ಜೀವನ ಅತ್ಯಮೂಲ್ಯ, ಮಾದಕ ವ್ಯಸನ ಒಳ್ಳೆಯದಲ್ಲ: ವಿದ್ಯಾರ್ಥಿಗಳಿಗೆ ನಟ ಉಪೇಂದ್ರ ಕಿವಿಮಾತು
Team Udayavani, Dec 4, 2024, 7:13 PM IST
ಧಾರವಾಡ : ವಿದ್ಯಾರ್ಥಿ ಜೀವನ ಅತ್ಯಮೂಲ್ಯ ಆಗಿದ್ದು, ಬದುಕಿಗೆ ಭದ್ರ ಅಡಿಪಾಯ ಹಾಕುವ ಈ ಸಮಯಕ್ಕೆ ಮಾದಕ ವಸ್ತುಗಳ ವ್ಯಸನ ಒಳ್ಳೆಯದಲ್ಲ ಎಂದು ನಟ, ನಿರ್ದೇಶಕ ಉಪೇಂದ್ರ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಹು-ಧಾ ಪೊಲೀಸ ಆಯುಕ್ತರ ಕಚೇರಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.
ಈ ಭೂಮಿ ಮೇಲೆ ಅನೇಕ ಮಾದಕ ವಸ್ತುಗಳಿವೆ. ಆದರೆ, ನಾವು ಯಾವ ರೀತಿ ಬದುಕಬೇಕು? ಜೀವನ ಕಟ್ಟಿಕೊಳ್ಳಬೇಕು ಎಂಬ ವಿಚಾರ ನಮ್ಮ ತಲೆಯಲ್ಲಿರಬೇಕು. ಯಾರು ಏನೇ ಹೇಳಿದರೂ ಎಲ್ಲವನ್ನೂ ಕೇಳಬೇಕು ಆದರೆ, ಮೊದಲು ನಮ್ಮನ್ನು ನಾವು ನಂಬಬೇಕು. ನಮಗಾಗಿ ಬದುಕಬೇಕು. ಮಾದಕ ವಸ್ತುಗಳ ಬಳಕೆ ಬೇಡ ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಕಾಲೇಜಿಗೆ ಬಂದ ನಟ ಉಪೇಂದ್ರ ಅವರ ಮೇಲೆ ಪುಷ್ಪಗಳನ್ನು ಹಾಕುವ ಮೂಲಕ ಬರಮಾಡಿಕೊಳ್ಳಲಾಯಿತು. ಉಪೇಂದ್ರ ಅವರು ಬರುತ್ತಿದ್ದಂತೆ ವಿದ್ಯಾರ್ಥಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಅನೇಕರು ಅವರ ಕೈ ಕುಲುಕಿ ಸಂತಸಪಟ್ಟರು. ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ನಟ ಉಪೇಂದ್ರ ಅವರು, ಯುಐ ಸಿನಿಮಾ ಸೇರಿದಂತೆ ವಿವಿಧ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಈ ಸಂದರ್ಭದಲ್ಲಿ ಡಿಸಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ್ ಸೇರಿದಂತೆ ಅನೇಕರು ಸಾಥ್ ನೀಡಿದರು.
ಇದನ್ನೂ ಓದಿ: Belagavi: ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊ*ಲೆ ಮಾಡಿದ ತಮ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangaluru;15 ಲ.ರೂ. ಚಿನ್ನ ಪಡೆದು ವಂಚಿಸಿದ ಸ್ನೇಹಿತ: ವಿದ್ಯಾರ್ಥಿನಿ ಆತ್ಮಹ*ತ್ಯೆ
Chief Minister; ಅಧಿಕಾರ ಹಸ್ತಾಂತರ ಸದ್ಯಕ್ಕೆ ಇಲ್ಲ: ಡಿಕೆಶಿ ತೇಪೆ ಹಚ್ಚುವ ಪ್ರಯತ್ನ
Muzrai Department ಅರ್ಚಕರಿಗೆ 5 ಲಕ್ಷ ರೂ. ಜೀವವಿಮೆ, ಗೌರವಧನ ಹೆಚ್ಚಳಕ್ಕೆ ಮನವಿ
MUDA ಅಕ್ರಮ: ಅಧಿಕಾರಿಗಳಿಂದ ಬೇನಾಮಿ ಹೆಸರಲ್ಲಿ ಆಸ್ತಿ, ಹೂಡಿಕೆ
ವರನಟಿ ಡಾ| ಲೀಲಾವತಿ ದೇಗುಲ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Byndoor: ಐತಿಹಾಸಿಕ ಪ್ರಸಿದ್ಧಿಯ ತಗ್ಗರ್ಸೆ ಕಂಬಳ್ಳೋತ್ಸವ
Tourism Development: ಲಕ್ಷದ್ವೀಪ ಅಭಿವೃದ್ಧಿಗೆ 8 ಬೃಹತ್ ಯೋಜನೆ: ಕೇಂದ್ರ ಸರಕಾರ ಚಿಂತನೆ
Agriculture: ಹಿಂಗಾರು ಕೃಷಿಗೆ ಫೈಂಜಾಲ್ ಆತಂಕ: ದ್ವಿದಳ ಧಾನ್ಯ,ತರಕಾರಿ ಕೃಷಿಗೆ ಭಾರೀ ಕಂಟಕ
Bangaluru;15 ಲ.ರೂ. ಚಿನ್ನ ಪಡೆದು ವಂಚಿಸಿದ ಸ್ನೇಹಿತ: ವಿದ್ಯಾರ್ಥಿನಿ ಆತ್ಮಹ*ತ್ಯೆ
South korea ಕ್ಕೆ ವಯಸ್ಸಾಯ್ತು? : ಅತ್ಯಂತ ಕನಿಷ್ಠಕ್ಕೆ ಕುಸಿತದ ಫಲವತ್ತತೆಯ ದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.