Hubballi: ಸಿಎಂ ಸಂವಿಧಾನ ಪರವೋ… ಶರಿಯತ್ ಕಾನೂನು ಪರವೋ ಸ್ಪಷ್ಟಪಡಿಸಬೇಕು: ಸಿ.ಟಿ.ರವಿ
Team Udayavani, Dec 4, 2024, 4:41 PM IST
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂವಿಧಾನ ಪರವೋ ಅಥವಾ ಶರಿಯತ್ ಕಾನೂನು ಪರವೋ ಎಂಬುವುದನ್ನು ಸ್ಪಷ್ಟಪಡಿಸಬೇಕು. ಆಸ್ತಿ ಕಬಳಿಸುವ ವಕ್ಫ್ ಮಂಡಳಿಯ ವಕ್ಫ್ ನ್ಯಾಯಾಧಿಕರಣದಿಂದ ನ್ಯಾಯ ಸಿಗಲು ಸಾಧ್ಯವೇ ಎಂದು ವಿಧಾನಪರಿಷತ್ತು ಸದಸ್ಯ ಸಿ.ಟಿ.ರವಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 90 ಸಾವಿರ ಏಕರೆ ಕಬಳಿಸಲು ಹುನ್ನಾರ ಮಾಡಿದೆ ಇದು ಲ್ಯಾಂಡ್ ಜಿಹಾದ್. ಸ್ವತಃ ಸಿದ್ದರಾಮಯ್ಯ ಅವರ ಮನೆ ದೇವರು ಬೀರಲಿಂಗೇಶ್ವರ ದೇವಸ್ಥಾನ ಕೂಡ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ವಿಶ್ವೇಶ್ವರಯ್ಯ ಓದಿದ ಶಾಲೆ ಕೂಡ ವಕ್ಪ್ ಅಂತ ನಮೂದು ಮಾಡಿದ್ದಾರೆ.ಕಂಡಕಂಡವರ ಆಸ್ತಿ ಕಬಳಿಸಿ ಬೇಲಿ ಹಾಕಲು ವಕ್ಪ್ ಗೆ ಅಧಿಕಾರವಿಲ್ಲ ಎಂದರು.
ಧಾರವಾಡ ಜಿಲ್ಲೆ ಒಂದರಲ್ಲಿಯೇ 3000 ಎಕರೆ ವಕ್ಫ್ ಹೆಸರು ನಮೂದು ಮಾಡಲಾಗಿದೆ. 1500 ವರ್ಷದ ಹಿಂದಿನ ಸೋಮೇಶ್ವರ ದೇವಸ್ಥಾನವನ್ನು ಕೂಡ ಬಿಟ್ಟಿಲ್ಲ. ಇಸ್ಲಾಂ ಮತಗಳಿಗಾಗಿ ಅಸಂವಿಧಾನಿಕ ಕೆಲಸಗಳನ್ನು ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಶರಿಯತ್ ಕಾನೂನಿನಲ್ಲಿ ಇಲ್ಲವೆಂದರೆ ಕೂಡಲೇ ಅಧಿಸೂಚನೆ ರದ್ದುಪಡಿಸಲಿ. ವಕ್ಪ್ ಕಾನೂನು ದಲಿತರ ಹಾಗೂ ಶೋಷಿತರಿಗೆ ಮರಣ ಶಾಸನ ರೀತಿಯಲ್ಲಿದೆ. ಕಾಯಿದೆ ಎಲ್ಲಿಯವರೆಗೆ ಇರುತ್ತೇ ಅಲ್ಲಿಯವರೆಗೆ ಇದು ತೂಗುಗತ್ತಿ. ದಾನ ಕೊಟ್ಟ ಆಸ್ತಿ ಮಾತ್ರವೇ ವಕ್ಪ್ ನಿರ್ವಹಣೆ ಜವಾಬ್ದಾರಿ.
ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ನಡೆಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ವಕ್ಪ್ ಆಸ್ತಿಯ ಬಗ್ಗೆ ಸಂಪೂರ್ಣ ಪರಿಶೀಲನೆ ಆಗಬೇಕು. ಮುಖ್ಯಮಂತ್ರಿಗಳೇ ಜಮೀರ್ ಅಹ್ಮದ್ ಖಾನ್ ಗೆ ಸರ್ವಾಧಿಕಾರಿ ಕೊಟ್ಟಿದ್ದೀರಾ..? ಹೀಗಾಗಿಯೇ ಕಂಡವರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೆಸರು ನಮೂದು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: Malpe: ದಡ ಸೇರಿದ ದೋಣಿಗಳು; ಮತ್ಸ್ಯ ಕ್ಷಾಮದ ಜತೆಗೆ ಮತ್ತಷ್ಟು ಹೊಡೆತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada: ನೇತ್ರಾವತಿಗೆ ಇನ್ನೊಂದು ಸೇತುವೆ: ಸಂಪುಟ ಅಸ್ತು
Karnataka Govt.,: ಆದಾಯ ಸಂಗ್ರಹಕ್ಕೆ ಸರಕಾರ ಗಣಿಗಾರಿಕೆ
Karnataka: ಇಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಆಂತರಿಕ ಬೇಗುದಿ ಶಮನವೇ, ಉಲ್ಬಣವೇ?
Karnataka: ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆ ನಿಯಮ ಸಡಿಲ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
Darshan; ಸಹಾನುಭೂತಿ ದುರ್ಬಳಕೆ:ಜಾಮೀನು ರದ್ದು ಮಾಡಿ ಎಂದ ಸರಕಾರ
MUST WATCH
ಹೊಸ ಸೇರ್ಪಡೆ
Anjanadri: ಬೈಕ್ ಕಾಲುವೆಗೆ ಬಿದ್ದು ಓರ್ವ ಸಾವು, ಮತ್ತೊರ್ವನ ಕಾಲು ಮುರಿತ
Mangaluru: ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡು ಹಾಡಿ ಕರಾವಳಿ ಜನರ ಮನ ಗೆದ್ದ ಡಿಸಿ
Manipal: ಚಾಲಕನ ನಿಯಂತ್ರಣ ತಪ್ಪಿ ನಗರಸಭೆಯ ಪಂಪ್ ಹೌಸ್ ಗೆ ನುಗ್ಗಿದ ಕಾರು…
Syria: ತಕ್ಷಣವೇ ಸಿರಿಯಾದಿಂದ ಹೊರಟು ಬನ್ನಿ…. ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ
Kukke Subrahmanya Temple: ಭಕ್ತಿ, ಸಂಭ್ರಮದಿಂದ ನೆರವೇರಿದ ಚಂಪಾಷಷ್ಠಿ ಮಹಾರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.