Desi Swara: ಕರ್ನಾಟಕ ರಾಜ್ಯೋತ್ಸವ- ಕನ್ನಡ ರತ್ನ ಪ್ರಶಸ್ತಿ ಪ್ರದಾನ


Team Udayavani, Nov 30, 2024, 11:45 AM IST

Desi Swara: ಕರ್ನಾಟಕ ರಾಜ್ಯೋತ್ಸವ- ಕನ್ನಡ ರತ್ನ ಪ್ರಶಸ್ತಿ ಪ್ರದಾನ

ದುಬಾೖ:ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಳ ಅದ್ಧೂಯಾಗಿ ನೆರವೇರಿಸಲಾಯಿತು. ನ.9ರಂದು ಕ್ರೆಸೆಂಟ್‌ ಇಂಗ್ಲಿಷ್‌ ಸ್ಕೂಲ್‌, ಅಲ್‌ ಕ್ವಾಸಿಸ್‌, ದುಬೈ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ| ಸಿ.ಎನ್‌. ಮಂಜುನಾಥ್‌, ಸಂಸದರು – ಲೋಕಸಭಾ ಸದಸ್ಯರು, ಹೆಸರಾಂತ ಹೃದ್ರೋಗ ತಜ್ಞ ಮತ್ತು ಬೆಂಗಳೂರಿನ ಜಯದೇವ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯೋವಾಸ್ಕಾಲರ್‌ಸೈನ್ಸ್‌- ರಿಸರ್ಚ್‌ನ ಮಾಜಿ ನಿರ್ದೇಶಕರು, ದಂಪತಿ ಸಮೇತರಾಗಿ ಪಾಲ್ಗೊಂಡು “ಕನ್ನಡ ರತ್ನ’ ಪ್ರಶಸ್ತಿ ಸ್ವೀಕರಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಮುಖ್ಯ ಭಾಷಣಕಾರರಾಗಿ ದುಬಾೖ ಕನ್ನಡಿಗರನ್ನುದ್ದೇಶಿಸಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆರೋಗ್ಯ, ಆಹಾರ, ಸಂಬಂಧಗಳ ಬಗ್ಗೆ ಸುದೀರ್ಘ‌ವಾಗಿ ಮಾತನಾಡಿದರು.

ಪ್ರತೀ ವರ್ಷ ಗಲ್ಫ್ ರಾಷ್ಟ್ರಗಳ ಅದ್ಭುತ ಸಮಾಜ ಸೇವಕರನ್ನು ಗುರುತಿಸಿ ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ಕೊಡ ಮಾಡುವ ಅಂತಾರಾಷ್ಟ್ರೀಯ ಡಾ|ಪುನೀತ್‌ ರಾಜಕುಮಾರ್‌ ಪ್ರಶಸ್ತಿಯನ್ನು ಬಾಲಕೃಷ್ಣ ಸಾಲಿಯಾನ್‌, ಸಮಾಜ ಸೇವಕರು ದುಬಾೖ ಇವರಿಗೆ ಪ್ರದಾನ ಮಾಡಲಾಯಿತು.

ಛಾಯಾದೇವಿ ಕೃಷ್ಣಮೂರ್ತಿ ಅವರ ಸಮಾಜಮುಖಿ ಮತ್ತು ಮಾನವಪರ ಕಾರ್ಯಗಳನ್ನು ಗೌರವಿಸಿ 2024ರ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಗಲ್ಫ್ ಸಮಾಜಕಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರವೀಣ್‌ ಶೆಟ್ಟಿ NRI ಫೋರಂ ಯುಎಇ  ಅವರು ಕನ್ನಡಿಗರು ಕನ್ನಡ ಕೂಟದ ವೇದಿಕೆಯಲ್ಲಿಯೇ ಕನ್ನಡ ಭವನಕ್ಕಾಗಿ ಆಗ್ರಹಿಸಿದರು. ನಮಗೆ ಕನ್ನಡ ಭವನ್‌ ನಿರ್ಮಿಸಲು ಹಣದ ಆವಶ್ಯಕತೆ ಇಲ್ಲ, ಸರಕಾರದ ಮಟ್ಟದಲ್ಲಿ ಅನುಮತಿ ಕೊಡಿಸುವಂತೆ ಕನ್ನಡ NRI ಫೋರಂನ ಅಧ್ಯಕ್ಷರಾದ ಡಾ| ಆರತಿ ಕೃಷ್ಣ ಮತ್ತು ಸಂಸದರಾದ ಡಾ| ಸಿ. ಎನ್‌. ಮಂಜುನಾಥ್‌ ಅವರನ್ನು ವಿನಂತಿಸಿದರು.

ಡಾ| ಆರತಿ ಕೃಷ್ಣ ಅವರು ತಮ್ಮ ಭಾಷಣದಲ್ಲಿ ಮುಂದಿನ ರಾಜ್ಯೋತ್ಸವದ ವೇಳೆ ಶುಭ ಸುದ್ದಿಯೊಂದಿಗೆ ಮರಳುವುದಾಗಿ ಘೋಷಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್‌ ಜೋಶಿ ಅವರು ಕನ್ನಡಿಗರು ಕನ್ನಡ ಕೂಟದ ಕಾರ್ಯಗಳನ್ನು ಶ್ಲಾ ಸಿ, ಕನ್ನಡ ಭವನ ನಿರ್ಮಾಣಕ್ಕಾಗಿ ಸಾಹಿತ್ಯ ಪರಿಷತ್‌ನ ಕಡೆಯಿಂದ ಬೇಕಾದ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು.

