದೆ.

ಇದರಲ್ಲಿ ಡಾಲ್ಬಿ ವಿಷನ್ HDR ನೊಂದಿಗೆ 4K60 ವೀಡಿಯೊವನ್ನು ಶೂಟ್ ಮಾಡಬಹುದು. ಹೊಸ 12MP ಅಲ್ಟ್ರಾ-ವೈಡ್ ಕ್ಯಾಮೆರಾ ದೊಡ್ಡ ಅಪರ್ಚರ್ ಮತ್ತು ಹೆಚ್ಚಿನ ಪಿಕ್ಸೆಲ್ ಗಳನ್ನು ಹೊಂದಿದೆ. ಇದು ಪ್ರಕಾಶಮಾನವಾದ, ತೀಕ್ಷ್ಣವಾದ ಫೋಟೋಗಳಿಗಾಗಿ 2.6x ಹೆಚ್ಚಿನ ಬೆಳಕನ್ನು ನೀಡುತ್ತದೆ.

ಐಫೋನ್ 16 ಫೋನಿನ ಕ್ಯಾಮರಾ ಸೆಟಪ್, ನಾಲ್ಕು ಕ್ಯಾಮೆರಾ ಲೆನ್ಸ್ ಗಳಿಗೆ ಸಮನಾಗಿದೆ ಎಂದು ಆಪಲ್ ತಿಳಿಸಿದೆ.

ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಸಾಫ್ಟ್ ವೇರ್ ಇರುವುದು ಪ್ರಮುಖ ವೈಶಿಷ್ಟ್ಯ. ಇದರಲ್ಲಿ ಡೇಟಾವನ್ನು ಸಂಗ್ರಹಿಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ ಎಂದು Apple ಭರವಸೆ ನೀಡಿದೆ.

ಆಪಲ್ ಇಂಟೆಲಿಜೆನ್ಸ್ ಮೂಲಕ ಫೋಟೋ ಅಥವಾ ವೀಡಿಯೊಗಳಲ್ಲಿನ ನಿರ್ದಿಷ್ಟ ಕ್ಷಣಗಳಂತಹ ವಿವರಣೆಗಳನ್ನು ಬಳಸಿಕೊಂಡು ಬಳಕೆದಾರರು ಫೋಟೋಗಳನ್ನು ಹುಡುಕಬಹುದು. ಹೊಸ ವೈಶಿಷ್ಟ್ಯವಾದ ವಿ‌ಷ್ಯುಯಲ್ ಇಂಟೆಲಿಜೆನ್ಸ್ ಮೂಲಕ ಕ್ಯಾಮರಾ ಲೆನ್ಸ್ ಅನ್ನು ಫೋಟೋಗಳ ಮೇಲೆ ಹಿಡಿದಾಗ ಇದು ಫೋಟೋಕ್ಕೆ ಸಂಬಂಧಿಸಿದ ವಿವರಗಳನ್ನು ಗುರುತಿಸುತ್ತದೆ. (ಈ ವೈಶಿಷ್ಟ್ಯಗಳು ಶೀಘ್ರವೇ ಮುಂದಿನ ಅಪ್ ಡೇಟ್ ಗಳಲ್ಲಿ ದೊರಕಲಿದೆ.)

ಕೇವಲ ಎರಡು ಹಿಂಬದಿಯ ಕ್ಯಾಮೆರಾಗಳೊಂದಿಗೆ ಬರುತ್ತಿದ್ದರೂ, iPhone 16 (ಮತ್ತು iPhone 16 Plus) ನಾಲ್ಕು ಮೋಡ್ ಗಳನ್ನು ಸೆರೆಹಿಡಿಯಬಹುದು. 48MP ಪ್ರಾಥಮಿಕ ‘ಫ್ಯೂಷನ್’ ಕ್ಯಾಮರಾ 2x ಆಪ್ಟಿಕಲ್-ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಬಹುದು. 2x ಜೂಮ್ ಚೆನ್ನಾಗಿ ಕೆಲಸ ಮಾಡುತ್ತದೆ ಕ್ಲೋಸ್-ಅಪ್ ಭಾವಚಿತ್ರಗಳನ್ನು ತೆಗೆದುಕೊಳ್ಳಲು ಸೂಕ್ತವಾಗಿದೆ.  ಆಟೋಫೋಕಸ್  12MP ಅಲ್ಟ್ರಾ-ವೈಡ್ ಲೆನ್ಸ್ , ಕ್ಲೋಸ್-ಅಪ್ ಮ್ಯಾಕ್ರೋ ಶಾಟ್ ಗಳನ್ನು ತೆಗೆಯಬಹುದು.

