Uppunda: ವ್ಯವಸ್ಥಿತ ತಂಗುದಾಣ ಬೇಕು

ಇರುವ ಪುಟಾಣಿ ತಂಗುದಾಣದಲ್ಲಿ ಕುಳಿತುಕೊಳ್ಳಲು ಬಿಡಿ, ನಿಲ್ಲಲಿಕ್ಕೂ ಸರಿಯಾಗಿ ಜಾಗ ಇಲ್ಲದ ಸ್ಥಿತಿ

Team Udayavani, Dec 3, 2024, 3:52 PM IST

7(1

ಉಪ್ಪುಂದ: ಬೈಂದೂರು ತಾಲೂಕಿನಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಉಪ್ಪುಂದ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಈ ಊರು ಕುಂದಾಪುರ ಹಾಗೂ ಬೈಂದೂರು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಕೂಡಾ ಹೌದು.

ನಾಯ್ಕನಕಟ್ಟೆ, ನಂದನವನ, ಮಡಿಕಲ್‌, ತಾರಾಪತಿ, ಅಳ್ವಿಕೋಡಿ, ಅಮ್ಮನವರತೊಪ್ಲು, ಕರ್ಕಿಕಳಿ, ಕಂಚಿಕಾನ್‌, ಬವಳಾಡಿ, ಗಂಟಿಹೊಳೆ, ಸಾಲಿಮಕ್ಕಿ, ಬಿಜೂರು ಗ್ರಾಮಗಳಿಗೆ ಪ್ರಮುಖ ಜಂಕ್ಷನ್‌ ಉಪ್ಪುಂದ ಪೇಟೆ. ಅರಮಕೋಡಿ ಈಶ್ವರ ದೇವಸ್ಥಾನ, ಮೂಡುಗಣಪತಿ ಹಾಗೂ ಆನೆಗಣಪತಿ ದೇವಸ್ಥಾನ ಇದೆ. ಉಪ್ಪುಂದ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ಕಂಚಿಕಾನ್‌ ಪ್ರಾಥಮಿಕ ಶಾಲೆ, ಬವಳಾಡಿ ಶಾಲೆಗೆ ಸಂಪರ್ಕ ಕೊಂಡಿಯಾಗಿದೆ. ಇನ್ನು ಬ್ಯಾಂಕ್‌, ಹತ್ತಾರು ಸಹಕಾರಿ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೀನು ಮಾರುಕಟ್ಟೆ, ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಜನ ಸೇರುವ ವಾರದ ಸಂತೆ ಉಪ್ಪುಂದದಲ್ಲಿ ನಡೆಯುತ್ತದೆ. ಇಷ್ಟೆಲ್ಲ ಇದ್ದರೂ ಇಲ್ಲೊಂದು ಸರಿಯಾದ ಬಸ್‌ ತಂಗುದಾಣ ಇಲ್ಲ.

ಪೇಟೆಯ ಮಧ್ಯಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹೋದು ಹೋಗುತ್ತದೆ. ಪ್ರಯಾಣಿಕ ಬಸ್‌ಗಳು ಪ್ಲೈ ಓವರ್‌ನ ಸರ್ವಿಸ್‌ ರಸ್ತೆಯಲ್ಲಿ ಸಾಗಿ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಫ್ಲೈ ಓವರ್‌ನ ಎರಡೂ ಕಡೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ, ಊಟಕ್ಕಿಲ್ಲದ ಉಪ್ಪಿನಕಾಯಿ ಮಾದರಿಯ ಚಿಕ್ಕದಾದ ತಂಗುದಾಣವನ್ನು ನಿರ್ಮಿಸಲಾಗಿದೆ. ಇದರಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲೂ ಆಗುವುದಿಲ್ಲ, ನಿಲ್ಲಲೂ ಆಗುವುದಿಲ್ಲ. ಕಾಟಾಚಾರಕ್ಕೆ ಎಂಬಂತೆ ಮೂರಡಿ ಅಗಲ 10 ಅಡಿ ಉದ್ದದ ತಂಗುದಾಣ ನಿರ್ಮಾಣ ಮಾಡಲಾಗಿದೆ!

