Ginger Health Benefits: ಶುಂಠಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ..


ಕಾವ್ಯಶ್ರೀ, Dec 2, 2024, 5:30 PM IST

ginger

ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಕೆಲ ಮಸಾಲೆಗಳಲ್ಲಿಯೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ? ಉದಾಹರಣೆಗೆ ಶುಂಠಿಯನ್ನು ತೆಗೆದುಕೊಳ್ಳಿ. ನೀವು ಪ್ರತಿದಿನ ಶುಂಠಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ.

ಮಸಾಲೆ ಪದಾರ್ಥಗಳಲ್ಲಿ ಶುಂಠಿ ಹೆಚ್ಚು ರುಚಿ ಹೊಂದಿರುವ ಮಸಾಲೆಯಾಗಿದೆ. ರುಚಿ ಮಾತ್ರವಲ್ಲದೆ ಸಾಕಷ್ಟು ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಶುಂಠಿ ಜೀವಸತ್ವ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಆದ್ದರಿಂದ ಶುಂಠಿ ಸುದೀರ್ಘ ಔಷಧೀಯ ಇತಿಹಾಸ ಹೊಂದಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಶತಮಾನಗಳ ಹಿಂದೆ, ಶುಂಠಿಯನ್ನು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಇದಲ್ಲದೆ, ನಿಯಮಿತವಾಗಿ ಶುಂಠಿ ಸೇವಿಸುವುದರಿಂದ ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಶುಂಠಿ ಜಿಂಜರಾಲ್ ಎಂಬ ಅಂಶ ಹೊಂದಿದೆ. ಇದು ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಇದು ಊದಿಕೊಂಡ ಗಂಟು, ಕೀಲುಗಳ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ಶೊಗೋಲ್ ಎಂಬ ಅಂಶವನ್ನು ಸಹ ಹೊಂದಿದ್ದು, ಇದು ನೋವು ನಿವಾರಕ ಪರಿಣಾಮ ಹೊಂದಿದೆ. ಇದು ಕ್ಯಾನ್ಸರ್ ಮತ್ತು ಹೃದ್ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಜಿಂಜಿಬೆರೆನ್ ಎಂಬ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಾತ್ರವಲ್ಲದೇ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ.

ಪ್ರತಿದಿನ ಶುಂಠಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗೆಂದು ಒಂದು ತುಂಡು ಶುಂಠಿ ಹಾಗೇ ತಿನ್ನುವುದಲ್ಲ. ಅದರ ಬದಲು ಶುಂಠಿಯನ್ನು ನಮ್ಮ ದೈನಂದಿನ ಆಹಾರದೊಂದಿಗೆ ಸೇವಿಸಬೇಕು ಅಥವಾ ಶುಂಠಿ ಚಹಾ ಕುಡಿಯುವುದು ಆರೋಗ್ಯಕರವಾಗಿದೆ. ಒಂದು ತಿಂಗಳ ಕಾಲ ಪ್ರತಿದಿನ ಶುಂಠಿ ತಿಂದರೆ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..

ವಾಕರಿಕೆ: ಪ್ರತಿದಿನ ಶುಂಠಿ ತಿನ್ನುವುದರಿಂದ ವಾಕರಿಕೆ ಬೇಗ ಕಡಿಮೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗುವವರು ಇದರ ಪ್ರಯೋಜನ ಪಡೆಯಬಹುದು.

ಸ್ನಾಯು ನೋವು: ಶುಂಠಿ ತಿನ್ನುವುದರಿಂದ ಸ್ನಾಯು ನೋವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿದಿನ ಶುಂಠಿ ಸೇವಿಸುವುದರಿಂದ ನೋವು ಕ್ರಮೇಣ ಕಡಿಮೆಯಾಗುತ್ತದೆ.