iPhone 16 ನ ಕ್ಯಾಮರಾದಲ್ಲಿ ಫೋಟೋಗಳು ಸ್ಪಷ್ಟವಾಗಿ ನಿಖರವಾಗಿ ಮೂಡಿ ಬರುತ್ತವೆ. ಐಫೋನ್ 16 ವೇಗವಾದ ಶಟರ್ ಮತ್ತು ಆಟೋಫೋಕಸ್ ಹೊಂದಿದೆ. ಇದು ಉತ್ತಮ, ಮಸುಕುಮುಕ್ತ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಮಂದ ಬೆಳಕಿನ ಶಾಟ್ ಗಳು ಕೂಡ ಚೆನ್ನಾಗಿ ಮೂಡಿಬರುತ್ತವೆ.

ವಿಡಿಯೋ ವಿಷಯಕ್ಕೆ ಬಂದರೆ iPhone 16, 60fps ನಲ್ಲಿ 4K ವರೆಗೆ ರೆಕಾರ್ಡ್ ಮಾಡಬಹುದು. ವೀಡಿಯೊಗಳು ಹಗಲು ಬೆಳಕಿನಲ್ಲಿ ಉತ್ತಮವಾಗಿ, ನೈಸರ್ಗಿಕವಾಗಿ ಕಾಣುತ್ತವೆ. ವ್ಲೋಗರ್ ಗಳಿಗೆ ವಿಡಿಯೋ ಶೂಟ್ ಮಾಡಲು ಚೆನ್ನಾಗಿದೆ. 12MP ಸೆಲ್ಫಿ ಕ್ಯಾಮರಾ ಕೂಡ ಚೆನ್ನಾಗಿದೆ.

iPhone 16 ನಲ್ಲಿ – ಸ್ಟ್ಯಾಂಡರ್ಡ್, ಅಂಬರ್, ಗೋಲ್ಡ್, ರೋಸ್ ಗೋಲ್ಡ್, ನ್ಯೂಟ್ರಲ್ ಮತ್ತು ಕೂಲ್ ರೋಸ್ B&W ಮುಂತಾದ ಫೋಟೋಗ್ರಾಫಿಕ್ ಸೆಟಿಂಗ್ ಗಳಿವೆ.

ಬ್ಯಾಟರಿ: ಐಫೋನ್ 16 ಬ್ಯಾಟರಿ 5 ರಿಂದ 6 ಗಂಟೆಗಳ screen on time ನೀಡುತ್ತದೆ. ಒಂದು ದಿನದ ಬ್ಯಾಟರಿ ಬಳಕೆಗೆ ಅಡ್ಡಿಯಿಲ್ಲ.

ಆಪಲ್ ತನ್ನ ಇತ್ತೀಚಿನ ಐಫೋನ್ ಗಳಲ್ಲಿ ವೇಗದ ಚಾರ್ಜಿಂಗ್ ಸುಧಾರಿಸಿದೆ. ಐಫೋನ್ 16 ಕೇವಲ 30 ನಿಮಿಷಗಳಲ್ಲಿ 50 ಶೇಕಡಾ ಚಾರ್ಜ್ ಮಾಡಬಹುದು. ಶೂನ್ಯದಿಂದ ಶೇ. 100 ಚಾರ್ಜ್ ಆಗಲು ಸುಮಾರು ಒಂದೂಕಾಲು ಗಂಟೆ ತೆಗೆದುಕೊಳ್ಳುತ್ತದೆ.

ಒಟ್ಟಾರೆ iPhone 16 ಉತ್ತಮ ಕಾಂಪ್ಯಾಕ್ಟ್ ಸಾಧನವಾಗಿದ್ದು, ಆಕ್ಷನ್ ಬಟನ್, ಕ್ಯಾಮೆರಾ ಕಂಟ್ರೋಲ್ ಬಟನ್, ಆಕರ್ಷಕ ವಿನ್ಯಾಸ, ವೇಗವಾದ ಚಾರ್ಜಿಂಗ್ ಮತ್ತು  Apple ಇಂಟೆಲಿಜೆನ್ಸ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬಾರಿ ಇದರ ವಿಶೇಷಣಗಳಿಂದಾಗಿ ಪ್ರೊ ಮಾದರಿಗಳ ನಡುವಿನ ಅಂತರ ಕಡಿಮೆಯಾಗಿದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.