ಮೀನು ಮಾರ್ಕೆಟ್‌ನಲ್ಲಿ ಆಶ್ರಯ
ಇಲ್ಲಿ ಸರಿಯಾದ ಬಸ್‌ ನಿಲ್ದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರು ಬಸ್‌ ಹತ್ತಲು ಸರ್ವಿಸ್‌ ರಸ್ತೆಯಲ್ಲೇ ನಿಲ್ಲಬೇಕು. ಜೋರಾಗಿ ಮಳೆ ಬಂದರೆ ಓಡಿ ಹೋಗಿ ಮೀನು ಮಾರ್ಕೆಟ್‌ನಲ್ಲಿ ಆಶ್ರಯ ಪಡೆಯದೆ ಬೇರೆ ಮಾರ್ಗವಿಲ್ಲ.

ನಾಯ್ಕನಕಟ್ಟೆ: ರಿಕ್ಷಾ ನಿಲ್ದಾಣವೇ ತಂಗುದಾಣ!
ನಾಯ್ಕನಕಟ್ಟೆ ರಾ.ಹೆದ್ದಾರಿಯಲ್ಲಿ ಎರಡು ಕಡೆಗಳಲ್ಲಿ ಬಸ್‌ ನಿಲ್ದಾಣ ಬಿಡಿ, ಪ್ರಯಾಣಿಕರ ತಂಗುದಾಣವು ಮಾಡಲು ಸಾಧ್ಯವಾಗಿಲ್ಲ. ನಾಗರಿಕರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ. ಪಶ್ಚಿಮ ದಿಕ್ಕಿನಲ್ಲಿ ರಿಕ್ಷಾ ನಿಲ್ದಾಣವೇ ಗತಿ. ಇನ್ನು ಪೂರ್ವ ಬದಿಯಲ್ಲಿ ಅಂಗಡಿಗಳ ಎದುರು ನಿಂತು ಬಸ್ಸಿಗಾಗಿ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ. ಕಂಬದಕೋಣೆ, ಶಾಲೆಬಾಗಿಲು, ಬಿಜೂರು ರಾ.ಹೆದ್ದಾರಿಯಲ್ಲಿ ವ್ಯವಸ್ಥಿತ ತಂಗುದಾಣ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿಲ್ಲ. ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾತ್ಕಾಲಿಕ ತಂಗುದಾಣವೇ ಆಶ್ರಯ ತಾಣವಾಗಿದೆ.

ಸರ್ವಿಸ್‌ ರಸ್ತೆ ಸಮಸ್ಯೆಗಿಲ್ಲ ಮುಕ್ತಿ
ಇನ್ನು ಸರ್ವಿಸ್‌ ರಸ್ತೆಯನ್ನು ಸಮರ್ಪಕವಾಗಿ ಮಾಡಿಲ್ಲ, ಸರ್ವಿಸ್‌ ರಸ್ತೆಯನ್ನು ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಮುಖ ಮಂಟಪದ ವರೆಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಧೂಳು ತಿನ್ನುತ್ತಿದೆ. ಚರಂಡಿ ವ್ಯವಸ್ಥೆಯಂತೂ ದೇವರಿಗೇ ಪ್ರೀತಿ ಎನ್ನುವಂತಿದೆ. ಗ್ರಾ.ಪಂ. ಸಮೀಪದಲ್ಲೇ ಅರ್ಧಂಬರ್ಧ ಚರಂಡಿ ನಿರ್ಮಿಸಿ ಹಾಗೇ ಬಿಡಲಾಗಿದೆ. ಸರ್ವಿಸ್‌ ರಸ್ತೆಯ ನೀರು ಪೇಟೆಯ ಮುಖ್ಯರಸ್ತೆಯ ಮೇಲೆ ಹರಿಯುತ್ತಿದೆ.

ಫ್ಲೈ ಓವರ್‌ ಬಿಟ್ಟು ಕೆಳಗೆ ಇಳಿಯದ ಎಕ್ಸ್‌ಪ್ರೆಸ್‌ಗಳು!
ಉಪ್ಪುಂದದಲ್ಲಿ ಈ ಹಿಂದೆ ವ್ಯವಸ್ಥಿತವಾದ ತಂಗುದಾಣವಿತ್ತು. ರಸ್ತೆ ಅಗಲೀಕರಣ ಸಂದರ್ಭ ಅದನ್ನು ಕಿತ್ತುಹಾಕಲಾಯಿತು. ಹೆದ್ದಾರಿ ಕಾಮಗಾರಿ ಬಳಿಕ ಕಾಟಾಚಾರಕ್ಕೆ ತಗಡಿನ ತಂಗುದಾಣ ಮಾಡಿದ್ದಾರೆ. ಉಪ್ಪುಂದ ಪೇಟೆಯಲ್ಲಿ ಸ್ಥಳೀಯರ ಮೇಲ್‌ ಸೇತುವೆ ಬೇಡಿಕೆಯನ್ನು ಪರಿಗಣಿಸದೆ ಅಂಡರ್‌ ಪಾಸ್‌ ನಿರ್ಮಾಣ ಮಾಡಲಾಯಿತು. ರಸ್ತೆಯ ವಿಸ್ತರಣೆಯಿಂದಾಗಿ ಇಡೀ ಪೇಟೆಯೇ ಎರಡು ಭಾಗವಾಗಿದೆ.

