Old age is not a Burden: ಹಿರಿಯರು ಎಂದಿಗೂ, ಯಾರಿಗೂ ಹೊರೆಯಲ್ಲ

ಕೆಲವು ಸಂಸಾರಗಳಲ್ಲಿ ಅಪರೂಪಕ್ಕೆ ಮಕ್ಕಳೊಂದಿಗೆ ಬದುಕುವ ಸುಯೋಗ

Team Udayavani, Dec 4, 2024, 11:12 AM IST

Old age is not a Burden: ಹಿರಿಯರು ಎಂದಿಗೂ, ಯಾರಿಗೂ ಹೊರೆಯಲ್ಲ

ಅರವತ್ತು ವರ್ಷವು ಮನುಷ್ಯನ ಜೀವನದಲ್ಲಿ ಒಂದು ನಿರ್ಣಾಯಕ ಘಟ್ಟ. ಸರಕಾರಿ ಕೆಲಸದಲ್ಲಿದ್ದವರಿಗೆ ಇದು ನಿವೃತ್ತಿಯ ಸಮಯ. ಬೇರೆ ಬೇರೆ ಹುದ್ದೆಗಳನ್ನು ಹೊತ್ತು ದುಡಿದವರಿಗೆ ಪೂರ್ಣ ವಿಶ್ರಾಂತಿ. ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿಯ ಬದು ಕನ್ನು ಕಳೆಯುವುದೂ ತ್ರಾಸದ ಕೆಲಸ. ಸಹಜವಾಗಿ ಹುದ್ದೆಯ ಮೂಲಕ ಕಂಡುಕೊಂಡ ಗೌರವವು ಕಣ್ಮರೆಯಾಗುತ್ತದೆ. ತಾನೇ ದುಡಿದ ಸಂಸ್ಥೆ ಅಥವಾ ಕಚೇರಿಗೆ ಹೋದಾಗಲೂ ಕಹಿ ಅನುಭವ. ಮೊದಲಿನ ಗೌರವವಿಲ್ಲ. ನಿವೃತ್ತರಾದ ಮೇಲೆ ಸಹೋದ್ಯೋಗಿಗಳಾಗಿದ್ದ ಅನೇಕರು ಸಂಪರ್ಕ ದಿಂದಲೂ ದೂರವಾಗುತ್ತಾರೆ. ನಿವೃತ್ತರಿಗೆ ಈ ವ್ಯತ್ಯಾಸದ ಅರಿವು ಆಗಿಯೇ ಆಗುತ್ತದೆ.

ಸಂಸಾರದಲ್ಲಿಯೂ ನಿರೀಕ್ಷಿತ ಸಂಬಂಧಗಳ ಕೊರತೆ. ಈಗೀಗ ಹೆಚ್ಚಿನ ಕುಟುಂಬಗಳಲ್ಲಿ ಹಿರಿಯ ಎರಡು ತಲೆಗಳು ಮಾತ್ರ. ಮಕ್ಕಳಿಗಾದರೋ ದುಡಿಮೆಯ ಹೊಣೆ. ದೂರದ ಊರುಗಳಲ್ಲಿ ಅವರ ಉದ್ಯೋಗ. ಕೆಲವೊಮ್ಮೆ ವಿದೇಶದಲ್ಲಿ ಉದ್ಯೋಗ. ಹಾಗಾಗಿ ಹಿರಿಯರು ತಮ್ಮ ಮನೆಯಲ್ಲಿಯೇ ವಾಸ್ತವ್ಯ. ಮಕ್ಕಳು ಕರೆದರೂ ತಮ್ಮ ಹಿರಿಯರು ಬದುಕಿ ಬಾಳಿದ ಮನೆಯನ್ನು ತೊರೆಯಲು ಒಪ್ಪದ ಮನಸ್ಸು. ಹಾಗಾಗಿ ಹಿರಿಯ ಎರಡು ಜೀವಗಳು ದಿನವೂ ತಮ್ಮೊಳಗೆ ಸಾಂತ್ವನವನ್ನು ಹೇಳಿಕೊಳ್ಳುತ್ತಾ ಕಾಲ ಕಳೆಯುವ ಪರಿಸ್ಥಿತಿ. ಮಕ್ಕಳು, ಮೊಮ್ಮಕ್ಕಳೊಂದಿಗೆ ಖುಷಿಯಿಂದ ಸಮಯ ಕಳೆ ಯುವ ಹಂಬಲ ಹೊತ್ತವರಿಗೆ ಹೇಳಿಕೊಳ್ಳಲಾಗದ ನೋವು.