ಮುಟ್ಟಿನ ನೋವು: ಹೆಣ್ಣುಮಕ್ಕಳು ತಿಂಗಳ ಈ ಸಮಯದಲ್ಲಿ ನಿರಂತರವಾಗಿ ನೋವು ಅನುಭವಿಸುತ್ತಿದ್ದರೆ ಪ್ರತಿದಿನ ಶುಂಠಿ ತಿನ್ನುವುದು ಸಹಾಯವಾಗಲಿದೆ. ಈ  ಮಸಾಲೆ ಪದಾರ್ಥವಾದ ಶುಂಠಿ ಸೇವನೆ ಇತರ ನೋವಿನ ಔಷಧಿಗಳನ್ನು ತೆಗೆದುಕೊಳ್ಳುವಂತೆಯೇ… ಇದು ತೀವ್ರವಾದ ಕಿಬ್ಬೊಟ್ಟೆಯ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು: ಒಂದು ತಿಂಗಳ ಕಾಲ ಪ್ರತಿದಿನ ಶುಂಠಿ ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ವಿವಿಧ ಅಂಶಗಳಿಂದ ರಕ್ತದಲ್ಲಿರುವ ಟ್ರೈಗ್ಲಿಸರೈಡ್‌ಗಳ ಪ್ರಮಾಣ ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು: ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ, ಜ್ವರ ಅಥವಾ ಇತರ ವೈರಸ್ ನಿಂದ ಬಳಲುತ್ತಿದ್ದವರು ನಿಯಮಿತವಾಗಿ ಶುಂಠಿ ಸೇವಿಸುತ್ತಿದ್ದರೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ: ಶುಂಠಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಬಹುದು. ಶುಂಠಿಯಲ್ಲಿರುವ ಅಂಶ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ: ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು ಶುಂಠಿ ಸೇವನೆ ಪರಿಣಾಮಕಾರಿಯಾಗಿದೆ.

ಸ್ನಾಯು ನೋವು ಶಮನಗೊಳಿಸಲು: ಶುಂಠಿ ಸೇವಿಸುವುದರಿಂದ ತಕ್ಷಣವೇ  ಸ್ನಾಯು ನೋವು ನಿವಾರಿಸುವುದಿಲ್ಲ. ಆದರೆ ಇದು ಸುಮಾರು ಸಮಯದ ನಂತರ ನೋವನ್ನು ಶಮನಗೊಳಿಸುತ್ತದೆ.

ಟಾಪ್ ನ್ಯೂಸ್

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

Mulki: ಹಣ ಸಾಗಾಟದ ವಾಹನ ಪಲ್ಟಿ: ಐವರಿಗೆ ಗಾಯ

Mulki: ಹಣ ಸಾಗಾಟದ ವಾಹನ ಪಲ್ಟಿ: ಐವರಿಗೆ ಗಾಯ

1-qweqwe

Cyclone Fengal; ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಿಡಿಲಾರ್ಭಟದ ಭಾರೀ ಮಳೆ

Belau-Bel

Belthangady: ನೇತ್ರಾವತಿ ನದಿಗೆ ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆ!

Mahayuti

Maharashtra suspense; ಮಹಾಯುತಿಯಿಂದ ಡಿ.4 ರಂದು ಸಿಎಂ ಹೆಸರು ಘೋಷಣೆ

rain 3

Cyclone Fengal Effect: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಸ್ಕೂಲ್ ವರೆಗೆ ರಜೆ ಘೋಷಣೆ

rain

Cyclone Fengal Effect: ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ಡಿ.3ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Desert Animals ಮರುಭೂಮಿಯಲ್ಲಿ ವಾಸಿಸುವ ಪ್ರಾಣಿಗಳು ವಿಶಿಷ್ಟವೇಕೆ ಗೊತ್ತಾ?

BJP 2

BJP;ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಆ ಇಬ್ಬರ ಮೇಲೆ ಕೈಗೊಳ್ಳಬೇಕಲ್ಲ?!

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

accident

Kundapura: ಕಾರಿನ ಬಾಗಿಲಿಗೆ ಸ್ಕೂಟರ್‌ ಡಿಕ್ಕಿ; ಸವಾರ ಆಸ್ಪತ್ರೆಗೆ

Belthangady: ವಿದ್ಯುತ್‌ ಆಘಾತ; ಕಾರ್ಮಿಕ ಸಾವು

4

Sullia: ತರಕಾರಿ ಅಂಗಡಿಯಿಂದ ನಗದು ಕಳವು

missing

Puttur: ಪರ್ಲಡ್ಕ; ಯುವಕ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.