Kadaba: ಬಿಳಿನೆಲೆ ಸಂದೀಪ್‌ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

ಸಮಗ್ರ ತನಿಖೆಗೆ ಆಗ್ರಹ

Team Udayavani, Dec 4, 2024, 12:05 AM IST

Kadaba: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

ಕಡಬ: ಕಡಬ ತಾಲೂಕಿನ ಬಿಳಿನೆಲೆಯ ಮುಂಗ್ಲಿಮಜಲು ನಿವಾಸಿ ಸಂದೀಪ್‌ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಆಗ್ರಹಿಸಿ ಬಿಳಿನೆಲೆ ಗ್ರಾ.ಪಂ. ಎದುರು ಮಂಗಳವಾರ ಸಂದೀಪ್‌ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಸಂದೀಪ್‌ನನ್ನು ಪ್ರತೀಕ್‌ ಓರ್ವನೇ ಕೊಲೆ ಮಾಡಿ ದುರ್ಗಮ ಕಾಡಿನಲ್ಲಿ ಹಾಕಲು ಸಾಧ್ಯವೇ ಇಲ್ಲ. ಕೊಲೆ ಪ್ರಕರಣದಲ್ಲಿ ಬೇರೆ ವ್ಯಕ್ತಿಗಳು ಇದ್ದಾರೆ. ಸಮಗ್ರ ತನಿಖೆ ನಡೆಸಿ ಇತರ ಆರೋಪಿಗಳನ್ನು ಕೂಡ ಬಂಧಿಸಬೇಕು ಎಂದು ಆಗ್ರಹಿಸುವುದರೊಂದಿಗೆ ಸಂದೀಪ್‌ ನಾಪತ್ತೆಯಾಗಿ ಬಳಿಕ ಕಾಡಿನಲ್ಲಿ ಆತನ ಶವ ಸಿಗುವ ತನಕ ಹಲವು ಬೆಳವಣಿಗೆಗಳು ನಡೆದರೂ, ಬಿಳಿನೆಲೆ ಗ್ರಾ.ಪಂ. ಸದಸ್ಯರು ಯಾವುದೇ ರೀತಿಯ ಸಹಕಾರ ನೀಡಿಲ್ಲ ಎನ್ನುವ ಆರೋಪ ಪ್ರತಿಭಟನಕಾರರಿಂದ ಕೇಳಿಬಂತು.

ಓರ್ವನೇ ಆರೋಪಿಯಲ್ಲ
ಪ್ರಕರಣದಲ್ಲಿ ಕಡಬ ಪೋಲಿಸರ ನಡೆ ಸಂಶಯಾಸ್ಪದವಾಗಿದ್ದು, ಅವರು ಒತ್ತಡಕ್ಕೆ ಮಣಿದು ಪ್ರತೀಕ್‌ ಓರ್ವನೇ ಆರೋಪಿ ಎಂದು ಬಿಂಬಿಸುತ್ತಿದ್ದಾರೆ. ನಾಪತ್ತೆ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಪೋಲಿಸರು ಬಳಿಕ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರೂ ಶವ ಪತ್ತೆ ಹಚ್ಚಲು ಮುಂದಾಗಲಿಲ್ಲ. ಗ್ರಾಮಸ್ಥರ, ಕುಟುಂಬಸ್ಥರ ಪ್ರತಿಭಟನೆಯ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೊಲೆ ಆರೋಪಿಗಳಿಗೆ ರಕ್ಷಣೆ ನೀಡಿ, ವಿಳಂಬ ಧೋರಣೆಯಿಂದ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಮೃತ ಸಂದೀಪ್‌ನ ಕುಟುಂಬಸ್ಥರು ಆರೋಪಿಸಿದರು. ಪ್ರಕರಣ ನಡೆದು ಏಳು ದಿನಗಳಾದರೂ ಪ್ರತಿಭಟನೆ, ಪೊಲೀಸ್‌ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದರೂ ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಾಗಲೀ ಸದಸ್ಯರಾಗಲಿ ಯಾಕೆ ಮುಂದೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾ.ಪಂ. ಅಧ್ಯಕ್ಷೆ ಶಾರದಾ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಲಾಯಿತು.

ಆರೋಪಿ ಪೊಲೀಸ್‌ ಕಸ್ಟಡಿಗೆ
ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದು ಕಾಡಿನಲ್ಲಿ ಬಿಸಾಕಿದ್ದ ಕೊಲೆ ಆರೋಪಿ ಬಿಳಿನೆಲೆ ಗ್ರಾಮದ ನೆಟ್ಟಣದ ಚೆಂಡೆಹಿತ್ಲು ನಿವಾಸಿ ಪ್ರತೀಕ್‌ನನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಟಾಪ್ ನ್ಯೂಸ್

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

12

Puttur: ಪೆರ್ನಾಜೆ; ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ

ಸುಳ್ಯ: ಕೆಸರು ಮಣ್ಣಿನಲ್ಲಿ ಹೂತು ಲಾರಿ

Sullia: ಕೆಸರು ಮಣ್ಣಿನಲ್ಲಿ ಹೂತು ಲಾರಿ

missing

Belthangady: ಮುಂಡತ್ತೋಡಿ; ವಿವಾಹಿತ ನಾಪತ್ತೆ

accident2

Aranthodu: ಕಲ್ಲುಗುಂಡಿ; ಕಾರು ಅಪಘಾತ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.