ಗ್ರಾಮೀಣ ಭಾಗದ ಕೆಲವು ಸಂಸಾರಗಳಲ್ಲಿ ಅಪರೂಪಕ್ಕೆ ಮಕ್ಕಳೊಂದಿಗೆ ಬದುಕುವ ಸುಯೋಗ. ಅಲ್ಲಿಯೂ ಕೆಲವು ಸಮಸ್ಯೆಗಳು. ಹಿರಿಯರಿಗೆ ಒಂದಷ್ಟು ಮಾತನಾಡುವ ಹುರುಪು. ಕಳೆದ ದಿನಗಳ ನೆನಪುಗಳೆಲ್ಲ ಎದುರಾಗುತ್ತವೆ. ಆ ಕಾಲವೇ ಸೊಗಸು ಎನಿಸುತ್ತದೆ.

ಅದನ್ನು ಇತರರೊಂದಿಗೆ ಹಂಚಿಕೊಂಡು ಖುಷಿ ಪಡುವ ತವಕ. ಆದರೆ ಅವರ ನುಡಿ ಗಳಿಗೆ ಕಿವಿಯಾಗುವ ವ್ಯವಧಾನ ಅನೇಕರಿಗಿಲ್ಲ. ಮೊಬೈಲ್‌ ಹಾಗೂ ಟಿವಿಗಳಲ್ಲಿ ಆಸಕ್ತರಾಗಿರುವಾಗ ಮನೆಯೊಳಗೆ ಮಾತಿಗೇ ಬಡತನ. ಹಿರಿಯರ ಈ ಅನುಭವದ ನುಡಿಗಳು ಇವರಿಗೆ ರಗಳೆಯಾಗಿ ಕಂಡರೂ ಅಚ್ಚರಿ ಪಡಬೇಕಾಗಿಲ್ಲ. ಅನೇಕ ಹಿರಿಯರು ತಮ್ಮ ಹಿಂದಿನ ದಿನಗಳನ್ನು ಇಂದಿನ ದಿನಗಳೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ.

ತಾವು ಎಲ್ಲೋ ಒಂದು ಕಡೆ ಅವಗಣಿಸಲ್ಪಡುತ್ತಿದ್ದೇವೆ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ. ಹಿರಿಯರಾದಂತೆ ಆರೋಗ್ಯವೂ ಆತಂಕವನ್ನು ಒಡ್ಡುತ್ತದೆ. ದೈಹಿಕ ಸಾಮರ್ಥಯ ಹಾಗೂ ಮನಸ್ಸಿನ ಸ್ಥೈರ್ಯ ಕುಸಿಯುತ್ತದೆ. ಹಾಗಾಗಿ ಬದಲಾದ ದೇಹ ಹಾಗೂ ಮನಸ್ಸಿಗೆ ಬದಲಾದ ಜೀವನಶೈಲಿಯನ್ನು ಅಳವಡಿಸಿ ಕೊಂಡರೆ ಉತ್ತಮ. ಆರೋಗ್ಯಕ್ಕಾಗಿ ಬೆಳಗ್ಗೆ ಬೇಗ ಏಳುವುದು. ಲಘು ವ್ಯಾಯಾಮ ಅಥವಾ ನಡಿಗೆ. ಪ್ರಾರ್ಥನೆ ಹಾಗೂ ಧ್ಯಾನ. ಅಧ್ಯಾತ್ಮ ಗ್ರಂಥಗಳ ಅಧ್ಯಯನ. ಹಿತಮಿತ ಪೌಷ್ಟಿಕ ಆಹಾರ ಸೇವನೆ. ಟಿವಿಯಲ್ಲಿ ತಮಗೆ ಆಸಕ್ತಿಯಿರುವ ವಿಷಯಗಳನ್ನು ವೀಕ್ಷಿಸುವುದು ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದು ಉತ್ತಮ.

