Pachanady: ಜನ, ಜಾನುವಾರು, ಬೆಳೆಗಳ ಅಧ್ಯಯನ; ಉಪಲೋಕಾಯುಕ್ತರ ಸೂಚನೆ

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ: ಘಟಕದ ಕಾರ್ಯವೈಖರಿಗೆ ಮೆಚ್ಚುಗೆ

Team Udayavani, Dec 2, 2024, 12:47 PM IST

1

ಪಚ್ಚನಾಡಿ: ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕ ವ್ಯಾಪ್ತಿಯ ಸುತ್ತಲಿನ 5-6 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರು, ತರಕಾರಿ ಬೆಳೆಗಳು, ಜಾನುವಾರುಗಳಿಂದ ದೊರೆಯುವ ಹಾಲು ಮೊದಲಾದವುಗಳನ್ನು ಪರೀಕ್ಷೆಗೆ ಒಳಪಡಿಸಿ ವಿಷಕಾರಿ ಅಂಶಗಳಿವೆಯೇ ಎಂದು ಪತ್ತೆ ಹಚ್ಚುವುದು ಅತೀ ಅಗತ್ಯವಾಗಿದೆ. ಜತೆಗೆ ಸಣ್ಣ ಮಕ್ಕಳನ್ನೂ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿ ಆರೋಗ್ಯ ಮೇಲೆ ಏನಾದರೂ ಪರಿಣಾಮವಿದೆಯೇ ತಿಳಿಯಬೇಕು ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾಯ ಮೂರ್ತಿ ಬಿ. ವೀರಪ್ಪ ಅವರು ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ.

ಮೂರು ದಿನಗಳ ಭೇಟಿಗೆ ಮಂಗಳೂ ರಿಗೆ ಆಗಮಿಸಿರುವ ಅವರು ರವಿವಾರ ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಹಳೆ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಅವರು ಅಲ್ಲಿ ಹಸಿ ಕಸ ವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿ, ಘಟಕದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಅಲ್ಲಿಯೇ ಇದ್ದ ಕಾರ್ಮಿಕರೊಂದಿಗೆ ಮಾತನಾಡಿ, ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರು. ಆರೋಗ್ಯ ತಪಾಸಣೆ, ಊಟದ ವ್ಯವಸ್ಥೆ, ವಾಸ್ತವ್ಯ ಇತ್ಯಾದಿಗಳ ಬಗ್ಗೆ ವಿಚಾರಿಸಿದ ಉಪಲೋಕಾಯುಕ್ತರು, ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಪ್ರಮುಖರಿಗೆ ಸೂಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಬಳಿಕ ತ್ಯಾಜ್ಯವನ್ನು ಉರುವಲು ಉಂಡೆಯಾಗಿ ಮಾಡುವ ಘಟಕದ ಪ್ರಕ್ರಿಯೆಯನ್ನೂ ಪರಿಶೀಲಿಸಿ ಮಾಹಿತಿ ಪಡೆದರು.

ತ್ಯಾಜ್ಯ ಸಂಸ್ಕರಣ ವ್ಯವಸ್ಥೆಗೆ ಶ್ಲಾಘನೆ
ಮನಪಾ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲೆಯ ಉದಾಹರಣೆ ನೀಡಿದ ಉಪ ಲೋಕಾಯುಕ್ತರು, ಅಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅವ್ಯವಸ್ಥೆಯ ಗೂಡಾಗಿದ್ದು, ನಾಯಿ, ಹಂದಿ, ಕಾಗೆಗಳು ತ್ಯಾಜ್ಯವನ್ನು ಕಿತ್ತು ತಿನ್ನುತ್ತಿವೆ. ಸ್ಥಳೀಯರಿಗೂ ಕಾಟ ಕೊಡುತ್ತಿವೆ. ಅಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇಲ್ಲಿಯ ವರೆಗೆ ಭೇಟಿ ನೀಡಿರುವ ಜಿಲ್ಲೆಗಳ ಪೈಕಿ ಮಂಗಳೂರಿನ ವ್ಯವಸ್ಥೆ ಅತ್ಯಂತ ಉತ್ತಮವಾಗಿದೆ ಎಂದರು.

ಎಲ್ಲ ಜಿಲ್ಲೆಗಳಿಗೂ ಭೇಟಿ, ಪರಿಶೀಲನೆ
ಈ ವೇಳೆ ಮಾಧ್ಯದವರ ಜತೆಗೆ ಮಾತನಾಡಿದ, ಉಪಲೋಕಾ ಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಲೋಕಾಯುಕ್ತ ದಿಂದ ತ್ಯಾಜ್ಯ ನಿರ್ವಹಣೆ, ಸರಕಾರಿ ಜಾಗಗಳ ಅತಿಕ್ರಮಣ, ಆಸ್ಪತ್ರೆ, ಜೈಲು, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಈಗಾಗಲೇ ಕಲಬುರಗಿ, ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಡೆಸಿದ ಸಂಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗುವುದು ಎಂದರು.

