WTC ಸನ್ನಿವೇಶ ಬದಲು; ಭಾರತಕ್ಕೆ ಸುಲಭವಾಯ್ತು ಫೈನಲ್ ಪ್ರವೇಶ; ಇಲ್ಲಿದೆ ಲೆಕ್ಕಾಚಾರ
Team Udayavani, Dec 3, 2024, 11:33 AM IST
ಮುಂಬೈ: ಪರ್ತ್ ಟೆಸ್ಟ್‌ನಲ್ಲಿ ಭಾರತ 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸುವುದರೊಂದಿಗೆ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ (World Test Championship) ಅಂಕಪಟ್ಟಿಯಲ್ಲಿ ನಂ.1 ಆಗಿದೆ. ಆಸ್ಟ್ರೇಲಿಯಾ ದಿಢೀರನೆ 3ನೇ ಸ್ಥಾನಕ್ಕೆ ಕುಸಿದಿದೆ. ಒಂದು ವೇಳೆ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿ (Border – Gavaskar Test Series) ಯನ್ನು ಕನಿಷ್ಠ 3-0ಯಿಂದ ಜಯಿಸಿದರೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೇರಲಿದೆ.
ತವರಿನಲ್ಲಿ ಕಿವೀಸ್ ವಿರುದ್ಧ 3-0ಯಿಂದ ಟೆಸ್ಟ್ ಸರಣಿ ಸೋತಿದ್ದ ಭಾರತ ಫೈನಲ್‌ನಿಂದ ಹೊರಬೀಳುವ ಆತಂಕದಲ್ಲಿತ್ತು. ಫೈನಲ್ ಗೇರಲು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 4-0ಯಿಂದ ಗೆಲ್ಲಬೇಕಾಗಿತ್ತು. ಪರ್ತ್ ಜಯದ ನಂತರ ಪರಿಸ್ಥಿತಿ ಬದಲಾಗಿದ್ದು, ಭಾರತಕ್ಕೆ ಫೈನಲ್ ಅವಕಾಶ ಸ್ವಲ್ಪ ಸುಗಮವಾಗಿದೆ.
ಒಂದು ವೇಳೆ 3-1ರಿಂದ, 3-2ರಿಂದ ಸರಣಿ ಗೆದ್ದರೆ ಫೈನಲ್ ಲೆಕ್ಕಾಚಾರಗಳು ಏನಾಗಲಿವೆ ಎಂಬ ಮಾಹಿತಿ ಇಲ್ಲಿದೆ.
5-0, 4-0, 3-0ರಿಂದ ಗೆದ್ದರೆ: ಈ ಮೂರೂ ಅಂತರದಿಂದ ಭಾರತಕ್ಕೆ ಗೆಲ್ಲಲು ಸಾಧ್ಯವಾದರೆ ಗೆಲುವಿನ ಪ್ರತಿಶತ ಪ್ರಮಾಣ ಹೆಚ್ಚಾಗಲಿದೆ. ಆಗ ಅಗ್ರಸ್ಥಾನಿಯಾಗಿ, ಮೊದಲ ತಂಡವಾಗಿ ಫೈನಲ್‌ಗೇರಲಿದೆ.
3-1ರಿಂದ ಗೆದ್ದರೆ: ಭಾರತ 3-1ರಿಂದ ಆಸ್ಟ್ರೇಲಿಯಾದ ವಿರುದ್ಧ ಗೆದ್ದರೂ ಫೈನಲ್ ಗೇರಲಿದೆ. ಆದರೆ ಇದಕ್ಕಿರುವ ದೊಡ್ಡ ಅಡ್ಡಿಯೆಂದರೆ ದ.ಆಫ್ರಿಕಾ. ಈಗಾಗಲೇ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1ನ್ನು ಗೆದ್ದು ದ.ಆಫ್ರಿಕಾ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ. ಅದೇನಾದರೂ 2ನೇ ಪಂದ್ಯವನ್ನೂ ಗೆದ್ದರೆ ಅಗ್ರಸ್ಥಾನಕ್ಕೇರಿ, ಭಾರತದ ಪರಿಸ್ಥಿತಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ. ಹಾಗಾಗಿ ಇಲ್ಲಿ ದ.ಆಫ್ರಿಕಾ ಸೋಲಲೇಬೇಕಾಗುತ್ತದೆ!
3-2ರಿಂದ ಸರಣಿ ಜಯ: ಈ ಸ್ಥಿತಿಯಲ್ಲಿ ಭಾರತಕ್ಕೆ ಅವಕಾಶಗಳು ಬಹಳ ಕಡಿಮೆಯಿವೆ. ಲಂಕಾ ದ.ಆಫ್ರಿಕಾವನ್ನು 2ನೇ ಟೆಸ್ಟ್‌ನಲ್ಲಿ ಸೋಲಿಸಲೇಬೇಕು. ಆಗ ದ.ಆಫ್ರಿಕಾ ಪೈಪೋಟಿಯಿಂದ ಹೊರಬೀಳಲಿದೆ. ನಂತರ ಲಂಕಾ, ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 1 ಪಂದ್ಯದಲ್ಲಿ ಡ್ರಾ ಸಾಧಿಸಬೇಕು. ಆಗ ಆಸೀಸ್‌ನ ಜಯದ ಪ್ರತಿಶತ ಪ್ರಮಾಣ ಕಡಿಮೆ ಯಾಗುತ್ತದೆ. ಭಾರತ-ಆಸ್ಟ್ರೇಲಿಯಾ ನಡುವೆ ಫೈನಲ್ ನಡೆಯಬಹುದು.
2-2ರಿಂದ ಸರಣಿ ಡ್ರಾಗೊಂಡರೆ: ಭಾರತ-ಆಸೀಸ್ ಸರಣಿ 2-2ರಿಂದ ಡ್ರಾಗೊಂಡರೆ, ಭಾರತಕ್ಕೆ ಅತಿದೂರದ ಫೈನಲ್ ಅವಕಾಶ ವೊಂದಿದೆ. ಈ ಲೆಕ್ಕಾಚಾರದಲ್ಲಿ ದ. ಆಫ್ರಿಕಾ ಲಂಕಾವನ್ನು 2-0ಯಿಂದ ಸೋಲಿಸಿ ತನ್ನ ಗೆಲುವಿನ ಪ್ರತಿಶತ ಪ್ರಮಾಣವನ್ನು ಏರಿಸಿಕೊಳ್ಳಬೇಕು. ಜೊತೆಗೆ ಲಂಕಾ ತನ್ನ ಮುಂದಿನ ಆಸೀಸ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಗೆಲ್ಲಬೇಕು. ಆಗ ಆಸೀಸ್ ಹೊರಬಿದ್ದು, ಭಾರತ ಫೈನಲ್‌ಗೇರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.