Mangaluru: ಫೈಂಜಾಲ್ ಅಬ್ಬರಕ್ಕೆ ಮುಂದುವರಿದ ಮಳೆ; ಕುಸಿದ ಏರ್ಪೋರ್ಟ್ ಬಳಿಯ ರಸ್ತೆ
Team Udayavani, Dec 3, 2024, 10:17 AM IST
ಮಂಗಳೂರು: ಫೈಂಜಾಲ್ ಚಂಡಮಾರುತ (Fengal cyclone) ಪರಿಣಾಮ ಸುರಿಯುತ್ತಿರುವ ಮಳೆ ಮುಂದುವರಿದಿದೆ. ಮಂಗಳೂರು ನಗರದಲ್ಲಿ ಮಂಗಳವಾರ (ಡಿ.03) ಮುಂಜಾನೆಯಿಂದಲೇ ಮೋಡ ಕವಿದ ಆಕಾಶದೊಂದಿದೆ ನಿರಂತರವಾಗಿ ಸಾಮಾನ್ಯ ಮಳೆಯಾಗುತ್ತಿದೆ.
ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪ.ಪೂ ಕಾಲೇಜುಗಳಿಗೆ ರಜೆ ಜಿಲ್ಲಾಡಳಿತ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ವೇಳೆ ನಗರದಲ್ಲಿ ಎಂದಿನ ದಟ್ಟನೆ ಇರಲಿಲ್ಲ.
ನಗರದ ಕೊಡಿಯಾಲಗುತ್ತು ಪ್ರದೇಶದಲ್ಲಿ ಒಳ ರಸ್ತೆಗಳು ಜಲಾವೃತಗೊಂಡು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ಪಾಲಿಕೆ ಪೌರ ಕಾರ್ಮಿಕರು ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ಮಾಡಿದರು. ಕೊಡಿಯಾಲಬೈಲ್ ನ ಮಾಲ್ ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 2 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿ ಎರಡು ಪಂಪ್ ಬಳಸಿ ನೀರು ಖಾಲಿ ಮಾಡುವ ಕೆಲಸ ಮಾಡುತ್ತಿದ್ದಾರೆ.
ಜಲಸಿರಿ ಸೇರಿದಂತೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ, ಕಾಮಗಾರಿ ನಡೆಸಿ ಗುಂಡಿಗೆ ತುಂಬಿಸಿದ್ದ ಮಣ್ಣು ರಸ್ತೆಗೆ ಬಂದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿತು. ಸೋಮವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಗೆ ಹೊಟೇಲು, ಅಂಗಡಿಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸುವ ಕಾರ್ಯವೂ ಕೆಲವೆಡೆ ನಡೆಯಿತು. ಸದ್ಯ ಕರಾವಳಿಗೆ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ಜರಿದ ಅವರಣ ಗೋಡೆ
ಫಳ್ನೀರ್ ನ ಮಥಾಯಿಸ್ ಕಂಪೌಂಡ್ ಪ್ರದೇಶದಲ್ಲಿ ಒಂಟಿ ಮಹಿಳೆಯೊಬ್ಬರು ವಾಸವಿದ್ದ ಮನೆಯೊಂದರ ಆವರಣ ಗೋಡೆ ಜರಿದು ಬಿದ್ದಿದೆ. ಸ್ಥಳಕ್ಕೆ ಮನಪಾ ಸಿಬಂದಿ, ಅಗ್ನಿಶಾಮಕ ದಳದ ಸಿಬಂದಿ, ಭೇಟಿ ನೀಡಿದ್ದು, ಮಹಿಳೆ ಮನೆಯಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಮಹಿಳೆಗೆ ಯಾವುದೇ ಅಪಾಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
Earthquake Strikes: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಭೂಕಂಪ
Railway: ಎಸಿ ಬೋಗಿಗಳ ಬದಲು ಸಾಮಾನ್ಯ ಬೋಗಿ ಸೇರ್ಪಡೆ ಹೆಚ್ಚಳಕ್ಕೆ ಕ್ರಮ: ರೈಲ್ವೇ ಸಚಿವ
Asia Cup Cricket: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್: ಸೆಮಿಫೈನಲ್ ಪ್ರವೇಶಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.