Sikhs: ಧರ್ಮದ್ರೋಹ: ಪಂಜಾಬ್ ಮಾಜಿ ಡಿಸಿಎಂಗೆ ಶೌಚಾಲಯ ತೊಳೆಯೋ ಶಿಕ್ಷೆ!
ಸಿಕ್ಖ್ ಅತ್ಯುತ್ಛ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್ನಿಂದ ಶಿಕ್ಷೆ ಘೋಷಣೆ, ಸ್ವರ್ಣ ಮಂದಿರದಲ್ಲಿ ಪಾತ್ರೆ, ಶೌಚಾಲಯ ತೊಳೆಯುವಂತೆ ನಿರ್ದೇಶನ
Team Udayavani, Dec 3, 2024, 7:45 AM IST
ಚಂಡೀಗಢ: ಸಿಕ್ಖರ ಅತ್ಯುಚ್ಚ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್ನಿಂದ ಧರ್ಮದ್ರೋಹಿ ಎಂದು ಘೋಷಿತರಾಗಿದ್ದ ಪಂಜಾಬ್ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಅವರಿಗೆ ಸೋಮವಾರ ಶಿಕ್ಷೆ ಘೋಷಣೆಯಾಗಿದೆ.
ಅಮೃತಸರದ ಸ್ವರ್ಣಮಂದಿರದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಮಂಗಳವಾರ ಸುಖ್ಬೀರ್ ಸೇರಿದಂತೆ ಇತರೆ ಅಪರಾಧಿಗಳು ಇಲ್ಲಿನ ಪಾತ್ರೆಗಳನ್ನು, ಭಕ್ತಾದಿಗಳ ಪಾದರಕ್ಷೆಗಳನ್ನು ಮತ್ತು ಶೌಚಾಲಯಗಳನ್ನು ಸ್ವಚ್ಛ ಗೊಳಿಸಬೇಕು. ಭಕ್ತಾದಿಗಳಿಗೆ ಲಂಗಾರ್ (ಅನ್ನದಾನ) ಏರ್ಪಡಿಸಬೇಕು. ಅಲ್ಲದೇ ಶಿರೋಮಣಿ ಅಕಾಲಿದಳ (ಎಸ್ಎಡಿ) ಮುಖ್ಯಸ್ಥ ಸ್ಥಾನವನ್ನು ತ್ಯಜಿಸುವಂತೆ ಅವರಿಗೆ ಸೂಚಿಸಲಾಗಿದೆ. ಇದೇ ವೇಳೆ, ಅವರ ತಂದೆ ಪ್ರಕಾಶ್ ಬಾದಲ್ ಅವರಿಗೆ ನೀಡಲಾಗಿದ್ದ “ಅತ್ಯುನ್ನತ ಸಿಖ್ ನಾಯಕ’ ಎಂಬ ಬಿರುದನ್ನು ವಾಪಸ್ ಪಡೆಯಲಾಗಿದೆ.
2007-17ರವರೆಗೆ ಪಂಜಾಬ್ನ ಎಸ್ಎಡಿ ಸರ್ಕಾರವು ಸಿಖ್ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್ ತಖ್ತ್ ಆಗಸ್ಟ್ನಲ್ಲಿ ತೀರ್ಪು ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್ಪೋರ್ಟ್ ಕೇಂದ್ರ
E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್ ಕಡ್ಡಾಯ: ಪ್ರಾಧಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.