Hebri: ಕಸದ ರಾಶಿಯಲ್ಲಿ ಅಪರಿಚಿತ ಶವ ಪತ್ತೆ
Team Udayavani, Nov 30, 2024, 10:25 PM IST
ಹೆಬ್ರಿ: ಹೆಬ್ರಿ ಕೆಳಪೇಟೆ ಲಯನ್ ಸರ್ಕಲ್‌ನ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಸುಮಾರು 40ರಿಂದ 50 ವರ್ಷ ಪ್ರಾಯದ ವ್ಯಕ್ತಿ ಬಿಳಿ ಗೆರೆಗಳಿರುವ ನೀಲಿ ಬಣ್ಣದ ಬರ್ಮುಡಾ ಧರಿಸಿದ್ದು, ಅಂಗಾತ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಇನ್ಯಾವುದೊ ಕಾರಣದಿಂದ ಮೃತಪಟ್ಟಿದ್ದಾನೋ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.