Daily Horoscope;ಮನಸ್ಸಿನ ಸ್ವಾಸ್ಥ್ಯಕ್ಕೆ ಹಾನಿ, ಉದ್ಯೋಗ ಪ್ರಾರ್ಥನೆಗೆ ಕ್ಷಿಪ್ರಾನುಗ್ರಹ
Team Udayavani, Dec 4, 2024, 7:20 AM IST
ಮೇಷ: ಪ್ರತಿಕೂಲ ಹವೆಯಿಂದ ದೇಹ, ಮನಸ್ಸಿನ ಸ್ವಾಸ್ಥ್ಯಕ್ಕೆ ಹಾನಿ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ವ್ಯವಹಾರಸ್ಥರಿಗೆ ಪ್ರಾರ್ಥನೆಗೆ ಕ್ಷಿಪ್ರಾನುಗ್ರಹ. ಪ್ರಯಾಣದ ಯೋಜನೆ ಮುಂದಕ್ಕೆ. ಹಿರಿಯರಿಗೆ ಮುದ ನೀಡುವ ಸಂದರ್ಭ ಸೃಷ್ಟಿ.
ವೃಷಭ: ಹಲವು ಬಗೆಯ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಕಲೋಪಾಸಕ್ತರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಮಕ್ಕಳ ವ್ಯಾಸಂಗಾಸಕ್ತಿ ಬೆಳೆಸಲು ವಿಶೇಷ ಪ್ರಯತ್ನ ಅಗತ್ಯ.
ಮಿಥುನ: ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಮನೋಬಲದೆದುರು ಮಣಿ ಯುವ ಸಮಸ್ಯೆಗಳು. ಹಿರಿಯರಿಗೆ ನಿಶ್ಚಿಂತೆಯ ಬದುಕು. ಗೃಹಿಣಿಯರ ಪ್ರಯತ್ನ ಸ್ವಂತ ಆದಾಯ ಗಳಿಕೆಯಲ್ಲಿ ಕೇಂದ್ರೀಕರಣ.
ಕರ್ಕಾಟಕ: ಉಳಿತಾಯ ಯೋಜನೆಗಳಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ನಿಧಾನ. ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಉತ್ತರ ದಿಕ್ಕಿನಿಂದ ಶುಭಸಮಾಚಾರ.ಗೃಹಿಣಿಯರಿಗೆ ಮನೋರಂಜನೆಯಲ್ಲಿ ಆಸಕ್ತಿ.
ಸಿಂಹ: ಉದ್ಯೋಗ, ವ್ಯವಹಾರಕ್ಕೆ ಎದುರಾದ ಅಡಚಣೆಗಳ ನಿವಾರಣೆ. ಪಾರದರ್ಶಕ ವ್ಯವಹಾರದಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನ. ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ.
ಕನ್ಯಾ: ಲೌಕಿಕ ದುಃಖ ಉಪಶಮನಕ್ಕೆ ಸಣ್ಣ ಯಾತ್ರೆ. ಮನೋರಂಜನೆ ಕೇಂದ್ರಿತ ಉದ್ಯಮ ಕ್ಷಿಪ್ರ ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಉತ್ತಮ ಅವಕಾಶ. ಮಕ್ಕಳ ವಿವಾಹ ಮಾತುಕತೆಯಲ್ಲಿ ಮುನ್ನಡೆ.
ಗೃಹೋಪಕರಣಗಳ ಖರೀದಿಗೆ ಧನವ್ಯಯ.
ತುಲಾ: ಗ್ರಹಗತಿ ಮತ್ತು ಹವಾಮಾನ ಎರಡರ ಪರಿಣಾಮವಾಗಿ ತಾತ್ಕಾಲಿಕ ಅನಾರೋಗ್ಯ.ಉದ್ಯೋಗಸ್ಥರಿಗೆ ಕೆಲಸಗಳ ಒತ್ತಡ. ತಾಯಂದಿರಿಗೆ ಮಕ್ಕಳ ಆರೋಗ್ಯದ ಚಿಂತೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕಲಾಭ.
