Allu Arjun: ʼಪುಷ್ಪ-2ʼ ಬಳಿಕ ಅಲ್ಲು ಅರ್ಜುನ್‌ ಮುಂಬರುವ ಸಿನಿಮಾಗಳು ಯಾವುವು?

Team Udayavani, Dec 4, 2024, 7:27 PM IST

Allu Arjun: ʼಪುಷ್ಪ-2ʼ ಬಳಿಕ ಅಲ್ಲು ಅರ್ಜುನ್‌ ಮುಂಬರುವ ಸಿನಿಮಾಗಳು ಯಾವುವು?

ಹೈದರಾಬಾದ್:‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಅವರ ʼಪುಷ್ಪ-2ʼ ( Pushpa 2: The Rule) ರಿಲೀಸ್‌ಗೆ ಕೆಲ ಗಂಟೆಗಳಷ್ಟೇ ಬಾಕಿ ಉಳಿದಿದೆ. ಗುರುವಾರ (ಡಿ.5 ರಂದು) ಸಾವಿರಾರು ಥಿಯೇಟರ್‌ಗೆ ʼಪುಷ್ಪ-2ʼ ಲಗ್ಗೆ ಇಡಲಿದೆ.

ʼಪುಷ್ಪ-2ʼ ಬಳಿಕ ಅಲ್ಲು ಅರ್ಜುನ್‌ ಅವರು ಯಾವೆಲ್ಲ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅದರ ನಿರ್ದೇಶಕರು ಯಾರು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ..

ಎಎ21: ನಿರ್ದೇಶಕ – ಕೊರಟಾಲ ಶಿವ : ಟಾಲಿವುಡ್‌ನ ಸೂಪರ್‌ ಹಿಟ್‌ ನಿರ್ದೇಶಕರಲ್ಲಿ ಒಬ್ಬರಾಗಿರುವ ಕೊರಟಾಲ (Koratala Siva) ಇತ್ತೀಚೆಗೆ ʼದೇವರʼ ಸಿನಿಮಾವನ್ನು ಮಾಡಿದ್ದರು. ಮುಂದೆ ಅವರು ಅಲ್ಲು ಅರ್ಜುನ್‌ ಜತೆ ಸಿನಿಮಾವನ್ನು ಮಾಡಲಿದ್ದಾರೆ. ಇದು ಅಲ್ಲು ಅರ್ಜುನ್‌ ಅವರ 21ನೇ ಸಿನಿಮಾವಾಗಿರಲಿದ್ದು ಇದಕ್ಕೆ ತಾತ್ಕಾಲಿಕವಾಗಿ ʼAA21ʼ ಎಂದು ಟೈಟಲ್‌ ಇಡಲಾಗಿದೆ.

ಇದೊಂದು ಬಿಗ್‌ ಬಜೆಟ್‌ನ ಬಹುಭಾಷಾ ಸಿನಿಮಾವಾಗಿರಲಿದೆ. ಸುಧಾಕರ್ ಮಿಕ್ಕಿಲಿನೇನಿ ಮತ್ತು ಗೀತಾ ಆರ್ಟ್ಸ್ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡಿದೆ.

ಎಎ22: ನಿರ್ದೇಶಕ – ತ್ರಿವಿಕ್ರಮ್ ಶ್ರೀನಿವಾಸ್ : ಅಲ್ಲು ಅರ್ಜುನ್‌ – ತ್ರಿವಿಕ್ರಮ್‌ ಶ್ರೀನಿವಾಸ್‌ (Trivikram Srinivas) ಟಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಜೋಡಿಯಿದು. ಅಲ್ಲು ಅರ್ಜುನ್‌ ಜತೆ ತ್ರಿವಿಕ್ರಮ್‌ ‘ಜುಲಾಯಿ’, ‘S/O ಸತ್ಯಮೂರ್ತಿ’, ಮತ್ತು ‘ಅಲಾ ವೈಕುಂಠಪುರಮುಲೂ’ ಸಿನಿಮಾಗಳನ್ನು ಮಾಡಿದ್ದಾರೆ. ಈ ಚಿತ್ರಗಳು  ಬಾಕ್ಸ್‌ ಆಫೀಸ್‌ನಲ್ಲಿ ಧೂಳು ಎಬ್ಬಿಸಿತ್ತು. ಇದೀಗ ನಾಲ್ಕನೇ ಬಾರಿ ಅಲ್ಲು – ತ್ರಿವಿಕ್ರಮ್‌ ಸಿನಿಮಾವನ್ನು ಮಾಡಲಿದ್ದಾರೆ. ಇದೊಂದು ಬಿಗ್‌ ಪ್ರಾಜೆಕ್ಟ್‌ ಆಗಿರಲಿದ್ದು ಅಲ್ಲು ಅರ್ಜುನ್‌ ವೃತ್ತಿ ಜೀವನದಲ್ಲಿ ವಿಭಿನ್ನ ಸಿನಿಮಾವಾಗಿರಲಿದೆ ಎನ್ನಲಾಗಿದೆ.

