Hockey: ವನಿತಾ ಜೂ. ಏಷ್ಯಾ ಕಪ್ ಹಾಕಿ: ಭಾರತ ತಂಡ ಮಸ್ಕತ್‌ಗೆ
Team Udayavani, Dec 4, 2024, 1:59 AM IST
ಬೆಂಗಳೂರು: ಭಾರತದ ವನಿತಾ ತಂಡ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಗಾಗಿ ಮಂಗಳವಾರ ಮಸ್ಕತ್‌ಗೆ ಪ್ರಯಾಣ ಬೆಳೆಸಿತು. ಭಾರತ ಹಾಲಿ ಚಾಂಪಿಯನ್ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದೆ.
ಪಂದ್ಯಾವಳಿ ಡಿ. 7ರಿಂದ 15ರ ತನಕ ನಡೆಯಲಿದೆ. ಭಾರತ “ಎ’ ವಿಭಾಗದಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ರವಿವಾರ ಬಾಂಗ್ಲಾ ವಿರುದ್ಧ ಆಡಲಿದೆ. ಬಳಿಕ ಚೀನ, ಮಲೇಷ್ಯಾ, ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. “ಬಿ’ ವಿಭಾಗದಲ್ಲಿ ದ. ಕೊರಿಯಾ, ಜಪಾನ್, ಚೈನೀಸ್ ತೈಪೆ, ಹಾಂಕಾಂಗ್ ಮತ್ತು ಶ್ರೀಲಂಕಾ ತಂಡಗಳಿವೆ. ಇಲ್ಲಿ ಅಗ್ರ 3 ಸ್ಥಾನ ಪಡೆದ ತಂಡ ಗಳು ಎಫ್ಐಎಚ್ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ.
ಜ್ಯೋತಿ ಸಿಂಗ್ ನಾಯಕಿ
ಭಾರತ ತಂಡವನ್ನು ಜ್ಯೋತಿ ಸಿಂಗ್ ಮುನ್ನಡೆಸಲಿದ್ದಾರೆ. ಸಾಕ್ಷಿ ರಾಣಾ ಉಪನಾಯಕಿಯಾಗಿದ್ದಾರೆ. ವೈಷ್ಣವಿ ವಿಟ್ಠಲ ಫಾಲ್ಕೆ, ಸುನೇಲಿಯಾ ಟೋಪೊ, ಮಮ್ತಾಜ್ ಖಾನ್, ದೀಪಿಕಾ, ಬ್ಯೂಟಿ ಡುಂಗ್‌ಡುಂಗ್ ಅವರಂಥ ಅನುಭವಿ ಆಟಗಾರ್ತಿಯರು ತಂಡದಲ್ಲಿದ್ದಾರೆ.
“ನಾವು ತುಂಬು ವಿಶ್ವಾಸದಲ್ಲಿದ್ದೇವೆ. ಅನುಭವಿಗಳನ್ನು ಹೊಂದಿ ರುವ ತಂಡ ನಮ್ಮದಾಗಿದೆ. ಕಳೆದ ಕೆಲವು ಸಮಯ ದಿಂದ ಕಠಿನ ಅಭ್ಯಾಸ ನಡೆಸುತ್ತಲೇ ಇದ್ದೇವೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವುದು ನಮ್ಮ ಗುರಿ’ ಎಂದು ನಾಯಕಿ ಜ್ಯೋತಿ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.