Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ


Team Udayavani, Nov 30, 2024, 6:55 AM IST

1-virat-Kohli

ಮಂಗಳೂರು: ಅದು ಆಸ್ಟ್ರೇಲಿಯದ ಕ್ಯಾನ್‌ಬೆರಾದ ಖ್ಯಾತ ಹೇರ್‌ಸ್ಟೈಲಿಂಗ್‌ ಸಲೂನ್‌. ಅಲ್ಲಿ ನ. 28ರಂದು ವಿ.ಕೆ. ಹೆಸರಲ್ಲಿ ಆನ್‌ಲೈನ್‌ ಮೂಲಕ ಮಧ್ಯಾಹ್ನ ಒಂದು ಗಂಟೆಗೆ ಅಪಾಯಿಂಟ್‌ಮೆಂಟ್‌ ನೋಂದಣಿಯಾಗಿತ್ತು. ಆಶ್ಚರ್ಯ ಎಂದರೆ ಸಲೂನ್‌ಗೆ ಬಂದವರು ಬೇರೆ ಯಾರೂ ಅಲ್ಲ, ಭಾರತದ ಖ್ಯಾತ ಕ್ರಿಕಟರ್‌ ವಿರಾಟ್‌ ಕೊಹ್ಲಿ! ಅಲ್ಲಿ ಸೂಪರ್‌ವೈಸರ್‌ ಆಗಿರುವ ಮಂಗಳೂರು ಮೂಲದ ಕಿರಣ್‌ ಕುಮಾರ್‌ ಶ್ರೀನಿವಾಸ್‌ಗೆ ಖುಷಿ ಸಹಿತ ಅಚ್ಚರಿ!
ಮುಕ್ಕಾಲು ಗಂಟೆ ಕಾಲ ಹೇರ್‌ಸ್ಟೈಲಿಂಗ್‌ ಮಾಡಿಸಿಕೊಂಡ ಕೊಹ್ಲಿ, ಕಿರಣ್‌ ಜತೆ ಆತ್ಮೀಯತೆಯಿಂದ ಹರಟಿದ್ದಾರೆ. ಸಲೂನ್‌ನಲ್ಲಿದ್ದ ಏಕೈಕ ಭಾರತೀಯ ಕಿರಣ್‌. ನೀವು ಎಲ್ಲಿನವರು ಎಂದು ಕೇಳಿದಾಗ, ಕರ್ನಾಟಕದವರು… ಮಂಗಳೂರಿನವರೆಂದು ಗೊತ್ತಾದಾಗ, “ಓಹ್‌ ಮಂಗಳೂರು, ಹಾಗಾದರೆ ಆರ್‌ಸಿಬಿ ಅಭಿಮಾನಿ’ ಎಂದು ಸಂಭ್ರಮಿಸಿದ್ದಾರೆ. ಇಬ್ಬರೂ ಖುಷಿ ಪಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಬಿಗಿದಪ್ಪಿ ಆದರಿಸಿದ್ದಾರೆ. ಹೀಗೆ ಯಾವುದೇ ಬಿಗುಮಾನವಿಲ್ಲದೆ ತನ್ನೊಂದಿಗೆ ಮಾತನಾಡಿದ ಕೊಹ್ಲಿ ಸರಳತೆಗೆ ಕಿರಣ್‌ ಕೂಡ ಫಿದಾ ಆಗಿದ್ದಾರೆ.

ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿದ್ದು, ಅಭ್ಯಾಸ ಪಂದ್ಯವಾಡಲು ಕ್ಯಾನ್‌ಬೆರಾಗೆ ಬಂದಿದೆ.
ನೋವಾ ಎನ್ನುವ ಕಂಪೆನಿಯ ಸಲೂನ್‌ ಆಸ್ಟ್ರೇಲಿಯದಲ್ಲಿ ಖ್ಯಾತಿ ಪಡೆದಿದೆ. ಮೆಲ್ಬರ್ನ್, ಸಿಡ್ನಿಯಲ್ಲೂ ಇದರ ಶಾಖೆಗಳಿವೆ. ಕ್ಯಾನ್‌ಬೆರಾ ಸಲೂನ್‌ನ್ನು ನಡೆಸಿಕೊಂಡು ಹೋಗುತ್ತಿರುವವರು ಮಂಗಳೂರು ಮೂಲದ ಕಿರಣ್‌.
ಸಲೂನ್‌ನಲ್ಲಿ ಹೇರ್‌ಸ್ಟೈಲಿಂಗ್‌ ಮಾತ್ರವಲ್ಲ, ಪರ್ಫ್ಯೂಮ್‌ ಕೂಡ ಇದ್ದು, ಕೊಹ್ಲಿ ಕೆಲವನ್ನು ಖರೀದಿಸಿದ್ದಾರೆ.

ನಮಗೆ ವಿಶೇಷ ಅನುಭವ
ಇದುವರೆಗೆ ನಮ್ಮ ಸಲೂನ್‌ಗೆ ಈ ರೀತಿ ಖ್ಯಾತನಾಮರು ಬಂದದ್ದಿಲ್ಲ, ಆಸ್ಟ್ರೇಲಿಯದ ಚಿತ್ರತಾರೆಯರು ಬರುತ್ತಿರುತ್ತಾರೆ. ಕೊಹ್ಲಿ ಬಂದು ತೆರಳಿದ್ದು ವಿಶೇಷ ಅನುಭವ ಎಂದು ಕಿರಣ್‌ “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ಟಾಪ್ ನ್ಯೂಸ್

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

1-eqwewqe

Adelaide Test: ಭಾರತಕ್ಕೆ ಹಗಲು-ರಾತ್ರಿ ಅಭ್ಯಾಸ ಪಂದ್ಯ

K L RAhul

KL Rahul ಆರಂಭಿಕನಾಗಿಯೇ ಉಳಿಯಲಿ: ಪೂಜಾರ ಸಲಹೆ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

3-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.