Fraud Case: ಬಂಟ್ವಾಳದ ಉದ್ಯಮಿಗೆ 9.6 ಕೋ.ರೂ. ವಂಚನೆ: ನಿರ್ಮಾಪಕನ ವಿರುದ್ಧ ದೂರು
Team Udayavani, Dec 2, 2024, 6:34 AM IST
ಬೆಂಗಳೂರು: ಕೋವಿಡ್ ಸಂದರ್ಭ ಗೇರುಬೀಜ ಸಂಸ್ಕರಣೆ ಉದ್ಯಮಿಗೆ ಸಹಾಯ ಮಾಡುವ ನೆಪದಲ್ಲಿ ಹೂಡಿಕೆ ಹೆಸರಿನಲ್ಲಿ 9.6 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ “ವೀರ ಕಂಬಳ’ ಎಂಬ ತುಳು ಸಿನೆಮಾ ನಿರ್ಮಾಪಕ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಂಟ್ವಾಳ ಮೂಲದ ಉದ್ಯಮಿ ಟಿ. ವರದರಾಜು ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ಸಿನೆಮಾ ನಿರ್ಮಾಪಕ ಅರುಣ್ ರೈ, ಅರ್ಜುನ್ ರೈ, ಕೆ.ಪಿ. ಶ್ರೀನಿವಾಸ್, ರಘು ಹಾಗೂ ಗೋವಿಂದಪ್ಪ ಅವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮೋಸ ವಿವಿಧ ಆರೋಪಗಳಡಿ ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ವಂಚನೆ ಪ್ರಕರಣ?
ಉದ್ಯಮಿ ವರದರಾಜು, ನಾನು ದಕ್ಷಿಣ ಕನ್ನಡ ಜಿÇÉೆಯ ವಿವಿಧೆಡೆ ಗೇರುಬೀಜ ಸಂಸ್ಕರಣ ಘಟಕ ನಡೆಸು ತ್ತಿದ್ದು, 2020ರಕೋವಿಡ್‌ನಿಂದಾಗಿ ವ್ಯವಹಾರದಲ್ಲಿ 25 ಕೋಟಿ ರೂ. ನಷ್ಟವಾಗಿತ್ತು. ಈ ಹಿನ್ನೆಲೆ ಯಲ್ಲಿ 2023ರ ಎಪ್ರಿಲ್‌ನಲ್ಲಿ ಎಲ್ಲ ಗೇರುಬೀಜ ಸಂಸ್ಕರಣ ಘಟಕಗಳನ್ನು ಮುಚ್ಚ ಲಾಗಿತ್ತು. ಇತ್ತೀಚೆಗೆ ಯಶವಂತಪುರದ ತಾಜ್ ಹೊಟೇಲ್‌ನಲ್ಲಿ ಮಂಗಳೂರು ಮೂಲದ ಅರುಣ್ ರೈ ಪರಿಚಯವಾಗಿ ದ್ದರು. ಈ ವೇಳೆ ನನ್ನ ವ್ಯವಹಾರದ ಬಗ್ಗೆ ತಿಳಿದುಕೊಂಡು ಮೊಬೈಲ್ ಸಂಖ್ಯೆ ಪಡೆದಿದ್ದರು. ಬಳಿಕ ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದರು.
ಈ ವೇಳೆ ನಾನು, ಕ್ರೀತೆ ಸಾಫ್ಟ್ವೇರ್, ಎ.ಆರ್. ಪ್ರಾಪರ್ಟಿಸ್, ಎ.ಆರ್. ಪಿಲ್ಮನ್ಸ್, ಎಪ್ರೋ ಆಕ್ಟ್ ಮ್ಯಾನೇಜ್‌ಮೆಂಟ್ ಸರ್ವಿಸಸ್, ವಿಯಾರ ವೆಂಚರ್ಸ್ ಎಂಬ ಕಂಪೆನಿಗಳ ಮಾಲಕನಾಗಿದ್ದೇನೆ. “ವೀರ ಕಂಬಳ’ ಮತ್ತು “ಜೀಟಿಗೆ’ ಎಂಬ ಸಿನೆಮಾಗಳನ್ನು ನಿರ್ಮಿಸಿದ್ದು, ಬಿಡುಗಡೆ ಹಂತದಲ್ಲಿವೆ. ವೀರ ಕಂಬಳ ಸಿನೆಮಾ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನನಗೆ 60 ಲಕ್ಷ ರೂ. ಲಾಭಾಂಶ ನೀಡಬೇಕಿದೆ. ನನ್ನ ಕಂಪೆನಿಗಳಲ್ಲಿ ನೀವು ಹೂಡಿಕೆ ಮಾಡಿದರೆ ಮಂಗಳೂರಿನ ಗೋದಾಮಿನಲ್ಲಿರುವ 40 ಕೋಟಿ ರೂ. ಮೌಲ್ಯದ ಗೊಡಂಬಿ ಮಾರಾಟ ಮಾಡಿ ನಿಮ್ಮ 25 ಕೋಟಿ ರೂ. ಸಾಲ ತೀರಿಸಲು ಸಹಾಯ ಮಾಡುತ್ತೇನೆ. ನಿಮ್ಮ ಇಂಡಸ್ಟ್ರೀಸ್ ಮುಂದುವರಿ ಸಲು ಸಹಾಯ ಮಾಡುವೆ ಎಂದು ಭರವಸೆ ನೀಡಿದ್ದರು.
ಅದನ್ನು ನಂಬಿದ ನಾನು ಬಳಿಕ ನನ್ನ ಪರಿಚಿತರು, ಸ್ನೇಹಿತರು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅರುಣ್ ರೈ ಖಾತೆಗೆ 8.75 ಕೋಟಿ ರೂ., ರಘು ಖಾತೆಗೆ 40 ಲಕ್ಷ ರೂ. ಹಾಗೂ ಗೋವಿಂದಪ್ಪನ ಖಾತೆಗೆ 45 ಲಕ್ಷ ರೂ. ಸೇರಿ ಒಟ್ಟು 9.60 ಕೋಟಿ ರೂ. ವರ್ಗಾಯಿಸಿ¨ªೆ. ಬಳಿಕ ಕೆಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು. ಆದರೆ ಇದೀಗ ಯಾವುದೇ ಸಹಾಯ ಮಾಡದೇ, ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಉದ್ಯಮಿ ವರದರಾಜು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPS Officer: ಹಾಸನದಲ್ಲಿ ಜೀಪ್ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು
Adjustment Politcs: ಬಿವೈವಿ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ: ಶಾಸಕ ಯತ್ನಾಳ್
Local Body Election: ಫೆಬ್ರವರಿಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ: ಡಿಸಿಎಂ ಡಿಕೆಶಿ ಸುಳಿವು
Adjustment Evidence: ಏಕೆ ಕಾಯುತ್ತೀರಿ, ಈಗಲೇ ಬಿಡುಗಡೆ ಮಾಡಿ: ಬಿ.ವೈ.ವಿಜಯೇಂದ್ರ
Coffee ಪ್ರಿಯರ ತುಟಿ ಸುಡಲಿದೆ ಕಾಫಿ ಪುಡಿ ದರ! ಒಂದು ಕೆ.ಜಿ. ಕಾಫಿ ಪುಡಿಗೆ 600 ರೂ. ನಿಗದಿ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
IPS Officer: ಹಾಸನದಲ್ಲಿ ಜೀಪ್ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.