ಇನ್ನು ಹಿರಿಯರು ಅನುಭವಿಸುತ್ತಿರುವ ಸಮಸ್ಯೆ, ಸಂಕಷ್ಟ, ಮಾನಸಿಕ ತೊಳಲಾಟಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿ ಹಿರಿಯರು ಮತ್ತು ಕಿರಿಯರು ಒಂದಾಗಿ ಶ್ರಮಿಸಬೇಕು. ಹಿರಿಯರು ವಿಶೇಷವಾದ ಗೌರವದ ನಿರೀಕ್ಷೆಯಿಂದ ಹೊರಬಂದು, ಬಂದುದನ್ನು ಸ್ವೀಕರಿಸುವ ಚಿತ್ತಶಕ್ತಿಯನ್ನು ಬೆಳೆಸಿಕೊಳ್ಳುವುದು ಸೂಕ್ತ. ತಮ್ಮ ಹಳೆಯ ಪುರಾಣಗಳನ್ನು ಕೇಳಲು ಉತ್ಸುಕರಲ್ಲದವರ ಮುಂದೆ ಮೌನವೇ ಮದ್ದು. ಕೃಷಿ, ಸಂಗೀತ, ಓದುವಿಕೆ, ಪ್ರವಾಸ, ಸಮಾಜಸೇವೆ, ಹಿತೈಷಿಗಳೊಂದಿಗೆ ಒಂದಿಷ್ಟು ಹರಟೆ ಇತ್ಯಾದಿ ತಮ್ಮ ಆಸಕ್ತಿಯ ಹವ್ಯಾಸಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಅನಾಥಪ್ರಜ್ಞೆ ದೂರವಾಗುವುದು.

ಅತಿಯಾಗಿ ಹಿಂದಿನದ್ದಕ್ಕೆ ಕಟ್ಟುಬೀಳದೆ ಹೊಂದಾಣಿಕೆಯ ಸೂತ್ರಕ್ಕೆ ಬದ್ಧರಾಗುವುದರಿಂದ ಬಹುತೇಕ ಸಮಸ್ಯೆಗಳು
ನಿವಾರಣೆಯಾಗುತ್ತವೆ. ಹಿಂದಿನ ದಿನಗಳ ವೈಭವಗಳನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಂಡು ಅಂದಿನ ಹಾಗೂ
ಇಂದಿನ ಕಾಲಗುಣವನ್ನು ತುಲನೆ ಮಾಡದೇ ಮಾನಸಿಕ ನೆಮ್ಮದಿಗೆ ಶ್ರಮಿಸಬೇಕು. ಮನಸ್ಸು ಖಾಲಿಯಾದಷ್ಟೂ ಅನಗತ್ಯ ಚಿಂತೆಗಳ ಕಾಟ ಅಧಿಕವಾಗುತ್ತದೆ. ನಕಾರಾತ್ಮಕ ಚಿಂತನೆಗಳು ಮಾನಸಿಕ ಶಾಂತಿಯನ್ನು ಕಸಿಯುತ್ತವೆ.

