Mangaluru: ಡಾ| ಅಂಬೇಡ್ಕರ್ ವೃತ್ತ ‘ಪ್ರಾಯೋಗಿಕ’ ನಿರ್ಮಾಣ
ಸಂಚಾರ ದಟ್ಟಣೆೆ, ಸ್ಥಳಾವಕಾಶದ ಸಮಸ್ಯೆ ಅವಲೋಕನಕ್ಕೆ ನಿರ್ಧಾರ
Team Udayavani, Dec 2, 2024, 2:52 PM IST
ಮಹಾನಗರ: ಅಂಬೇಡ್ಕರ್ ವೃತ್ತದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡ ಬೇಕೆಂಬ ಬೇಡಿಕೆ ಒಂದೆಡೆ, ಈ ಭಾಗದಲ್ಲಿರುವ ಸಂಚಾರ ದಟ್ಟಣೆ, ಸ್ಥಳಾವಕಾಶದ ಕೊರತೆ ಅಂಶಗಳು ಇನ್ನೊಂದಡೆ ಇರುವುದರಿಂದ ಸದ್ಯಕ್ಕೆ ‘ಪ್ರಾಯೋಗಿಕ’ ಮಾದರಿಯಲ್ಲಿ ಇಲ್ಲಿ ಅಂಬೇಡ್ಕರ್ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಮಂಗಳೂರು ಮಹಾನಗರಪಾಲಿಕೆ ನಿರ್ಧರಿಸಿದೆ.
ಜಂಕ್ಷನ್‌ನಲ್ಲಿ ವೃತ್ತದೊಂದಿಗೆ ಡಾ| ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆನ್ನುವುದು ದಶಕದ ಕೂಗು. ವಿವಿಧ ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿದ ಬಳಿಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಸೆ. 15ರಂದು ವೃತ್ತ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗಿತ್ತು.
ವಾಹನ ದಟ್ಟನೆ
ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರ ಅತ್ಯಧಿಕ. ಸ್ಟೇಟ್‌ಬ್ಯಾಂಕ್‌ನಿಂದ ಆಗಮಿಸುವ ವಾಹನಗಳು, ಬಂಟ್ಸ್ ಹಾಸ್ಟೆಲ್, ಬಲ್ಮಠ ಕಡೆಯಿಂದ ಬರುವ ವಾಹನಗಳು ಸೇರಿದಂತೆ ಅತ್ಯಧಿಕ ವಾಹನ ದಟ್ಟನೆ ಇದೆ. ದಿನದ ಹೆಚ್ಚಿನ ಸಮಯ ಇಲ್ಲಿ ಟ್ರಾಫಿಕ್ ಜಾಂ ಇರುತ್ತದೆ. ಬಲ್ಮಠದತ್ತ ತೆರಳುವ ಬಸ್‌ಗಳಿಗೆ ಇಲ್ಲೇ ಪಕ್ಕದಲ್ಲಿ ಬಸ್ ನಿಲ್ದಾಣವಿದ್ದು, ಇದು ಕೂಡ ವಾಹನ ದಟ್ಟನೆಗೆ ಕಾರಣ.
1994ರಲ್ಲಿ ನಾಮಕರಣ
1994ರಲ್ಲಿ ಅಂದಿನ ಜಿಲ್ಲಾ ಧಿಕಾರಿ ಭರತ್ ಲಾಲ್ ಮೀನಾ ಅವರ ಮೂಲಕ ಕೆಎಂಸಿ ಆಸ್ಪತ್ರೆಯ ಬಳಿ ಜ್ಯೋತಿ ಜಂಕ್ಷನ್‌ಗೆ ಡಾ| ಬಿ.ಆರ್. ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಿದ್ದರು. ದಲಿತ ಸಂಘಟನೆಗಳು ಈ ಸಂದರ್ಭದಲ್ಲಿ ನಡೆಸಿದ ಹಕ್ಕೊತ್ತಾಯದ ಪ್ರತಿಧ್ವನಿಗೆ ಸೂಕ್ತ ಮನ್ನಣೆ ದೊರಕಿ ನಗರ ಪಾಲಿಕೆಗೆ ವೃತ್ತ ನಿರ್ಮಾಣದ ಕಾರ್ಯ ನಡೆಸಲು ನಿರ್ದೇಶನ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ವೃತ್ತ ನಿರ್ಮಾಣ ವಿಳಂಬವಾಗಿತ್ತು.