ಇಲ್ಲಿನ ರಾ. ಹೆದ್ದಾರಿ ವಿಸ್ತರಣೆಯಿಂದ ಸಮಸ್ಯೆಗಳೇ ಜಾಸ್ತಿಯಾಗಿದೆ. ಉಪ್ಪುಂದ ಕಾಲೇಜು ಬದಿಯಲ್ಲಿ ನಿರ್ಮಿಸಿರುವ ಬಸ್‌ ತಂಗುದಾಣದಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅಸಮರ್ಪಕ ಕಾಮಗಾರಿಯಿಂದ ಟ್ರಾಫಿಕ್‌ ಜಾಮ್‌, ವಾಹನಗಳ ಪಾರ್ಕಿಂಗ್‌ ಸಮಸ್ಯೆ ಉಂಟಾಗುತ್ತಿದೆ. ಕೆಎಸ್‌ಆರ್‌ಟಿಸಿಯ ಎಕ್ಸ್‌ಪ್ರೆಸ್‌ ಬಸ್ಸುಗಳು ಸರ್ವಿಸ್‌ ರಸ್ತೆಗೆ ಇಳಿಯದೆ ಫ್ಲೈ ಓವರ್‌ ಮೇಲೆಯೇ ಸಾಗುವುದರಿಂದ ದೂರದ ಊರುಗಳಿಗೆ ತೆರಳುವವರಿಗೆ ಭಾರೀ ಸಮಸ್ಯೆಯಾಗಿದೆ.

ಸಾರ್ವಜನಿಕರಿಗೆ ಅನುಕೂಲವಾಗದ ಕಿರಿದಾದ ನಿಲ್ದಾಣ
ಕಿರಿದಾದ ತಂಗುದಾಣ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗಿಲ್ಲ. ವಿದ್ಯಾರ್ಥಿ ಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ನಿತ್ಯ ಸಾವಿರಾರು ಜನರು ಸೇರುವ ಸ್ಥಳದಲ್ಲಿ ವ್ಯವಸ್ಥಿತವಾದ ತಂಗುದಾಣ ನಿರ್ಮಾಣ ಮಾಡಬೇಕಿದೆ.
– ಮೋಹನಚಂದ್ರ ಅಧ್ಯಕ್ಷರು, ಉಪ್ಪುಂದ ಗ್ರಾ.ಪಂ.

-ಕೃಷ್ಣ ಬಿಜೂರು

ಟಾಪ್ ನ್ಯೂಸ್

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

FOOD-DELIVERY

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ: ಡಿ. 14: ಶತಚಂಡಿಕಾ ಯಾಗ, ಬ್ರಹ್ಮಮಂಡಲ ಸೇವೆ

Udupi: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ: ಡಿ. 14: ಶತಚಂಡಿಕಾ ಯಾಗ, ಬ್ರಹ್ಮಮಂಡಲ ಸೇವೆ

Siddapura: ಅಳುಪರ ಕಾಲದ ಕಡ್ರಿದೊಡ್ಮನೆ ಕಂಬಳ

Siddapura: ಅಳುಪರ ಕಾಲದ ಕಡ್ರಿದೊಡ್ಮನೆ ಕಂಬಳ

Kundapura: 150 ವರ್ಷ ಇತಿಹಾಸವಿರುವ ಕುಂಜ್ಞಾಡಿ ಕಂಬಳ

Kundapura: 150 ವರ್ಷ ಇತಿಹಾಸವಿರುವ ಕುಂಜ್ಞಾಡಿ ಕಂಬಳ

Udupi: ಗೀತಾರ್ಥ ಚಿಂತನೆ-114: ಯಾರ ಅಸ್ತಿತ್ವಕ್ಕೂ ನಾಶವಿಲ್ಲ

Udupi: ಗೀತಾರ್ಥ ಚಿಂತನೆ-114: ಯಾರ ಅಸ್ತಿತ್ವಕ್ಕೂ ನಾಶವಿಲ್ಲ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.