ICC Chairman: ಐಸಿಸಿಗೆ ನೂತನ ಸಾರಥಿ ಜಯ್ ಶಾ; ಅಧಿಕಾರ ಸ್ವೀಕಾರ
ಜಾಗತಿಕ ಕ್ರಿಕೆಟ್ ಗದ್ದುಗೆ ಏರಿದ 5ನೇ ಭಾರತೀಯ, ಕಿರಿಯ ಅಧಿಕಾರಿ
Team Udayavani, Dec 2, 2024, 7:40 AM IST
ದುಬಾೖ: ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ರವಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನ್ಯೂಜಿಲ್ಯಾಂಡ್‌ನ ಗ್ರೆಗ್ ಬಾರ್ಕ್ಲೆ ಅವರ ಸ್ಥಾನವನ್ನು ಜಯ್ ಶಾ ತುಂಬಿದ್ದಾರೆ.
ಈ ಮೂಲಕ ಜಾಗತಿಕ ಕ್ರಿಕೆಟ್ ಮಂಡಳಿಯಲ್ಲಿ ಮುಖ್ಯಸ್ಥರಾದ ಭಾರತದ 5ನೆಯ ಮತ್ತು ಅತೀ ಕಿರಿಯ ಅಧಿಕಾರಿಯಾಗಿ ಜಯ್ ಶಾ ಗುರುತಿಸಿಕೊಂಡಿದ್ದಾರೆ. ಅವರಿಗೀಗ ಕೇವಲ 36 ವರ್ಷ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರರಾಗಿರುವ ಜಯ್ ಶಾ ಕಳೆದ 5 ವರ್ಷಗಳ ಕಾಲ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಹಿಂದೆ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಕ್ ಬಾರ್ಕ್ಲೆ ತನ್ನ ಅವಧಿ ಮುಂದುವರಿಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಐಸಿಸಿ ನಿರ್ದೇಶಕರ ಮಂಡಳಿಯಿಂದ ಅವಿರೋಧವಾಗಿ ಆಯ್ಕೆಯಾಗಿರುವ ಜಯ್ ಶಾ, ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಇದಕ್ಕೂ ಮುನ್ನ ಉದ್ಯಮಿ ಜಗಮೋಹನ್ ದಾಲ್ಮಿಯಾ, ರಾಜ್ಯಸಭೆ ಸದಸ್ಯ ಶರದ್ ಪವಾರ್, ನ್ಯಾಯವಾದಿ ಶಶಾಂಕ್ ಮನೋಹರ್, ಕೈಗಾರಿಕೋದ್ಯಮಿ ಎನ್. ಶ್ರೀನಿವಾಸನ್ ಜಾಗತಿಕ ಕ್ರಿಕೆಟ್ ಮಂಡಳಿಯಲ್ಲಿ ಕರ್ತವ್ಯ ನಿಭಾಯಿಸಿದ್ದರು.
ಬಿಸಿಸಿಐ ಇನ್ನು ನೂತನ ಕಾರ್ಯದರ್ಶಿ ಒಬ್ಬರನ್ನು ಕಾಣಬೇಕಿದೆ.
ಒಲಿಂಪಿಕ್ಸ್‌ಗೆ ಕ್ರಿಕೆಟ್….
ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬೆನ್ನಲ್ಲೇ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯ ಜತೆಗೆ ಜಗದ ಗಲದ ಅಭಿಮಾನಿಗಳಿಗೆ ಕ್ರಿಕೆಟ್ ಹೆಚ್ಚು ತಲುಪುವಂತೆ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಜಯ್ ಶಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Badminton: ಪಿ.ವಿ.ಸಿಂಧು, ಲಕ್ಷ್ಯಸೇನ್, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್
Pro Kabbaddi: ದಬಾಂಗ್ ಡೆಲ್ಲಿಗೆ ಶರಣಾದ ತಮಿಳ್ ತಲೈವಾಸ್
Day-Night Test: ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ
T-20 Cricket: ಬೌಲಿಂಗ್ ಸೈಕ್ಲೋನ್; ತಮಿಳುನಾಡು ತಂಡ ತತ್ತರ, ಕರ್ನಾಟಕಕ್ಕೆ ಸುಲಭ ಗೆಲುವು
Award: ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು, ನೆರವು ನೀಡಲು ಸಿದ್ಧ: ಸಿಎಂ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Illegal Gun Purchase case: ಬೈಡನ್ ಬೇಷರತ್ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!
Kollur: ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯ
Mangaluru: ಸ್ಮಾರ್ಟ್‌ಸಿಟಿಯಿಂದ ಬೀಚ್ ಸ್ವಚ್ಛತೆಗೆ ಆದ್ಯತೆ
Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.