Arrested: ಎಂಡಿಎಂಎ ಪೂರೈಕೆ; ಆರೋಪಿ ಬಂಧನ
Team Udayavani, Nov 30, 2024, 10:19 PM IST
ಉಳ್ಳಾಲ: ಮಂಗಳೂರು ನಗರದ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್ ಟೀಮ್‌ನವರು ನಿಷೇ ಧಿತ ಎಂಡಿಎಂಎಯನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಝ್ (24) ಬಂಧಿತ. ಆತನಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಮೋಕ್ ಪಾಟ್, ಸಾಗಾಟಕ್ಕೆ ಬಳಸಿದ್ದ ಕಾರು, 2 ಮೊಬೈಲ್ ಸಹಿತ ಒಟ್ಟು 7,76,980 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.