ವಿದ್ಯುತ್‌ ಉತ್ಪಾದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ
ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಬೆಂಗಳೂರಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಗೈಲ್‌ ಸಂಸ್ಥೆಯವರು ಈ ನಿಟ್ಟನಲ್ಲಿ ಮುಂದೆ ಬಂದಿದ್ದಾರೆ. ಅವರನ್ನು ಇಲ್ಲಿಗೆ ಕರೆಸಿ, ಹಳೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು.

ಗೊಬ್ಬರದಿಂದ ತರಕಾರಿ ಬೆಳೆದು ಪರೀಕ್ಷಿಸಿ
ತಾಜ್ಯದಿಂದ ಗೊಬ್ಬರ ತಯಾರಿಸುವುದು ಉತ್ತಮ ಪರಿಕಲ್ಪನೆ. ಆದರೆ ಅದರಿಂದ ಬೆಳೆಯುವ ತರಕಾರಿಗಳ ಮೇಲೆ ಏನಾದರೂ ಈ ತ್ಯಾಜ್ಯದ ವಿಷಕಾರಿ ಅಂಶಗಳು ಸೇರುತ್ತವೆಯೇ ಎಂದು ಪರೀಕ್ಷಿಸುವ ಅಗತ್ಯವಿದೆ. ಆದ್ದರಿಂದ ಮೊದಲು ನಿಮ್ಮ ಮನೆಯಲ್ಲೇ ಈ ಗೊಬ್ಬರದಿಂದ ಬೆಳೆಸಿ ಪರೀಕ್ಷೆಗೆ ಒಳಪಡಿಸಿ ನೋಡಿ ಎಂದು ಅಪರ ಜಿಲ್ಲಾಧಿಕಾರಿ ಮತ್ತು ಮನಪಾ ಆಯುಕ್ತರಿಗೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ಹಳೆ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ತ್ಯಾಜ್ಯವನ್ನು ಪರ್ವತದ ರೀತಿಯಲ್ಲಿ ರಾಶಿ ಹಾಕಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತ ಆನಂದ ಸಿ.ಎಲ್‌.ಅವರು ಈ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿಯವರಿಗೆ ವಿವರಿಸಿ, ಎರಡು ದಶಕಗಳ ಹಿಂದಿನ ತ್ಯಾಜ್ಯವಾಗಿದ್ದು, ಬಯೋ ಮೈನಿಂಗ್‌ ವ್ಯವಸ್ಥೆಯ ಮೂಲಕ ಸಂಸ್ಕರಿಸಿ, ವಿಲೇವಾರಿ ಮಾಡುವ ಪ್ರಕ್ರಿಯೆ ಮೂರು ಘಟಕಗಳ ಮೂಲಕ ನಡೆಯುತ್ತಿದೆ ಎಂದರು.

ವೈಜ್ಞಾನಿಕ ಅಧ್ಯಯನ ಅಗತ್ಯ
ಸಮರೋಪಾದಿಯಲ್ಲಿ ಈ ಪ್ರಕ್ರಿಯೆ ನಡೆದು, ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಇದರಿಂದ ಬಾವಿಗಳ ನೀರು ಕಲುಷಿತವಾಗುತ್ತದೆ. ಭೂಮಿಯೂ ಸತ್ವ ಹೀನವಾಗಿ ಬೆಳೆ ಬೆಳೆಯಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಸುತ್ತಲಿನ ಹಳ್ಳಿಗಳ ಜನ, ಜಾನುವಾರುಗಳ ತಪಾಸಣೆ ನಡೆಸಬೇಕು. ಮಕ್ಕಳನ್ನೂ ಪರೀಕ್ಷೆಗೆ ಒಳಪಡಿಸಬೇಕು. ತ್ಯಾಜ್ಯದಲ್ಲಿರುವ ವಿಷಕಾರಿ ಅಂಶಗಳು ಹಾಲು, ತರಕಾರಿಗಳ ಮೂಲಕ ಜನರ ದೇಹದೊಳಗೆ ಹೋಗುವ ಸಾಧ್ಯವಿದೆ. ಇವೆಲ್ಲ ಆತಂಕಕಾರಿ ವಿಚಾರವಾಗಿದ್ದು, ಮೊದಲು ಈ ಬಗ್ಗೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನ ಅಗತ್ಯ ಎಂದು ಉಪಲೋಕಾಯುಕ್ತರು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌, ಉಪವಿಭಾಗಾಧಿಕಾರಿ ಹರ್ಷವರ್ಧನ್‌, ಲೋಕಾಯುಕ್ತ ಎಸ್‌.ಪಿ. ನಟರಾಜ್‌, ಡಿವೈಎಸ್‌ಪಿ ಡಾ| ಗಾನಾ ಪಿ.ಕುಮಾರ್‌, ಪಾಲಿಕೆ ಎಂಜಿನಿಯರ್‌ ನರೇಶ್‌ ಶೆಣೈ ಸೇರಿದಂತೆ ಇತರ ಪಾಲಿಕೆ ಮತ್ತು ಲೋಕಾಯುಕ್ತ ಅಧಿಕಾರಿ, ಸಿಬಂದಿಯವರು ಈ ವೇಳೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mang-Holiday