ಸಂಜೆ ನೆಡೆದ ಕಾರ್ಯಕ್ರಮದಲ್ಲಿ ಕನ್ನಡ NRI ಫೋರಂನ ಅಧ್ಯಕ್ಷರಾದ ಡಾ| ಆರತಿ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್‌ ಜೋಶಿ, ಡಾ| ಬಿ.ಆರ್‌.ಶೆಟ್ಟಿ ಉದ್ಯಮಿಗಳು, ಪ್ರವೀಣ್‌ ಶೆಟ್ಟಿ ಅಧ್ಯಕ್ಷರು ಫಾರ್ಚ್‌ಯೂನ್‌ ಹೊಟೇಲ್ಸ್‌ , ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು ಅಬುಧಾಬಿ ಕನ್ನಡ ಸಂಘ, ಸತೀಶ್‌ ಪೂಜಾರಿ ಅಧ್ಯಕ್ಷರು ಶಾರ್ಜಾ ಕನ್ನಡ ಸಂಘ, ಬು ಅಬ್ದುಲ್ಲಾ ಉದ್ಯಮಿಗಳು ಯುಎಈ, ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ನ ನಿಕಟಪೂರ್ವ ಅಧ್ಯಕ್ಷರಾದ ಸಾದನ್‌ ದಾಸ್‌ ಮುಂತಾದ ಗಣ್ಯರು ಮತ್ತು ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ಸಂಘದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಇದೇ ಕಾರ್ಯಕ್ರಮದಲ್ಲಿ ಡಾ| ಸುಷ್ಮಾ ಶಂಕರ್‌ ಅವರ ಭೂತದ ಹಾಡು ಪುಸ್ತಕನ್ನು ಲೋಕಾರ್ಪಣೆಗೊಳಿಸಲಾಯಿತು. ಅಲ್ಲದೇ ಅಂತಾರಾಷ್ಟ್ರೀಯ ಬೈಕ್‌ ರೇಸರ್‌ಐಶ್ವರ್ಯ ಪಿಸ್ಸೆ ಅವರ ಸಾಧನೆಗಾಗಿ ಸಮ್ಮಾನಿಸಲಾಯಿತು. ದಿ| ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡಿಗರು ದುಬಾೖ ಸಂಘದ ಸದಸ್ಯರು ಗೌರವ ಸಲ್ಲಿಸಿದರು.

ಅವರ ಮಗಳಾದ ಸುಧಾ ನರಸಿಂಹರಾಜು ಅವರು ವೀಡೀಯೋ ಮೂಲಕ ದುಬಾೖ ಕನ್ನಡಿಗರಿಗೆ ವಂದನೆ ಸಲ್ಲಿಸಿದರು.
ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ಭೈರತಿ ರಣಗಲ್‌ ಚಿತ್ರದ ಟ್ರೇಲರ್‌ ಅನ್ನು ಪ್ರದರ್ಶಿಸಿದ್ದು ದುಬಾೖ ಕನ್ನಡಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಕಾರ್ಯಕ್ರಮದ ಪ್ರಾಯೋಜಕರನ್ನು ಮುಖ್ಯ ಅತಿಥಿಗಳು ಸಮ್ಮಾನಿಸಿ ಉತ್ತೇಜಿಸಿದ್ದು ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು.
ಈ ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್‌ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರಲ್ಲದೇ ಕಲಾವಿದರು ಹಾಡು, ನೃತ್ಯ ಸೇರಿದಂತೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದುದ್ದಕ್ಕೂ ಹಳದಿ, ಕೆಂಪು ಬಾವುಟ ಹಾರಾಡಿ, ಎಲ್ಲರ ಬಾಯಲ್ಲಿ ಕನ್ನಡ ಜಯಘೋಷ ಮೊಳಗಿತು. ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದ ರವಿ ಸಂತು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆದರು.

 

 

ಟಾಪ್ ನ್ಯೂಸ್

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

JP-Nadda

HMPV Issue: ಎಚ್‌ಎಂಪಿವಿ ಹೊಸ ವೈರಸ್ ಏನಲ್ಲ, ಆತಂಕಪಡುವ ಅಗತ್ಯವಿಲ್ಲ: ಜೆ.ಪಿ.ನಡ್ಡಾ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

arrested

Mangaluru: ಕಾರಾಗೃಹದೊಳಗೆ ಮೊಬೈಲ್ ಎಸೆಯಲು ಯತ್ನಿಸಿದವ ಅರೆಸ್ಟ್

Beggars baby

Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

JP-Nadda

HMPV Issue: ಎಚ್‌ಎಂಪಿವಿ ಹೊಸ ವೈರಸ್ ಏನಲ್ಲ, ಆತಂಕಪಡುವ ಅಗತ್ಯವಿಲ್ಲ: ಜೆ.ಪಿ.ನಡ್ಡಾ

ACT

Mangaluru: ಕೊಕೇನ್‌, ಚರಸ್‌ ಸೇವನೆ; ಮೂವರ ಬಂಧನ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

car-parkala

Brahmavar: ಕಂಟೈನರ್‌ ಢಿಕ್ಕಿ; ಬೈಕ್‌ ಸಹಸವಾರೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.