Badminton: ಪಿ.ವಿ.ಸಿಂಧು, ಲಕ್ಷ್ಯಸೇನ್‌, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್‌

ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌

Team Udayavani, Dec 2, 2024, 1:36 AM IST

Sindu-sen

ಲಕ್ನೋ: “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಸೂಪರ್‌ 300′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಪ್ರಶಸ್ತಿಗಳ ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಪುರುಷರ ಸಿಂಗಲ್ಸ್‌ ನಲ್ಲಿ ಲಕ್ಷ್ಯ ಸೇನ್‌, ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಆದರೆ ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್‌-ಸಾಯಿ ಪ್ರತೀಕ್‌, ಮಿಶ್ರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ರನ್ನರ್ ಅಪ್‌ಗೆ ಸಮಾಧಾನಪಡಬೇಕಾಯಿತು. ಭಾರತದ ಮೊದಲ ಪ್ರಶಸ್ತಿ ವನಿತಾ ಡಬಲ್ಸ್‌ ನಲ್ಲಿ ಬಂತು. ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಚೀನದ ಬಾವೊ ಲಿ ಜಿಂಗ್‌-ಲಿ ಕ್ವಿಯಾನ್‌ ಅವರನ್ನು 21-18, 21-11 ಅಂತರದಿಂದ ಮಣಿಸಿ ತಮ್ಮ ಮೊದಲ “ಸೂಪರ್‌ 300′ ಪ್ರಶಸ್ತಿಯನ್ನೆತ್ತಿದರು. 2022ರಲ್ಲಿ ಇವರು ರನ್ನರ್ ಅಪ್‌ ಆಗಿದ್ದರು.

ನೀಗಿತು ಪ್ರಶಸ್ತಿ ಬರ
ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ವಿಶ್ವದ 119ನೇ ರ್‍ಯಾಂಕ್‌ನ ಚೀನೀ ಶಟ್ಲರ್‌ ವು ಲುವೊ ಯು ಅವರನ್ನು 21-14, 21-16 ಅಂತರದಿಂದ ಮಣಿಸಿದರು. ಇದು ಸಿಂಧು ಗೆದ್ದ 3ನೇ “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌’ ಪ್ರಶಸ್ತಿ. ಇದಕ್ಕೂ ಮೊದಲು ಅವರು 2017 ಮತ್ತು 2022ರಲ್ಲಿ ಚಾಂಪಿಯನ್‌ ಆಗಿದ್ದರು.
ಈ ಸಾಧನೆಯೊಂದಿಗೆ ಸಿಂಧು 2 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಸಿಂಧು ಕೊನೆಯ ಸಲ ಪೋಡಿಯಂ ಏರಿದ್ದು 2022ರಲ್ಲಿ. ಅಂದು ಸಿಂಗಾಪುರ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು. ಈ ವರ್ಷ “ಮಲೇಷ್ಯಾ ಮಾಸ್ಟರ್ ಸೂಪರ್‌ 500′ ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ನಿರೀಕ್ಷೆ ಇತ್ತು. ಆದರೆ ಫೈನಲ್‌ನಲ್ಲಿ ಎಡವಿದರು.

ಸೇನ್‌ಗೆ ಸುಲಭ ಜಯ
ಪುರುಷರ ಸಿಂಗಲ್ಸ್‌ ವಿಭಾಗದ ಫೇವರಿಟ್‌ ಆಟಗಾರನಾಗಿದ್ದ ಲಕ್ಷ್ಯ ಸೇನ್‌ ಸಿಂಗಾಪುರದ ಜಿಯ ಹೆಂಗ್‌ ಜೇಸನ್‌ ಅವರನ್ನು ಬಹಳ ಸುಲಭದಲ್ಲಿ 21-6, 21-7 ಅಂತರದಿಂದ ಮಣಿಸಿದರು.

ರನ್ನರ್ ಅಪ್‌
ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್‌-ಸಾಯಿ ಪ್ರತೀಕ್‌ ಅವರನ್ನು ಚೀನದ ಹುವಾಂಗ್‌ ಡಿ-ಲಿಯು ಯಾಂಗ್‌ 21-14, 19-21, 21-17 ಅಂತರದಿಂದ ಹಿಮ್ಮೆಟ್ಟಿಸಿದರು.