Cyclone Fengal Effect: ದ.ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಡಿ.3ರಂದು ರಜೆ ಘೋಷಣೆ

Rain-1

Cyclone Fengal Effect: ಕರಾವಳಿ ಸೇರಿ ಹಲವೆಡೆ ಭಾರೀ ಮಳೆ; ನಾಳೆಯೂ ಆರೆಂಜ್‌ ಅಲರ್ಟ್‌!

ginger

Ginger Health Benefits: ಶುಂಠಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ..

1-eqwewq

Cyclone Fengal; ಪರಿಸ್ಥಿತಿ ಆತಂಕಕಾರಿ.. ಕೊಚ್ಚಿ ಹೋದ ಬಸ್ ಗಳು: ವಿಡಿಯೋ ವೈರಲ್

Video: ಸಮುದ್ರ ಬದಿ ಧ್ಯಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣತೆತ್ತ ನಟಿ

Video: ಸಮುದ್ರ ಬದಿ ಧ್ಯಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣತೆತ್ತ ನಟಿ

1-nepal

U19 Asia Cup; ವಿಲಕ್ಷಣ ಕಾರಣದಿಂದ ಅಭಿಮಾನಿಗಳ ಗಮನ ಸೆಳೆದ ನೇಪಾಳ ಬೌಲರ್: ವಿಡಿಯೋ ವೈರಲ್

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಡಾ| ಅಂಬೇಡ್ಕರ್‌ ವೃತ್ತ ‘ಪ್ರಾಯೋಗಿಕ’ ನಿರ್ಮಾಣ

6

Mangaluru: ವೆಲೆನ್ಶಿಯಾ-ಗೋರಿಗುಡ್ಡೆ ರಸ್ತೆ; ಎಲ್ಲೆಂದರಲ್ಲಿ ಹೊಂಡಗುಂಡಿ

5

Smart City ಸೂಚನ ಫಲಕದಲ್ಲಿ ಮತ್ತೆ ‘ಗುಜ್ಜರಕೆರೆ’ ಹೆಸರು

2

Mangaluru: ಸ್ಮಾರ್ಟ್‌ಸಿಟಿಯಿಂದ ಬೀಚ್‌ ಸ್ವಚ್ಛತೆಗೆ ಆದ್ಯತೆ

Mangaluru ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ: ಡಾ| ಹರೀಶ್‌ ಆಚಾರ್ಯರಿಗೆ ಅಭಿನಂದನೆ

Mangaluru ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ: ಡಾ| ಹರೀಶ್‌ ಆಚಾರ್ಯರಿಗೆ ಅಭಿನಂದನೆ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

1-qeqwew

Lucknow; ಸಂಭಾಲ್ ನತ್ತ ಹೋರಟ ಕಾಂಗ್ರೆಸ್ ನಿಯೋಗ: ತಡೆದ ಪೊಲೀಸರೊಂದಿಗೆ ತೀವ್ರ ವಾಗ್ವಾದ

Mang-Holiday

Cyclone Fengal Effect: ದ.ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಡಿ.3ರಂದು ರಜೆ ಘೋಷಣೆ

ಸಿದ್ದಾಪುರ: ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ

ಸಿದ್ದಾಪುರ: ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ

ಆಲಮಟ್ಟಿ ಅಣೆಕಟ್ಟೆ ಎತ್ತರ ಕಡಿತ ವದಂತಿ; ಆರು ದಶಕಗಳ ಬೇಡಿಕೆ ಕೃಷ್ಣಾರ್ಪಣ

Rain-1

Cyclone Fengal Effect: ಕರಾವಳಿ ಸೇರಿ ಹಲವೆಡೆ ಭಾರೀ ಮಳೆ; ನಾಳೆಯೂ ಆರೆಂಜ್‌ ಅಲರ್ಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.