U19 Asia Cup; ವಿಲಕ್ಷಣ ಕಾರಣದಿಂದ ಅಭಿಮಾನಿಗಳ ಗಮನ ಸೆಳೆದ ನೇಪಾಳ ಬೌಲರ್: ವಿಡಿಯೋ ವೈರಲ್
Team Udayavani, Dec 2, 2024, 4:55 PM IST
Image Source : X/SONY SPORTS NETWORK
ದುಬೈ: ಅಂಡರ್ 19 ತಂಡಗಳ ಐಸಿಸಿ ಏಕದಿನ ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ತಂಡದ ಬೌಲರ್ ಒಬ್ಬ ವಿಲಕ್ಷಣ ಕಾರಣದಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.
ಭಾನುವಾರ (ಡಿ1) ನಡೆದ 5ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ನೇಪಾಳ ಬೌಲರ್ ಯುವರಾಜ್ ಖತ್ರಿಯ ವಿಲಕ್ಷಣ ಸಂಭ್ರಮಾಚರಣೆ ಗಮನ ಸೆಳೆಯಿತು. ವಿಕೆಟ್ ಪತನವನ್ನು ಸಂಭ್ರಮಿಸುವಾಗ ಬೌಲರ್ ಯುವರಾಜ್ ಖತ್ರಿ ಪ್ರಾಬಲ್ಯ ತೋರಿದ್ದರು. ಆರು ಓವರ್‌ಗಳಲ್ಲಿ 23ಕ್ಕೆ 4 ವಿಕೆಟ್ ಕಿತ್ತು ಸಂಭ್ರಮಿಸುತ್ತಲೇ ಇದ್ದರು. ಯುವರಾಜ್ ಸಂಭ್ರಮಾಚರಣೆ ಚರ್ಚೆಗೆ ಗ್ರಾಸವಾಗಿತ್ತು. ಅವರು ಮೊದಲು ತಬ್ರೈಜ್ ಶಮ್ಸಿಯ ಸಂಭ್ರಮಾಚರಣೆಯನ್ನು ಅನುಕರಿಸಿ, ವಿಕೆಟ್ ಪಡೆದ ನಂತರ ಅವರ ಬಲ ಶೂ ತೆಗೆದು ಕಿವಿಗೆ ಮೊಬೈಲ್ ಹಿಡಿದಂತೆ ಹಿಡಿದುಕೊಂಡರು.
ಕೆಲವು ಓವರ್‌ಗಳ ನಂತರ ಅವರು ಎಂಡಿ ರಿಜಾನ್ ಹೊಸನ್ ಪ್ಲಂಬ್ ಅನ್ನು ಸ್ಟಂಪ್ ಔಟ್ ಮಾಡಿಸುವಲ್ಲಿ ಯಶಸ್ವಿಯಾದಾಗ ಸಂಭ್ರಮಾಚರಣೆ ಪ್ರಕ್ರಿಯೆಯಲ್ಲಿ ಅವರ ಎಡ ಪಾದ ಟ್ವಿಸ್ಟ್ ಆಗಿ ಬಿದ್ದರು. ಆ ಬಳಿಕ ನೋವಿನಲ್ಲೇ ತಂಡದ ಇನ್ನೊಬ್ಬ ಆಟಗಾರನೊಬ್ಬನ ಬೆನ್ನಿನ ಮೇಲೆ ಕುಳಿತು ಮೈದಾನದಿಂದ ಹೊರ ಹೋದರು.ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ ಐದು ವಿಕೆಟ್‌ಗಳಿಂದ ಆರಾಮವಾಗಿ ಪಂದ್ಯವನ್ನು ಗೆದ್ದಿತು.
The wicket-taking celebration!😂 pic.twitter.com/8K73VvyuPi
— Out Of Context Cricket (@GemsOfCricket) December 2, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Chairman: ಐಸಿಸಿಗೆ ನೂತನ ಸಾರಥಿ ಜಯ್ ಶಾ; ಅಧಿಕಾರ ಸ್ವೀಕಾರ
Badminton: ಪಿ.ವಿ.ಸಿಂಧು, ಲಕ್ಷ್ಯಸೇನ್, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್
Pro Kabbaddi: ದಬಾಂಗ್ ಡೆಲ್ಲಿಗೆ ಶರಣಾದ ತಮಿಳ್ ತಲೈವಾಸ್
Day-Night Test: ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ
T-20 Cricket: ಬೌಲಿಂಗ್ ಸೈಕ್ಲೋನ್; ತಮಿಳುನಾಡು ತಂಡ ತತ್ತರ, ಕರ್ನಾಟಕಕ್ಕೆ ಸುಲಭ ಗೆಲುವು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.