Mangaluru: ಲೈಸೆನ್ಸ್ ಇಲ್ಲದ ನಿಡ್ಡೋಡಿಯ ಕಲ್ಲುಕೋರೆಗಳಿಗೆ ಉಪಲೋಕಾಯುಕ್ತ ದಾಳಿ
Team Udayavani, Dec 3, 2024, 9:06 AM IST
ಮಂಗಳೂರು: ತಾಲೂಕಿನ ಹೊರವಲಯದ ನಿಡ್ಡೋಡಿ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಎರಡು ಕಲ್ಲಿನ ಕೋರೆಗಳಿಗೆ ಉಪಲೋಕಾಯುಕ್ತ ನ್ಯಾ| ವೀರಪ್ಪ ಅವರು ದಿಢೀರ್ ಭೇಟಿ ನೀಡಿದರು.
ಮಂಗಳವಾರ ಮುಂಜಾನೆ ಸುರಿಯುತ್ತಿದ್ದ ಮಳೆಯ ನಡುವೆಯೇ ನಿಡ್ಡೋಡಿಯ ಬಡಗಮಿಜಾರು ಗ್ರಾಮದ ವಿವಿಧೆಡೆ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲುಕೋರೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿತು.
ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೂ ಇದ್ದರು. ಎರಡು ಕಡೆಗಳಲ್ಲಿ ಲೈಸೆನ್ಸ್ ಅವಧಿ ಮುಗಿದಿದ್ದರೂ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಇನ್ನೊಂದೆಡೆ ಅಪಾಯಕಾರಿಯಾಗಿರುವ ಆಳವಾದ ಕಲ್ಲಿನ ಕೋರೆಗಳು ಪತ್ತೆಯಾಗಿದ್ದವು. ಪಟ್ಟಾ ಜಮೀನಿನಲ್ಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ಸರಿಯಲ್ಲ, ಪಟ್ಟಾ ಜಮೀನೇ ಆಗಿದ್ದರೂ ಅವರು ಷರತ್ತು ಉಲ್ಲಂಘಿಸುವಂತಿಲ್ಲ ಎಂದು ಉಪಲೋಕಾಯುಕ್ತರು ಹೇಳಿದರು.
ಆಳವಾದ ಕಂದಕದಂತಾಗಿರುವ ಗಣಿಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು. ಮುಚ್ಚಿದ ಜಾಗದಲ್ಲಿ ಗಿಡ ನೆಟ್ಟು ಪುನಃಶ್ಚೇತನಗೊಳಿಸಬೇಕು. ಸಮೀಪದಲ್ಲೆ ಹೊಂದಿಕೊಂಡಿರುವ ಸರಕಾರಿ ಜಮೀನುಗಳನ್ನು ರಕ್ಷಿಸಿ, ಅದಕ್ಕೆ ಬೇಲಿ ಹಾಕಿಸಿ, ಇಲ್ಲವಾದರೆ ಅದನ್ನು ಕೂಡಾ ಅತಿಕ್ರಮಿಸುವ ಸಾಧ್ಯತೆ ಇದೆ ಎಂದು ನ್ಯಾ| ವೀರಪ್ಪ ಅಧಿಕಾರಿಗಳಿಗೆ ಸೂಚಿಸಿದರು. 2.17 ಸರ್ವೆ ನಂಬರ್‌ನ 2.85 ಎಕ್ರೆಯ ವಿಶಾಲ ಖಾಸಗಿ ಪಟ್ಟಾ ಭೂಮಿಯಲ್ಲಿ ಹಲವು ವರ್ಷಗಳಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಆಳವಾದ ಕಂದಕ ಅಪಾಯಕಾರಿಯಾಗಿದೆ. ಇಲ್ಲಿ ಕೆಲವು ತಿಂಗಳುಗಳ ಹಿಂದೆ ಖಾಸಗಿ ದೂರು ದಾಖಲಾಗಿದ್ದು, ನಾಲ್ಕು ಟಿಪ್ಪರ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಕಲ್ಲಿನ ಕೋರೆಗಳಲ್ಲಿ ಕಲ್ಲು ಮಾತ್ರವಲ್ಲದೆ ಕಲ್ಲಿನ ಪುಡಿಯನ್ನೂ ಆಂಧ್ರಪ್ರದೇಶಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ಉಪಲೋಕಾಯುಕ್ತರಿಗೆ ವಿವರಿಸಿದರು.