ಅವುಗಳನ್ನು ಹಿಮ್ಮೆಟ್ಟಿಸಿ ಸಕಾರಾತ್ಮಕ ಚಿಂತನೆಗಳಿಗೆ ಮನಸ್ಸನ್ನು ತೆರೆದಿಡಬೇಕು. ಒಟ್ಟಿನಲ್ಲಿ ಇಳಿಯ ವಯಸ್ಸಿನಲ್ಲಿ
ಮಾನಸಿಕ ಶಾಂತಿ ಹಾಳಾಗದಂತೆ ನೋಡಿಕೊಳ್ಳುವುದರಲ್ಲಿ ಅಡಗಿದೆ ಹಿರಿಯರು ಹಾಲಿ ಎದುರಿಸುತ್ತಿರುವ ಎಲ್ಲ ತೊಳ
ಲಾಟಗಳಿಗೆ ಪರಿಹಾರ. ಇನ್ನು ಮನೆಯ ಕಿರಿಯರೂ ದಿನದಲ್ಲಿ ಒಂದಿಷ್ಟು ಹೊತ್ತು ಟಿವಿ, ಮೊಬೈಲ್‌ನಿಂದ ಹೊರ ಬಂದು ಹಿರಿಯರೊಂದಿಗೆ ಮುಕ್ತವಾಗಿ ಬೆರೆತು ಮಾತನಾಡುವುದನ್ನು ರೂಢಿಯಾಗಿಸಿಕೊಳ್ಳುವುದರಿಂದ ಹಿರಿಯರನ್ನು ಸದಾ ಕಾಡುವ ಒಂಟಿತನ ಯಾ ಅನಾಥ ಭಾವ ದೂರವಾಗಲು ಸಾಧ್ಯ. ಇದರ ಜತೆಯಲ್ಲಿ ಕಿರಿಯರಿಗೂ ಹಿರಿಯರ ಅನುಭವದ ಬುತ್ತಿಯಿಂದ ಒಂದಿಷ್ಟು ಸಲಹೆ, ಮಾರ್ಗದರ್ಶನ ಲಭಿಸಿ ಅವರ ಸಮಸ್ಯೆಗಳಿಗೂ ಪರಿಹಾರ ಲಭಿಸೀತು.

ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಸಭೆಯಲ್ಲಿದ್ದ ಹಿರಿಯರ ಕುರಿತು ದ್ರೌಪದಿ ಹೇಳುವ ಮಾತುಗಳು ಗಮನಾರ್ಹ. “ಹಿರಿಯರಿಲ್ಲದ ಸಭೆಯು ಸಭೆಯಲ್ಲ. ಅದು ಮನುಷ್ಯರ ನೆರವಿ. ಹಿರಿಯರು ಹಿರಿಯರಲ್ಲ. ಯಥಾರ್ಥ ಭಾಷಣ ಭೀತಚೇತನರು’. ಅಂದರೆ ಸಭೆಯಲ್ಲಿ ಹಿರಿಯರಿರಬೇಕು. ಇದ್ದುದನ್ನು ಇದ್ದ ಹಾಗೆ ಹೇಳದ ಹಿರಿಯರು ಹೆದರಿಕೊಂಡ ಚೇತನರು. ಹಿರಿಯರ ಅನುಭವಗಳೂ ಒಂದು ಸಂಪತ್ತು. ಅವುಗಳಿಗೆ ಕಿವಿ ಯಾಗೋಣ , ಗೌರವಿಸೋಣ.

*ಡಾ| ಶ್ರೀಕಾಂತ್‌ ಸಿದ್ದಾಪುರ

ಟಾಪ್ ನ್ಯೂಸ್

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

FOOD-DELIVERY

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Map1

Google ಮ್ಯಾಪ್‌ ಏಕೆ ದಾರಿ ತಪ್ಪುತ್ತದೆ? ಗೂಗಲ್‌ ಮ್ಯಾಪ್‌ ಹೇಗೆ ಹುಟ್ಟಿಕೊಂಡಿತು…

Sports

Sports ವಿದ್ಯಾರ್ಥಿಗಳಿಗೆ ಉತ್ತೇಜನ: ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

Pan card

PAN Card ಹೊಸ ಫೀಚರ್ಸ್‌, ಹೆಚ್ಚು ಸುರಕ್ಷಿತ

4-BSNL

BSNL: ಗತವೈಭವದತ್ತ ಬಿಎಸ್‌ಎನ್‌ಎಲ್‌?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.