Surathkal: ನಿಯಂತ್ರಣ ತಪ್ಪಿದ ಇವಿ ಕಾರ್; ಇಬ್ಬರಿಗೆ ಗಾಯ
Team Udayavani, Dec 1, 2024, 9:34 PM IST
ಸುರತ್ಕಲ್: ಸುರತ್ಕಲ್ ಜಂಕ್ಷನ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇವಿ ಕಾರೊಂದು ಯದ್ವಾತದ್ವಾ ಚಲಿಸಿದ ಕಾರಣ ಡಿಕ್ಕಿ ಹೊಡೆದು ಇಬ್ಬರಿಗೆ ಗಾಯವಾದ ಘಟನೆ ರವಿವಾರ ನಡೆದಿದೆ.
ಸುರತ್ಕಲ್ ಸೇವಾ ವೃಂದ ಸಭಾಂಗಣದ ಬಳಿ ಫುಟ್‌ಪಾತ್ ಏರಿದ ಕಾರು ಓರ್ವನ ಮೇಲೆಯೇ ಹರಿದರೆ ,ಇನ್ನೋರ್ವನಿಗೆ ಢಿಕ್ಕಿ ಹೊಡೆಯಿತು. ಉತ್ತರ ಭಾರತ ಮೂಲದ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಓಡಿ ತಪ್ಪಿಸಿಕೊಂಡಿದ್ದು ಅಪಾಯದಿಂದ ಪಾರಾದರು.