Chikkamagaluru: ಹಣ ನೀಡುವ ವಿಚಾರದಲ್ಲಿ ಕ್ಯಾಷಿಯರ್ ಮತ್ತು ಯುವಕರ ನಡುವೆ ಮಾರಾಮಾರಿ
Team Udayavani, Dec 4, 2024, 5:04 PM IST
ಚಿಕ್ಕಮಗಳೂರು: ಮದ್ಯದಂಗಡಿಯಲ್ಲಿ ಹಣ ನೀಡುವ ವಿಚಾರವಾಗಿ ಕ್ಯಾಷಿಯರ್ ಮತ್ತು ಯುವಕರ ನಡುವೆ ಗಲಾಟೆ ನಡೆದು ಬಡಿದಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಆಶ್ರಯ ಯೋಜನೆ ಬಡಾವಣೆಯಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ಯುವಕರ ತಂಡ ಕೈಯಲ್ಲಿ ದೊಣ್ಣೆ ಹಿಡಿದು ಓಡಾಡಿದ್ದಾರೆ. ಬಡಾವಣೆಯಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿತ್ತು. ದೊಣ್ಣೆ ಹಿಡುದ ಬೈಕ್‌ನಲ್ಲಿ ಓಡಾಡಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆ ಸಂಬಂಧ 10ಕ್ಕೂ ಹೆಚ್ಚು ಜನರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಕೆಲವರನ್ನು ಬಂಧಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವಿಕ್ರಮ್ ಅಮಟೆ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ಯದಂಗಡಿಯಲ್ಲಿ ಹಣ ನೀಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ಬಾರ್ ಕ್ಯಾಷಿಯರ್ ಮತ್ತು ಯುವಕರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಗಾಯ ಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Fadnavis; ತಾಳ್ಮೆ, ನಾಯಕತ್ವಕ್ಕೆ ನಿಷ್ಠ ಕುಶಾಗ್ರಮತಿಗೆ ಮತ್ತೆ ಹುದ್ದೆ ಒಲಿಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು
Belagavi Winter Session: ಮೊದಲ ವಾರವೇ ಉತ್ತರ ಕರ್ನಾಟಕ ಚರ್ಚೆ ನಡೆಯಲಿ
Bangaluru;15 ಲ.ರೂ. ಚಿನ್ನ ಪಡೆದು ವಂಚಿಸಿದ ಸ್ನೇಹಿತ: ವಿದ್ಯಾರ್ಥಿನಿ ಆತ್ಮಹ*ತ್ಯೆ
Chief Minister; ಅಧಿಕಾರ ಹಸ್ತಾಂತರ ಸದ್ಯಕ್ಕೆ ಇಲ್ಲ: ಡಿಕೆಶಿ ತೇಪೆ ಹಚ್ಚುವ ಪ್ರಯತ್ನ
Muzrai Department ಅರ್ಚಕರಿಗೆ 5 ಲಕ್ಷ ರೂ. ಜೀವವಿಮೆ, ಗೌರವಧನ ಹೆಚ್ಚಳಕ್ಕೆ ಮನವಿ
MUST WATCH
ಹೊಸ ಸೇರ್ಪಡೆ
Repo Rate: ಸತತ 11ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್ ಶಕ್ತಿಕಾಂತ್ ದಾಸ್
#UITheMovie: ರಿಲೀಸ್ ಅಖಾಡದಲ್ಲಿ ಉಪ್ಪಿ ಆಟ; ನಾವು-ನೀವು ಮತ್ತು ಉಪ್ಪಿ !
Chikkamagaluru: ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು
Dilli Chalo: ರೈತರಿಂದ ದೆಹಲಿ ಚಲೋ.. ಗಡಿಯಲ್ಲಿ ಬಿಗಿ ಭದ್ರತೆ, ಮತ್ತೆ ಟ್ರಾಫಿಕ್ ಜಾಮ್ ಭೀತಿ
Christmas: ಶಿರ್ವ ಆರೋಗ್ಯ ಮಾತಾ ದೇವಾಲಯ; ಕ್ರಿಸ್ಮಸ್ ಸೌಹಾರ್ದ ಕೂಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.