ಡಿ. 7: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಡಾ| ಮೋಹನ್‌ ಭಾಗವತ್‌

Team Udayavani, Dec 3, 2024, 6:35 AM IST

ಡಿ. 7: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಡಾ| ಮೋಹನ್‌ ಭಾಗವತ್‌

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳನ್ನೊಳಗೊಂಡ 2024ನೇ ಸಾಲಿನ ಹೊನಲು ಬೆಳಕಿನ ಕ್ರೀಡೋತ್ಸವವು ಡಿ. 7ರಂದು ಸಂಜೆ 6ಕ್ಕೆ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಆರೆಸ್ಸೆಸ್‌ನ ಸರಸಂಘ ಚಾಲಕ್‌ ಡಾ| ಮೋಹನ್‌ಜಿ ಭಾಗವತ್‌ ಭಾಗವಹಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.

ಸೋಮವಾರ ಬಿ.ಸಿ.ರೋಡಿನ ಪ್ರಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ವಿದ್ಯಾಕೇಂದ್ರವು ದೇಶ ಮೊದಲು ಎಂಬ ಚಿಂತನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು, ಪ್ರತಿವರ್ಷವೂ ಕ್ರೀಡೋತ್ಸವವನ್ನು ಆಯೋಜಿಸಿ ಮಕ್ಕಳ ಸಾಹಸಮಯ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದೆ.

ಡಾ| ಮೋಹನ್‌ಜಿ ಭಾಗವತ್‌ ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಇರುವುದರಿಂದ ಒಟ್ಟು ಕಾರ್ಯಕ್ರಮವನ್ನು ಒಂದೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಒಂದು ದಿನಕ್ಕೆ ಮೊದಲೇ ಕೇಂದ್ರ ಭದ್ರತಾ ಸಿಬಂದಿ ಆಗಮಿಸಿ ಸ್ಥಳವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲಿದ್ದಾರೆ. ಭಾಗವತ್‌ ಅವರು ಡಿ. 6ರಂದು ಮಂಗಳೂರಿನ ಸಂಘನಿಕೇತನಕ್ಕೆ ಆಗಮಿಸಲಿದ್ದು, ನಾಲ್ಕೈದು ದಿನ ಆರೆಸ್ಸೆಸ್‌ ಕಾರ್ಯಕ್ರಮಕ್ಕಾಗಿ ಮಂಗಳೂರಿನಲ್ಲೇ ಉಳಿದುಕೊಳ್ಳಲಿದ್ದಾರೆ.

ಡಿ. 7ಕ್ಕೆ ಸಂಜೆ 4.15ಕ್ಕೆ ಮಂಗಳೂರಿನಿಂದ ಹೊರಟು 5ಕ್ಕೆ ಕಲ್ಲಡ್ಕ ತಲುಪಲಿದ್ದಾರೆ. ಶ್ರೀರಾಮ ವಿದ್ಯಾಕೇಂದ್ರದ ಚಟುವಟಿಕೆಗಳನ್ನು ವೀಕ್ಷಿಸಿ 6.30ರಿಂದ ಒಂದೂವರೆ ಗಂಟೆಗಳ ಕಾಲ ಕ್ರೀಡೋತ್ಸವವನ್ನು ವೀಕ್ಷಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಗಣ್ಯರಾದ ಅಜಿತ್‌ಕುಮಾರ್‌ ಎಸ್‌.ಜೈನ್‌, ಬಿ.ನಾರಾಯಣ್‌, ಮನೋಜ್‌ಕುಮಾರ್‌, ರಾಧೇಶ್ಯಾಮ್‌ ಶ್ರೀವಲಭ ಹೇಡ, ಮನೋಜ್‌ ಕೋಟಕ್‌ ಕಿಶೋರ್‌ಭಾಯ್‌, ಮನೀಶ್‌ ಜೋಷಿ, ಪ್ರಕಾಶ್‌ ಶೆಟ್ಟಿ ಬಂಜಾರ, ಡಾ| ಸೂರಜ್‌ ಗೋಪಾಲ್‌ ಎರ್ಮಾಳ್‌, ಕರುಣಾಕರ ಆರ್‌.ಶೆಟ್ಟಿ, ನವೀನ್‌ ಗೋಯೆಲ್‌, ಡಾ| ವಿರಾರ್‌ ಶಂಕರ್‌ ಬಿ. ಶೆಟ್ಟಿ, ರವಿಕಲ್ಯಾಣ ರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ, ಸೇವಾ ಟ್ರಸ್ಟ್‌ ಅಧ್ಯಕ್ಷ ಪ್ರಸಾದ್‌ಕುಮಾರ್‌ ರೈ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

FOOD-DELIVERY

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

11

Subrahmanya: ಅಂಗಡಿಗಳ ಮೇಲೆ ದಾಳಿ; ತಂಬಾಕು ಉತ್ಪನ್ನಗಳು ವಶಕ್ಕೆ

Uppinangady: ತಲೆಗೆ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊ*ಲೆ

Uppinangady: ತಲೆಗೆ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊ*ಲೆ

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

12

Puttur: ಪೆರ್ನಾಜೆ; ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.