Rishab Shetty: ʼಛತ್ರಪತಿ ಶಿವಾಜಿʼಯಾದ ರಿಷಬ್‌; ಐತಿಹಾಸಿಕ ಸಿನಿಮಾದಲ್ಲಿ ಡಿವೈನ್‌ ಸ್ಟಾರ್

ಹಿಂದಿ ನಿರ್ದೇಶಕನ ಸಿನಿಮಾದಲ್ಲಿ ʼಶಿವಾಜಿʼಯಾದ ರಿಷಬ್‌ ಶೆಟ್ಟಿ

Team Udayavani, Dec 3, 2024, 11:59 AM IST

4

ಮುಂಬಯಿ/ ಬೆಂಗಳೂರು: ʼಕಾಂತಾರʼ ಸಿನಿಮಾದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ರಿಷಬ್‌ ಶೆಟ್ಟಿ (Rishab Shetty) ಇತರೆ ಭಾಷೆಯ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ʼಹನುಮಾನ್‌ʼ ಖ್ಯಾತಿ ಪ್ರಶಾಂತ್‌ ವರ್ಮಾ ಅವರ ʼಜೈ ಹನುಮಾನ್‌ʼ (Jai Hanuman) ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ರಿಷಬ್‌ ಅವರ ಫಸ್ಟ್‌ ಲುಕ್‌ ರಿಲೀಸ್‌ ಆಗಿತ್ತು. ಇದಾದ ಕೆಲ ದಿನಗಳಿಕ ರಿಷಬ್‌ ಶೆಟ್ಟಿ ಮತ್ತೊಂದು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಈ ವಿಚಾರ ಸುದ್ದಿಯಲ್ಲಿರುವಾಗಲೇ ರಿಷಬ್‌ ಶೆಟ್ಟಿ ಅವರು ಮತ್ತೊಂದು ಐತಿಹಾಸಿಕ ಸಿನಿಮಾವೊಂದರಲ್ಲಿ ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ.

ಬಾಲಿವುಡ್‌ ಖ್ಯಾತ ನಿರ್ಮಾಪಕ ಕಂ ನಿರ್ದೇಶಕ ನಿರ್ದೇಶಕ ಸಂದೀಪ್ ಸಿಂಗ್ (Director by Sandeep Singh) ಅವರ ಹಿಸ್ಟೋರಿಕಲ್ ಡ್ರಾಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride Of Bharat Chhatrapati Shivaji Maharaj) ಎನ್ನುವ ಸಿನಿಮಾದಲ್ಲಿ ಶಿವಾಜಿಯ ಪಾತ್ರದಲ್ಲಿ ರಿಷಬ್‌ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Bollywood: ಮಾಜಿ ಗೆಳೆಯ, ಪ್ರಿಯತಮೆ ಕೊ*ಲೆ ಆರೋಪ; ಖ್ಯಾತ ಬಾಲಿವುಡ್‌ ನಟಿಯ ಸಹೋದರಿ ಬಂಧನ

17ನೇ ಶತಮಾನದ ಭಾರತೀಯ ದೊರೆ ಶಿವಾಜಿ ಭೋಂಸ್ಲೆ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿರಲಿದ್ದು, ರಿಷಬ್‌ ಶಿವಾಜಿ ಪಾತ್ರವನ್ನು ಮಾಡಲಿದ್ದಾರೆ. ಯುದ್ಧಕ್ಕೆ ನಿಂತ ಸಾಮ್ರಾಟನಂತೆ ರಿಷಬ್‌ ಶಿವಾಜಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್‌ ರಿಲೀಸ್‌ ಆಗುವ ಮೂಲಕ ಸಿನಿಮಾ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಈ ಹಿಂದೆ ಶಿವಾಜಿ ಕುರಿತ ಸಿನಿಮಾ ಬರಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಆ ಬಳಿಕ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ ಕೂಡ ಬಂದಿರಲಿಲ್ಲ.

ಸಂದೀಪ್‌ ಸಿಂಗ್‌ ನಿರ್ದೇಶನ: ಈ ಸಿನಿಮಾವನ್ನು ನಿರ್ಮಾಪಕ ಕಂ ನಿರ್ದೇಶಕ ಸಂದೀಪ್‌ ಸಿಂಗ್‌ ನಿರ್ದೇಶನ ಮಾಡಲಿದ್ದಾರೆ. ಸಂದೀಪ್‌ ಈ ಹಿಂದೆ ʼಮೇರಿ ಕೋಮ್‌ʼ ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದರು. “ಅಲಿಘರ್” (2015), “ಜುಂಡ್” (2022) ಸಿನಿಮಾಕ್ಕೆ ಬಂಡವಾಳ ಹಾಕಿದ್ದರು.

