Minority Attack: ಬಾಂಗ್ಲಾದಲ್ಲಿ ಭಾರತದ ಬಸ್ ಮೇಲೆ ದಾಳಿ, ದೇಶ ವಿರೋಧಿ ಘೋಷಣೆ!
Team Udayavani, Dec 2, 2024, 7:19 AM IST
ಢಾಕಾ: ತ್ರಿಪುರಾದ ಅಗರ್ತಲಾದಿಂದ ಪಶ್ಚಿಮ ಬಂಗಾಲದ ಕೋಲ್ಕತಾಕ್ಕೆ ಬಾಂಗ್ಲಾದ ರಾಜಧಾನಿ ಢಾಕಾ ಮಾರ್ಗವಾಗಿ ಬರುತ್ತಿದ್ದ ಭಾರತದ ಬಸ್ ಮೇಲೆ ಬಾಂಗ್ಲಾದೇಶಿಗರು ದಾಳಿ ನಡೆಸಿ, ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿ, ಭಾರತ ವಿರೋಧಿ ಘೋಷಣೆ ಕೂಗಿದ ಘಟನೆ ನಡೆದಿದೆ. ಬಾಂಗ್ಲಾದ ಬ್ರಹ್ಮಾನ್‌ಬಾರಿಯ ಬಿಶ್ವಾ ರೋಡ್‌ನಲ್ಲಿ ಈ ಕೃತ್ಯ ನಡೆದಿದೆ ಎಂದು ತ್ರಿಪುರಾದ ಸಾರಿಗೆ ಸಚಿವ ಸುಶಾಂತ ಚೌಧರಿ ರವಿವಾರ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ದಾಳಿ ಮುಂದುವರಿದಿರುವಂತೆಯೇ ಈ ಘಟನೆ ಮಹತ್ವ ಪಡೆದಿದೆ. ಬಸ್ ಸರಿಯಾದ ಮಾರ್ಗದಲ್ಲಿ ಬರುತ್ತಿದ್ದರೂ ಉದ್ದೇಶಪೂರ್ವಕವಾಗಿ ಟ್ರಕ್ ಒಂದು ಢಿಕ್ಕಿ ಹೊಡೆದಿದೆ. ಇದೇ ವೇಳೆ ಬಸ್ ಎದುರಿಗೆ ಆಟೋ ರಿಕ್ಷಾ ಬಂದಿದ್ದು, ಬಸ್ ಮತ್ತು ಆಟೋಗೆ ಢಿಕ್ಕಿಯಾಗಿದೆ. ತತ್‌ಕ್ಷಣವೇ ಸ್ಥಳೀಯರು ಜಮಾಯಿಸಿ ಕೃತ್ಯ ಎಸಗಿದ್ದಾರೆ ಎಂದು ಚೌಧರಿ ತಿಳಿಸಿದ್ದಾರೆ.
ಜಾಮೀನು ಅರ್ಜಿ ಇಂದು ವಿಚಾರಣೆ:
ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ಛತ್ತೋಗ್ರಾಮ ಕೋರ್ಟ್‌ನಲ್ಲಿ ನಡೆಯಲಿದೆ.
ಪತ್ರಕರ್ತೆ ಮೇಲೆ ಗುಂಪು ದಾಂಧಲೆ
ಬಾಂಗ್ಲಾದ ಪತ್ರಕರ್ತೆ ಮುನ್ನಿ ಸಾಹಾ ಅವರನ್ನು ಜನರ ಗುಂಪೊಂದು ಸುತ್ತುವರಿದು ನಿಂದಿಸಿರುವ ಘಟನೆ ಢಾಕಾ ದಲ್ಲಿ ನಡೆದಿದೆ. ಬಾಂಗ್ಲಾವನ್ನು ಭಾರತದ ಭಾಗವನ್ನಾಗಿಸಲು ಪ್ರಯತ್ನಿಸುತ್ತಿದ್ದೀಯ, ನಿನ್ನ ಕೈಗೆ ವಿದ್ಯಾರ್ಥಿಗಳ ರಕ್ತ ಮೆತ್ತಿದೆ ಎಂದು ಆ ಗುಂಪು ದೂರಿ ದೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಮುನ್ನಿ ಅವರನ್ನು ವಶಕ್ಕೆ ಪಡೆದು, ಬ ಳಿಕ ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
America: ಡಾಲರ್‌ಗೆ ಪರ್ಯಾಯ ಕರೆನ್ಸಿ ಬಳಸಿದರೆ ಹುಷಾರ್: ಡೊನಾಲ್ಡ್ ಟ್ರಂಪ್
ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ
Pakistan: ಶಿಯಾ-ಸುನ್ನಿ ನಡುವೆ ಭುಗಿಲೆದ್ದ ಹಿಂ*ಸಾಚಾರ, ಗುಂಡಿನ ದಾಳಿ; 124 ಮಂದಿ ಸಾವು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Retirement: 37ನೇ ವಯಸ್ಸಿಗೆ ನಟನೆಗೆ ಗುಡ್ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ
IPS Officer: ಹಾಸನದಲ್ಲಿ ಜೀಪ್ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.