Controversy Statement: ಬಾಂಗ್ಲಾ-ಭಾರತ ನಡುವೆ ವ್ಯತ್ಯಾಸ ಕಾಣುತ್ತಿಲ್ಲ: ಮೆಹಬೂಬಾ ವಿವಾದ
ಪಿಡಿಪಿ ಮುಖ್ಯಸ್ಥೆ ಮುಫ್ತಿ ಹೇಳಿಕೆಗೆ ಬಿಜೆಪಿ ಖಂಡನೆ, ಕ್ರಮಕ್ಕೆ ಆಗ್ರಹ
Team Udayavani, Dec 2, 2024, 7:15 AM IST
ಶ್ರೀನಗರ: “ಭಾರತ ಮತ್ತು ಬಾಂಗ್ಲಾ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ’. ಹೀಗೆಂದು ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ. ಇದೀಗ ವಿವಾದಕ್ಕೆ ಗುರಿಯಾಗಿದ್ದು, ಮುಫ್ತಿ ಹೇಳಿಕೆ ಬಗ್ಗೆ ತೀವ್ರ ಟೀಕೆಯೂ ವ್ಯಕ್ತವಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಹೆಚ್ಚಿರುವಂತೆಯೇ ಮುಫ್ತಿ ಹೇಳಿಕೆ ಕಿಡಿ ಹೊತ್ತಿಸಿದೆ.
ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, “ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ಭಾರತದಲ್ಲೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದ್ದರೆ ಅಲ್ಲಿಗೂ ಇಲ್ಲಿಗೂ ವ್ಯತ್ಯಾಸ ಏನಿದೆ? ನನಗಂತೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಸಂಭಾಲ್ ಘಟನೆ ಮತ್ತು ಸರ್ವಧರ್ಮದ ಸಹಬಾಳ್ವೆಗೆ ಸಾಕ್ಷಿಯಾಗಿದ್ದ ಅಜ್ಮೇರ್ ದರ್ಗಾ ಪರಿಸ್ಥಿತಿ ದುರುದೃಷ್ಟಕರವಾಗಿದೆ ಎಂದಿದ್ದಾರೆ.ಜತೆಗೆ ರಸ್ತೆಗಳ ಗುಣಮಟ್ಟ ಸುಧಾರಿಸುವುದನ್ನು ಬಿಟ್ಟು ಸರ್ಕಾರ ದೇವಾಲಯ ಹುಡುಕಲು ಮಸೀದಿಯನ್ನು ಅಗೆಯಲು ಶುರುವಿಟ್ಟಿದೆ ಎಂದೂ ಟೀಕಿಸಿದ್ದಾರೆ.
ಮುಫ್ತಿ ಹೇಳಿಕೆಗೆ ಬಿಜೆಪಿಯ ಹಲವು ನಾಯಕರು ಕೆಂಡಾಮಂಡಲರಾಗಿದ್ದು, ಮುಫ್ತಿ ದೇಶವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಜಮ್ಮು-ಕಾಶ್ಮೀರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noidaದಿಂದ ದೆಹಲಿವರೆಗೆ ಉತ್ತರಪ್ರದೇಶ ರೈತರ ಪ್ರತಿಭಟನಾ ಜಾಥಾ; ಬಿಗಿ ಭದ್ರತೆ, Traffic ಜಾಮ್
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!
Scraps: ಜಗನ್ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ
Maharashtra Govt. Formation: ಹೊಸ ಸಿಎಂಗೆ ಸಂಪೂರ್ಣ ಸಹಕಾರ ನೀಡುವೆ: ಏಕನಾಥ ಶಿಂಧೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Noidaದಿಂದ ದೆಹಲಿವರೆಗೆ ಉತ್ತರಪ್ರದೇಶ ರೈತರ ಪ್ರತಿಭಟನಾ ಜಾಥಾ; ಬಿಗಿ ಭದ್ರತೆ, Traffic ಜಾಮ್
Retirement: 37ನೇ ವಯಸ್ಸಿಗೆ ನಟನೆಗೆ ಗುಡ್ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ
IPS Officer: ಹಾಸನದಲ್ಲಿ ಜೀಪ್ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.