ʼಸಫೆದ್‌ʼ ಎನ್ನುವ ತೃತ್ತೀಯ ಲಿಂಗಿಯ ಕಥೆಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ʼಫೌಜಿ-2ʼ ಸರಣಿಯನ್ನು ನಿರ್ದೇಶನ ಮಾಡಿದ್ದರು.

“ರಿಷಬ್ ಶೆಟ್ಟಿ ಈ ಪಾತ್ರಕ್ಕೆ ನನ್ನ ಮೊದಲ ಮತ್ತು ಏಕೈಕ ಆಯ್ಕೆಯಾಗಿದ್ದರು. ಅವರು ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿ, ಚೈತನ್ಯ ಮತ್ತು ಶೌರ್ಯವನ್ನು ಸಾಕಾರಗೊಳಿಸಿದ್ದಾರೆ. ಈ ಚಿತ್ರವು ನನ್ನ ಹಲವು ವರ್ಷಗಳ ಕನಸಾಗಿದ್ದು, ಈ ಕಥೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂದೀಪ್‌ ಹೇಳಿದ್ದಾರೆ.

ʼಶಿವಾಜಿʼ ಸಿನಿಮಾ 2027ರ ಜನವರಿ 21 ರಂದು ಬಹುಭಾಷೆಯಲ್ಲಿ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಸದ್ಯ ರಿಷಬ್‌ ʼಕಾಂತಾರ-1ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ʼಜೈ ಹನುಮಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕಿ ಮೃತ್ಯು

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕ ಮೃತ್ಯು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಬಿಐಗಿಲ್ಲ… ಎಸ್‌ಐಟಿ ರಚಿಸಿದ ಹೈಕೋರ್ಟ್‌

Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಬಿಐಗಿಲ್ಲ… ಎಸ್‌ಐಟಿ ರಚಿಸಿದ ಹೈಕೋರ್ಟ್‌

Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್‌

Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌Bollywood: ಇಮ್ತಿಯಜ್‌ ಅಲಿ ಸಿನಿಮಾದಲ್ಲಿ ಮಾಲಿವುಡ್‌ ಸ್ಟಾರ್‌ ಫಾಹದ್‌; ನಾಯಕಿ ಯಾರು?

‌Bollywood: ಇಮ್ತಿಯಜ್‌ ಅಲಿ ಸಿನಿಮಾದಲ್ಲಿ ಮಾಲಿವುಡ್‌ ಸ್ಟಾರ್‌ ಫಾಹದ್‌; ನಾಯಕಿ ಯಾರು?

ʼRamayanaʼ ಪಾತ್ರದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿಯ ಹೊಟ್ಟೆ ಬಗೆದು ಮಾಂಸ ಸೇವಿಸಿದ ಕಲಾವಿದ

ʼRamayanaʼ ಪಾತ್ರದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿಯ ಹೊಟ್ಟೆ ಬಗೆದು ಮಾಂಸ ಸೇವಿಸಿದ ಕಲಾವಿದ

Bollywood: ಮಾಜಿ ಗೆಳೆಯ, ಪ್ರಿಯತಮೆ ಕೊ*ಲೆ ಆರೋಪ: ಖ್ಯಾತ ಬಾಲಿವುಡ್‌ ನಟಿಯ ಸಹೋದರಿ ಬಂಧನ

Bollywood: ಮಾಜಿ ಗೆಳೆಯ, ಪ್ರಿಯತಮೆ ಕೊ*ಲೆ ಆರೋಪ; ಖ್ಯಾತ ಬಾಲಿವುಡ್‌ ನಟಿಯ ಸಹೋದರಿ ಬಂಧನ

Video: ಸಮುದ್ರ ಬದಿ ಧ್ಯಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣತೆತ್ತ ನಟಿ

Video: ಸಮುದ್ರ ಬದಿ ಧ್ಯಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣತೆತ್ತ ನಟಿ

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Kaup: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Kaup: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.