Waqf Property: ಅನಧಿಕೃತವಾಗಿ ಒತ್ತುವರಿಯಾದ ವಕ್ಫ್ ಆಸ್ತಿ ಮಾಹಿತಿ ಕೋರಿದ ಜೆಪಿಸಿ
ರಾಜ್ಯಗಳಿಗೆ ಜಂಟಿ ಸಂಸದೀಯ ಸಮಿತಿ ಮನವಿ, ಕರ್ನಾಟಕದಲ್ಲಿ 42 ಆಸ್ತಿ ಇರುವ ಬಗ್ಗೆ ಸಮಿತಿಗೆ ಮಾಹಿತಿ
Team Udayavani, Dec 2, 2024, 7:10 AM IST
ನವದೆಹಲಿ: ಸಾಚಾರ್ ಸಮಿತಿಗೆ ನೀಡಿರುವ ಮಾಹಿತಿಯಂತೆ ದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿರುವ ವಕ್ಫ್ ಆಸ್ತಿಗಳ ಮಾಹಿತಿ ನೀಡುವಂತೆ ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆ ಜಂಟಿ ಸದನ ಸಮಿತಿಯು ವಿವಿಧ ರಾಜ್ಯ ಸರ್ಕಾರಗಳನ್ನು ಕೋರಿದೆ. ಜತೆಗೆ ವಕ್ಫ್ ಆಸ್ತಿಗಳ ಬಗ್ಗೆ ಪ್ರಸ್ತುತದ ವಿಸ್ತೃತ ವರದಿ ನೀಡುವಂತೆಯೂ ಕೇಳಿದೆ.
ವಕ್ಫ್ ಕಾಯ್ದೆ ಸೆಕ್ಷನ್ 40 ಚಲಾಯಿಸಿ ವಕ್ಫ್ ಬೋರ್ಡ್‌ಗಳು ಹಕ್ಕು ಪ್ರತಿಪಾದಿಸಿರುವ ಆಸ್ತಿಗಳ ಬಗ್ಗೆಯೂ ರಾಜ್ಯಗಳಿಂದ ಜೆಪಿಸಿ ಮಾಹಿತಿ ಬಯಸಿದೆ. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸೆಕ್ಷನ್ 40ಕ್ಕೆ ತಿದ್ದುಪಡಿ ತಂದಿದ್ದು ಯಾವುದೇ ಆಸ್ತಿ ವಕ್ಫ್ಗೆ ಸೇರಿಧ್ದೋ ಅಲ್ಲವೋ ಎಂದು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಬೋರ್ಡ್‌ಗಳಿಗೆ ನೀಡಿತ್ತು.
2005-06ರಲ್ಲಿ ವಿವಿಧ ರಾಜ್ಯಗಳ ವಕ್ಫ್ ಬೋರ್ಡ್‌ಗಳು ಅನಧಿಕೃತ ಒತ್ತುವರಿ ಮಾಡಿರುವ ಬಗ್ಗೆ ಸಾಚಾರ್ ಸಮಿತಿಗೆ ಮಾಹಿತಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಮೂಲಕ ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲು ಸದನ ಸಮಿತಿ ಮುಂದಾಗಿದೆ.
ಮೂಲಗಳ ಪ್ರಕಾರ, ಸಾಚಾರ್ ಸಮಿತಿ ವರದಿಯಂತೆ ದೆಹಲಿಯಲ್ಲಿ 316, ರಾಜಸ್ಥಾನದಲ್ಲಿ 60, ಕರ್ನಾಟದಲ್ಲಿ 42, ಉತ್ತರ ಪ್ರದೇಶದಲ್ಲಿ 60 ಮತ್ತು ಒಡಿಶಾದಲ್ಲಿ 53 ಇಂತಹ ಆಸ್ತಿಗಳಿವೆ. ಈ 6 ರಾಜ್ಯಗಳಿಂದ ಆಸ್ತಿಗಳ ಬಗ್ಗೆ ಪ್ರಸ್ತುತದ ಮಾಹಿತಿಯನ್ನು ಬಯಸಲಾಗಿದೆ. ಜತೆಗೆ ಇತರ ಹಲವು ರಾಜ್ಯಗಳಿಂದಲೂ ಮಾಹಿತಿ ಪಡೆಯಲು ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!
Scraps: ಜಗನ್ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ
Maharashtra Govt. Formation: ಹೊಸ ಸಿಎಂಗೆ ಸಂಪೂರ್ಣ ಸಹಕಾರ ನೀಡುವೆ: ಏಕನಾಥ ಶಿಂಧೆ
Controversy Statement: ಬಾಂಗ್ಲಾ-ಭಾರತ ನಡುವೆ ವ್ಯತ್ಯಾಸ ಕಾಣುತ್ತಿಲ್ಲ: ಮೆಹಬೂಬಾ ವಿವಾದ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Retirement: 37ನೇ ವಯಸ್ಸಿಗೆ ನಟನೆಗೆ ಗುಡ್ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ
IPS Officer: ಹಾಸನದಲ್ಲಿ ಜೀಪ್ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.