ಸಿನಿಮಾದ ಸ್ಕ್ರಿಪ್ಟ್‌ ಬಹುತೇಕ ಪೂರ್ಣಗೊಂಡಿದ್ದು, ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ವರದಿಯಾಗಿದೆ. ಇದು ಅಲ್ಲು ಅರ್ಜುನ್‌ ಅವರ 23ನೇ ಸಿನಿಮಾವಾಗಿರುವುದರಿಂದ ಸಿನಿಮಾಕ್ಕೆ ‘AA23’ ಎಂದು ತಾತ್ಕಾಲಿಕ ಟೈಟಲ್‌ ಇಡಲಾಗಿದೆ.

ಎಎ23: ನಿರ್ದೇಶಕ – ಸಂದೀಪ್ ರೆಡ್ಡಿ ವಂಗಾ: ʼಅರ್ಜುನ್‌ ರೆಡ್ಡಿʼ, ʼಅನಿಮಲ್‌ʼ ಮೂಲಕ ಮಿಂಚಿರುವ ಸಂದೀಪ್‌ ರೆಡ್ಡಿ ವಂಗಾ (Sandeep Reddy Vanga) ಅಲ್ಲು ಅರ್ಜುನ್‌ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ‌

ಸಂದೀಪ್‌ ವಂಗಾ ಅವರ ಸಿನಿಮಾದಲ್ಲಿ ರಕ್ತಪಾತ – ಬೋಲ್ಡ್‌ ಸೀಕ್ವೆನ್ಸ್‌ ಗಳು ಹೆಚ್ಚಾಗಿರುತ್ತದೆ. ಅಲ್ಲು ಅರ್ಜುನ್‌ ಅವರಿಗೆ ಹೊಸ ರೀತಿಯ ಪವರ್‌ ಫುಲ್ ಕಥೆಯನ್ನು ಸಂದೀಪ್‌ ಮಾಡಲಿದ್ದಾರೆ ಎನ್ನಲಾಗಿದೆ.‌ ಭೂಷಣ್‌ ಕುಮಾರ್‌ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.

ಟಾಪ್ ನ್ಯೂಸ್

B.C.Road: CNG truck collides with garbage truck

B.C.Road: ತ್ಯಾಜ್ಯದ ಲಾರಿಗೆ ಸಿಎನ್ ಜಿ ಸಾಗಾಟದ ಲಾರಿ ಢಿಕ್ಕಿ

S. M. Krishna: ಆ ಎರಡು ತಪ್ಪು ಮಾಡಬಾರದಿದ್ದು ಎಂದಿದ್ದರು ಬ್ರ್ಯಾಂಡ್‌ ಬೆಂಗಳೂರು ರೂವಾರಿ

S. M. Krishna: ಆ ಎರಡು ತಪ್ಪು ಮಾಡಬಾರದಿತ್ತು ಎಂದಿದ್ದರು ಬ್ರ್ಯಾಂಡ್‌ ಬೆಂಗಳೂರು ರೂವಾರಿ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Kambala: ಕ್ರೀಡಾ ಇಲಾಖೆ ಮಾನ್ಯತೆಯ ನಿರೀಕ್ಷೆಯಲ್ಲಿ ಕರಾವಳಿ “ಕಂಬಳ’

Kambala: ಕ್ರೀಡಾ ಇಲಾಖೆ ಮಾನ್ಯತೆಯ ನಿರೀಕ್ಷೆಯಲ್ಲಿ ಕರಾವಳಿ “ಕಂಬಳ’

Udupi: ಬಿಪಿಎಲ್‌ಗೆ ಅಕ್ಕಿಯೂ ಇಲ್ಲ , ಹಣವೂ ಸಿಗುತ್ತಿಲ್ಲ !

Udupi: ಬಿಪಿಎಲ್‌ಗೆ ಅಕ್ಕಿಯೂ ಇಲ್ಲ , ಹಣವೂ ಸಿಗುತ್ತಿಲ್ಲ !