ಜಾಗದ ಕೊರತೆ
ಬಾವುಟಗುಡ್ಡೆಯಿಂದ ಮಿಲಾಗ್ರಿಸ್‌ನತ್ತ ತೆರಳುವವರಿಗೆ ಫ್ರೀಲೆಫ್ಟ್ ಇದೆ. ಈ ಭಾಗದಲ್ಲಿ ಐಲ್ಯಾಂಡ್ ನಿರ್ಮಿಸಲಾಗಿದೆ. ಪ್ರಸ್ತುತ ಸಂಚಾರ ಸಮಸ್ಯೆ ಹಾಗೂ ಜಾಗದ ಕೊರತೆ ಇರುವ ಕಾರಣದಿಂದಾಗಿ ಐಲ್ಯಾಂಡ್‌ನಲ್ಲಿ ಸರ್ಕಲ್ ನಿರ್ಮಿಸುವ ಪ್ರಸ್ತಾವನೆಯೂ ಕೂಡ ಪಾಲಿಕೆಯ ಮುಂದಿದೆ. ಸಾಧಕ ಬಾಧಕಗಳನ್ನು ಅರಿತುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ವೃತ್ತ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತಾವಿತ ವೃತ್ತ ನಿರ್ಮಾಣಕ್ಕೆ ರಸ್ತೆಯ ಎರಡೂ ಭಾಗದಲ್ಲಿ 3 ಮೀ.ನಷ್ಟು ವಿಸ್ತ ರ ಣೆವಾದಲ್ಲಿ ಉದ್ದೇಶಿತ ವೃತ್ತ ನಿರ್ಮಾಣ ಮಾಡಬಹುದು. ಸದ್ಯ ಪ್ರಾಯೋಗಿಕ ನೆಲೆಯಲ್ಲಿ ವೃತ್ತ ನಿರ್ಮಿಸಿ ಸಂಚಾರ ಸಮಸ್ಯೆಯ ಬಗ್ಗೆ ಅರಿತುಕೊಳ್ಳಲಾಗುವುದು.
– ಮನೋಜ್ ಕುಮಾರ್, ಮೇಯರ್
ಜಂಕ್ಷನ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದ್ದು, ಅಲ್ಲಿ ಕಂಚಿನ ಪ್ರತಿಮೆಯನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒತ್ತಾ ಯಿಸಲಾಗಿದೆ. ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಪ್ರತಿಮೆ ನಿರ್ಮಾಣಕ್ಕೆ ಹೋರಾಟ ಸಮಿತಿಯ ಪ್ರಮುಖರು ಒತ್ತಾಯಿಸಿದ್ದಾರೆ.
ಡಾ| ಬಿ.ಆರ್. ಅಂಬೇಡ್ಕರ್ ವೃತ್ತವನ್ನು 15 ಮೀಟರ್ ಅಂದರೆ ಸರಿಸುಮಾರು 50 ಚದರ ಅಡಿಯಷ್ಟು ನಿರ್ಮಿಸಬೇಕು ಎನ್ನುವುದು ದಲಿತ ಹಿತರಕ್ಷಣಾ ವೇದಿಕೆಯ ಒತ್ತಾಯ ಹಾಗೂ ಇದೇ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸುವುದು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದ ವಿವರವನ್ನು ಸಮಿತಿ ಪಾಲಿಕೆಗೆ ಸಲ್ಲಿಸಿದ್ದು , ಸುಮಾರು 75 ಲಕ್ಷ ರೂ. ಅನುದಾನ ಅಂದಾಜಿಸಲಾಗಿದೆ.
-ಸಂತೋಷ್ ಮೊಂತೇರೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.