Congress: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗ್ತಿರೋದು ಸತ್ಯ:ಸತೀಶ್ ಜಾರಕಿಹೊಳಿ
ಮತ ಸೆಳೆಯುವರ, ಜನರ ಆಕರ್ಷಿಸುವವರ ಅಧ್ಯಕ್ಷರಾಗಿ ಮಾಡಿದರೆ ಅನುಕೂಲ: ಲೋಕೋಪಯೋಗಿ ಸಚಿವ
Team Udayavani, Dec 3, 2024, 6:51 PM IST
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ) ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಚರ್ಚೆ ನಡೀತಾ ಇರೋದು ಸತ್ಯ, ತಳ ಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ವರಿಷ್ಠರ ಬಳಿ ಚರ್ಚೆಯೇ ಆಗಿಲ್ಲ, ಬಹಳಷ್ಟು ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗಬೇಕಿರುವುದರಿಂದ ಅದು ನಡೆಯೋದು ಮಾತ್ರ ನಿಶ್ಚಿತ, ತನಗೆ ಜವಾಬ್ದಾರಿ ವಹಿಸುವ ನಿರ್ಧಾರವನ್ನು ಎಐಸಿಸಿ ಮಾಡಿದಾಗ ನೋಡೋಣ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾಡುವಾಗ ಮತ ಸೆಳೆಯುವರ, ಜನರ ಆಕರ್ಷಣೆ ಮಾಡುವವರ ಅಧ್ಯಕ್ಷರಾಗಿ ಮಾಡಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಉತ್ತರಿಸಿದರು.
ಶಾಸಕ ಆಸೀಫ್ ಸೇಠ್ ಸಚಿವ ಸ್ಥಾನ ಕೇಳಿದ್ದು ನಿಜ:
ಶಾಸಕ ಆಸೀಫ್ (ರಾಜು) ಸೇಠ್ ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದಾರೆ, ಅವರು ಸಚಿವ ಸ್ಥಾನ ಕೇಳಿರುವುದು ನಿಜ. ಆದರೆ ಬೆಳಗಾವಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವ ಕುರಿತು ನನಗೆ ಗೊತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದರು ನಮ್ಮ ಭಾಗದಲ್ಲಿ ಯಾರು ಸಚಿವರಾಗಿಲ್ಲ, ಹೀಗಾಗಿ ಆದರೆ ಸಚಿವರ ಕೈ ಬಿಡುವುದಾಗಲಿ ಅಥವಾ ನೇಮಕ ಮಾಡಿಕೊಳ್ಳುವ ಅಧಿಕಾರ, ವ್ಯಾಪ್ತಿ ನನಗೆ ಬರುವುದಿಲ್ಲ. ಅಧಿವೇಶನ ನಂತರ ಏನಾಗುತ್ತದೆ ಎಂದು ಕಾದು ನೊಡೋಣ. ಅಧಿವೇಶನ ಮುಗಿದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕ ಮೃತ್ಯು
Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಬಿಐಗಿಲ್ಲ… ಎಸ್ಐಟಿ ರಚಿಸಿದ ಹೈಕೋರ್ಟ್
Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್
MUDA Case: ಲೋಕಾಯುಕ್ತಕ್ಕೆ ಇಡಿ ಬರೆದಿರುವ ಪತ್ರ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ದತ್ತು ಪಡೆಯಲು ಅವಕಾಶ: ಸಚಿವ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.