865698

SM Krishna: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್ ಎಂ ಕೃಷ್ಣ ನಿಧನ

Parliament session: ಏಕಕಾಲಕ್ಕೆ ಚುನಾವಣೆ ಮಸೂದೆ ಈ ಸಲವೇ ಸಂಸತ್ತಿನಲ್ಲಿ ಮಂಡನೆ?

Parliament session: ಏಕಕಾಲಕ್ಕೆ ಚುನಾವಣೆ ಮಸೂದೆ ಈ ಸಲವೇ ಸಂಸತ್ತಿನಲ್ಲಿ ಮಂಡನೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: ಪ್ರಭಾಸ್‌ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸ್ಕ್ರಿಪ್ಟ್‌ ? – ವರದಿ

Tollywood: ಪ್ರಭಾಸ್‌ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸ್ಕ್ರಿಪ್ಟ್‌ ? – ವರದಿ

Hyderabad: ʼಪುಷ್ಪ-2ʼ ಕಾಲ್ತುಳಿತ ಪ್ರಕರಣ; ಥಿಯೇಟರ್‌ ಮಾಲೀಕ ಸೇರಿ ಮೂವರ ಬಂಧನ

Hyderabad: ʼಪುಷ್ಪ-2ʼ ಕಾಲ್ತುಳಿತ ಪ್ರಕರಣ; ಥಿಯೇಟರ್‌ ಮಾಲೀಕ ಸೇರಿ ಮೂವರ ಬಂಧನ

Tollywood: ಆಸ್ತಿ ವಿವಾದ; ತಂದೆ ವಿರುದ್ದವೇ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ ಖ್ಯಾತ ನಟ

Tollywood: ಆಸ್ತಿ ವಿವಾದ; ತಂದೆ ವಿರುದ್ದವೇ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ ಖ್ಯಾತ ನಟ

Allu Arjun: ಮಾಲಿವುಡ್‌ನ ಹಿಟ್‌ ನಿರ್ದೇಶಕನ ಜತೆ ಅಲ್ಲು ಅರ್ಜುನ್‌ ಸಿನಿಮಾ- ವರದಿ

Allu Arjun: ಮಾಲಿವುಡ್‌ನ ಹಿಟ್‌ ನಿರ್ದೇಶಕನ ಜತೆ ಅಲ್ಲು ಅರ್ಜುನ್‌ ಸಿನಿಮಾ- ವರದಿ

‘Pushpa 2’ sets box office record

Allu Arjun: ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ‌ ʼಪುಷ್ಪ-2ʼ

MUST WATCH

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

ಹೊಸ ಸೇರ್ಪಡೆ

B.C.Road: CNG truck collides with garbage truck

B.C.Road: ತ್ಯಾಜ್ಯದ ಲಾರಿಗೆ ಸಿಎನ್ ಜಿ ಸಾಗಾಟದ ಲಾರಿ ಢಿಕ್ಕಿ

S. M. Krishna: ಆ ಎರಡು ತಪ್ಪು ಮಾಡಬಾರದಿದ್ದು ಎಂದಿದ್ದರು ಬ್ರ್ಯಾಂಡ್‌ ಬೆಂಗಳೂರು ರೂವಾರಿ

S. M. Krishna: ಆ ಎರಡು ತಪ್ಪು ಮಾಡಬಾರದಿತ್ತು ಎಂದಿದ್ದರು ಬ್ರ್ಯಾಂಡ್‌ ಬೆಂಗಳೂರು ರೂವಾರಿ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Kambala: ಕ್ರೀಡಾ ಇಲಾಖೆ ಮಾನ್ಯತೆಯ ನಿರೀಕ್ಷೆಯಲ್ಲಿ ಕರಾವಳಿ “ಕಂಬಳ’

Kambala: ಕ್ರೀಡಾ ಇಲಾಖೆ ಮಾನ್ಯತೆಯ ನಿರೀಕ್ಷೆಯಲ್ಲಿ ಕರಾವಳಿ “ಕಂಬಳ’

Udupi: ಬಿಪಿಎಲ್‌ಗೆ ಅಕ್ಕಿಯೂ ಇಲ್ಲ , ಹಣವೂ ಸಿಗುತ್ತಿಲ್ಲ !

Udupi: ಬಿಪಿಎಲ್‌ಗೆ ಅಕ್ಕಿಯೂ ಇಲ್ಲ , ಹಣವೂ ಸಿಗುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.