ಅವೈಜ್ಞಾನಿಕವಾಗಿ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಬೆಂಚ್ ಕಟಿಂಗ್ (ಹಂತ ಹಂತವಾಗಿ ಸ್ತರಗಳಲ್ಲಿ) ಮಾಡಬೇಕಿತ್ತು. ಆದರೆ ಇಲ್ಲಿ ಏಕಾಏಕಿ ಆಳವಾಗಿ ಅಗೆದಿರುವುದರಿಂದ ಅಪಾಯ ಹೆಚ್ಚು ಎಂದು ಅಪರ ಜಿಲ್ಲಾಧಿಕಾರಿ ಸಂತೋಷ್ ಅವರು ವಿವರಣೆಯಿತ್ತರು.
ಲೋಕಾಯುಕ್ತ ಎಸ್‌ಪಿ ನಟರಾಜ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಗಣಿ ಮತ್ತು ಭೂವಿಜ್ಞಾನ ಉಪನಿರ್ದೇಶಕಿ ಕೃಷ್ಣವೇಣಿ, ಅಧಿಕಾರಿ ಸತ್ಯಭಾಮಾ, ಲೋಕಾಯುಕ್ತ ಡಿವೈಎಸ್‌ಪಿ ಗಾನಾ ಪಿ. ಕುಮಾರ್, ಮೂಡುಬಿದಿರೆ ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಮುಂತಾದವರು ಉಪಸ್ಥಿತರಿದ್ದರು.
ಜೆಸಿಬಿ ಜತೆ ಪರಾರಿ!
ನಿಡ್ಡೋಡಿಯ ಬಡಗಮಿಜಾರಿನಲ್ಲಿ ಮತ್ತೂಂದು 6 ಎಕ್ರೆಯ ಜಮೀನಿನ ಕೋರೆಯಲ್ಲಿ ಕಲ್ಲು ತುಂಡರಿಸುವ ಯಂತ್ರೋಪಕರಣ, ಜೆಸಿಬಿ, ಟಿಪ್ಪರ್ ಎಲ್ಲವೂ ಇದ್ದುದಲ್ಲದೆ ಕೆಲವು ಕಾರ್ಮಿಕರೂ ಕಂಡುಬಂದರು. ಲೋಕಾಯುಕ್ತ ಅಧಿಕಾರಿಗಳು ಇಳಿದು ಬರುವಷ್ಟರಲ್ಲೇ ಟಿಪ್ಪರ್, ಜೆಸಿಬಿ ಎಲ್ಲವನ್ನೂ ತೆಗೆದುಕೊಂಡು ಓಡಿ ಹೋಗುವುದು ಕಂಡುಬಂತು. ಕರೆದರೂ ಕಾರ್ಮಿಕರು ಬರುವ ಗೋಜಿಗೆ ಹೋಗಲಿಲ್ಲ. ಲೈಸೆನ್ಸ್ ಇಲ್ಲದೆಯೇ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿದ್ದ ಇತರ ಯಂತ್ರೋಪಕರಣ, ಜೆಸಿಬಿ ಇತ್ಯಾದಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವಂತೆ ಮೂಡುಬಿದಿರೆ ಪೊಲೀಸರಿಗೆ ಸೂಚಿಸಲಾಯಿತು.
ಈ ರೀತಿ ಬಿಟ್ಟರೆ ಬಳ್ಳಾರಿಯ ಅಣ್ಣ ಆಗ್ತದೆ….
ಖಾಸಗಿ ಜಮೀನಿನಲ್ಲಿದೆ ಎಂದು ಯಾವುದೇ ನಿಯಂತ್ರಣವಿಲ್ಲದೆ ಈ ರೀತಿ ಕಲ್ಲು ಗಣಿಗಾರಿಕೆ ನಡೆಸಿದರೆ ದಕ್ಷಿಣ ಕನ್ನಡ ಕೂಡ ಬಳ್ಳಾರಿಯ ಅಣ್ಣ ಆದೀತು… ಇದು ಉಪಲೋಕಾಯುಕ್ತ ವೀರಪ್ಪ ಅವರು ನೀಡಿದ ಎಚ್ಚರಿಕೆ. ಕಲ್ಲು ಗಣಿಗಾರಿಕೆ ವೀಕ್ಷಣೆ ವೇಳೆ ಅವರು ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು, ಆರ್‌ಟಿಒ ಅಧಿಕಾರಿಗಳು ಯಾರೂ ಇದರಲ್ಲಿ ಏನು ಉಲ್ಲಂಘನೆ ಆಗುತ್ತಿದೆ ಎನ್ನುವುದನ್ನು ನೋಡಿಲ್ಲ ಯಾಕೆ? ಎಲ್ಲರೂ ಮೂಕಪ್ರೇಕ್ಷಕರಾಗಿದ್ದೀರಾ? ಪಟ್ಟಾಭೂಮಿ ಎಂದು ಸುಮ್ಮನಿರುವಂತಿಲ್ಲ ಎಂದರು. ಸರಿಯಾದ ಮಾಹಿತಿ ಇಲ್ಲದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.