ವೃಶ್ಚಿಕ: ಸಂಸಾರ ಸುಖ ಉತ್ತಮ. ದೀರ್ಘಕಾಲದ ಹಿಂದೆ ನೀಡಿದ್ದ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ. ಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡುವ ಸಂದರ್ಭ. ಲೇವಾದೇವಿ ವ್ಯವಹಾರಸ್ಥರಿಗೆ ವಸೂಲಿಯ ಚಿಂತೆ.
ಧನು: ಆಸ್ತಿ ಖರೀದಿಯ ಬಗ್ಗೆ ಮಾತುಕತೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಯ ಸಾಧ್ಯತೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯದಲ್ಲಿ ಭಾಗಿ. ದೀರ್ಘಕಾಲದ ಅನಾರೋಗ್ಯ ದಿಂದ ಮುಕ್ತಿ. ಮಕ್ಕಳಿಂದ ನೆಮ್ಮದಿ.
ಮಕರ: ಉದ್ಯೋಗಸ್ಥರಿಂದ ಅನಾಯಾಸ ವಾಗಿ ಕಾರ್ಯನಿರ್ವಹಣೆ. ವಾಹನ ಚಾಲನೆಯಲ್ಲಿ ಎಚ್ಚರ. ಸೌಂದರ್ಯ ವರ್ಧಕಗಳ ಮಾರಾಟಗಾರರಿಗೆ ಸದವಕಾಶ. ಶಸ್ತ್ರ ವೈದ್ಯರಿಗೆ ವಿಶಿಷ್ಟ ಬಗೆಯ ಚಿಕಿತ್ಸೆಯಿಂದ ಕೀರ್ತಿ.
ಕುಂಭ: ಏಳೂವರೆ ಶನಿಯ ಮಹಿಮೆಯಿಂದ ನೆಮ್ಮದಿ ಭಂಗ. ಬಂಧುಗಳೊಡನೆ ಮನಸ್ತಾಪ ವಾಗದಂತೆ ಎಚ್ಚರ. ಸಮಾಜಸೇವೆಗೆ ಇನ್ನಷ್ಟು ಅವಕಾಶಗಳ ಶೋಧನೆ. ಮಕ್ಕಳ ವಿಷಯದಲ್ಲಿ ಚಿಂತೆ. ಮುದ್ರಣ ಸಾಮಗ್ರಿ ವಿತರಕರಿಗೆ ದೂರದಿಂದ ಕರೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.
ಮೀನ: ಒಂದಾದ ಮೇಲೊಂದರಂತೆ ಬರುವ ಹೊಣೆಗಾರಿಕೆಗಳು. ಸೋದರಿಯ ಸಂಸಾರ ಸಂಬಂಧಿ ಯೋಜನೆಗಳಿಗೆ ಸಹಾಯ.ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಗುರುದರ್ಶನದಿಂದ ಆತ್ಮಸ್ಥೈರ್ಯ ವೃದ್ಧಿ. ಹಿರಿಯರ ಆಸ್ತಿ ವಿಚಾರದಲ್ಲಿ ಮನಸ್ತಾಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horosocpe: ವ್ಯಾಪಾರಿಗಳಿಗೆ ಅದೃಷ್ಟ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
Daily Horoscope: ಪೂರ್ವಸಿದ್ಧತೆಯಿಲ್ಲದೆ ಕಾರ್ಯಕ್ಕೆ ಧುಮುಕದಿರಿ, ಪ್ರಯತ್ನದಲ್ಲಿ ಪ್ರಗತಿ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
Earthquake Strikes: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಭೂಕಂಪ
Railway: ಎಸಿ ಬೋಗಿಗಳ ಬದಲು ಸಾಮಾನ್ಯ ಬೋಗಿ ಸೇರ್ಪಡೆ ಹೆಚ್ಚಳಕ್ಕೆ ಕ್ರಮ: ರೈಲ್ವೇ ಸಚಿವ
Asia Cup Cricket: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್: ಸೆಮಿಫೈನಲ್ ಪ್ರವೇಶಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.