ಮಿಶ್ರ ಡಬಲ್ಸ್‌ ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ಥಾಯ್ಲೆಂಡ್‌ನ‌ ಡೆಚಾಪೋಲ್‌ ಪುವಾರಾನುಕ್ರೋಹ್‌-ಸುಪಿಸ್ಸರ ಪೆವ್ಸಂಪ್ರಾನ್‌ ವಿರುದ್ಧ ಗೆಲುವಿನ ಆರಂಭ ಪಡೆದರೂ ಇದೇ ಲಯದಲ್ಲಿ ಸಾಗಲು ವಿಫ‌ಲರಾದರು. ಥಾಯ್ಲೆಂಡ್‌ ಜೋಡಿ 18-21, 21-14, 21-8ರಿಂದ ಗೆದ್ದು ಬಂದಿತು.

ಟಾಪ್ ನ್ಯೂಸ್

Yathanaa

Adjustment Politcs: ಬಿವೈವಿ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ: ಶಾಸಕ ಯತ್ನಾಳ್‌

1-horoscope

Daily Horosocpe: ವ್ಯಾಪಾರಿಗಳಿಗೆ ಅದೃಷ್ಟ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

DK-Shivakumar

Local Body Election: ಫೆಬ್ರವರಿಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ: ಡಿಸಿಎಂ ಡಿಕೆಶಿ ಸುಳಿವು

pududcherry-Cyclone

Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!

BY-Vijayendra

Adjustment Evidence: ಏಕೆ ಕಾಯುತ್ತೀರಿ, ಈಗಲೇ ಬಿಡುಗಡೆ ಮಾಡಿ: ಬಿ.ವೈ.ವಿಜಯೇಂದ್ರ

C.Naidu-Andra

Scraps: ಜಗನ್‌ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್‌ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ

Coffee ಪ್ರಿಯರ ತುಟಿ ಸುಡಲಿದೆ ಕಾಫಿ ಪುಡಿ ದರ! ಒಂದು ಕೆ.ಜಿ. ಕಾಫಿ ಪುಡಿಗೆ 600 ರೂ. ನಿಗದಿ

Coffee ಪ್ರಿಯರ ತುಟಿ ಸುಡಲಿದೆ ಕಾಫಿ ಪುಡಿ ದರ! ಒಂದು ಕೆ.ಜಿ. ಕಾಫಿ ಪುಡಿಗೆ 600 ರೂ. ನಿಗದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro-kabadi

Pro Kabbaddi: ದಬಾಂಗ್‌ ಡೆಲ್ಲಿಗೆ ಶರಣಾದ ತಮಿಳ್‌ ತಲೈವಾಸ್‌

Rohith-1

Day-Night Test: ಪ್ರೈಮ್‌ ಮಿನಿಸ್ಟರ್ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ

Ali-Trophy

T-20 Cricket: ಬೌಲಿಂಗ್‌ ಸೈಕ್ಲೋನ್‌; ತಮಿಳುನಾಡು ತಂಡ ತತ್ತರ, ಕರ್ನಾಟಕಕ್ಕೆ ಸುಲಭ ಗೆಲುವು

olympic-Spot

Award: ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು, ನೆರವು ನೀಡಲು ಸಿದ್ಧ: ಸಿಎಂ

ENGvsNZ: Joe Root breaks Sachin Tendulkar’s Test record

‌ENGvsNZ: ಸಚಿನ್‌ ತೆಂಡೂಲ್ಕರ್‌ ಟೆಸ್ಟ್‌ ದಾಖಲೆ ಮುರಿದ ಜೋ ರೂಟ್

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Yathanaa

Adjustment Politcs: ಬಿವೈವಿ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ: ಶಾಸಕ ಯತ್ನಾಳ್‌

1-horoscope

Daily Horosocpe: ವ್ಯಾಪಾರಿಗಳಿಗೆ ಅದೃಷ್ಟ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

DK-Shivakumar

Local Body Election: ಫೆಬ್ರವರಿಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ: ಡಿಸಿಎಂ ಡಿಕೆಶಿ ಸುಳಿವು

pududcherry-Cyclone

Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!

BY-Vijayendra

Adjustment Evidence: ಏಕೆ ಕಾಯುತ್ತೀರಿ, ಈಗಲೇ ಬಿಡುಗಡೆ ಮಾಡಿ: ಬಿ.ವೈ.ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.