UV Fusion: ಅವಕಾಶವು ಆಶಾದಾಯಕವಾಗಿರಲಿ


Team Udayavani, Dec 4, 2024, 7:20 PM IST

11-uv-fusion

ಜೀವನವೆಂದರೆ ಒಂದೊಂದು ಕ್ಷಣದ ಅವಕಾಶವಷ್ಟೆ. ಆ ಕ್ಷಣಗಳು ಉರುಳಿ ಹೋದರೆ ಮತ್ತೆಂದೂ ನಮ್ಮ ಕೈಗೆ ದಕ್ಕುವುದಿಲ್ಲ. ಅದಕ್ಕಾಗಿಯೇ ಬಲ್ಲವರು ಹೇಳುವರು ಭಗವಂತನು ತನ್ನ ಮುಖವನ್ನು ತೋರಿಸಲು ನಾಚಿಕೊಂಡಾಗ ಅವಕಾಶದ ರೂಪದಲ್ಲಾದರೂ ಎದುರಾಗೋಣವೆಂದು ವ್ಯಕ್ತಿಗಳ ಮುಂದೆ ಪ್ರತ್ಯಕ್ಷನಾಗುತ್ತಾನಂತೆ, ಮುಂದಿನ ಬಾರಿ ಅವಕಾಶ ದೊರೆತರೆ ತಿರಸ್ಕಾರದ ಮನೋಭಾವದಲ್ಲಿ ಉದಾಸೀನ ಮಾಡಬಾರದು ಅದು ಭಗವಂತನ ಪ್ರತಿರೂಪವಾಗಿರುತ್ತದೆ.

ಈ ಮಾನವ ಜನ್ಮ ಎಂಬುದು ಎಷ್ಟೋ ವರದಾನ, ಪುಣ್ಯದ ಫಲದಿಂದ ಪಡೆದುಕೊಂಡ ಅವಕಾಶದ ಕಾಣಿಕೆಯಾಗಿದೆ. ಇದರ ಸಾರ್ಥಕತೆಯಾಗುವುದು ಸಮಾಜಕ್ಕೆ ನಾವು ನಮ್ಮನ್ನು ತೊಡಗಿಸಿಕೊಂಡಾಗ. ಹಾಗಾದರೆ ಅವಕಾಶವೆಂದರೆ ಅಂದುಕೊಂಡಿದ್ದನ್ನು ಸಾಧಿಸಲು ಒದಗಿ ಬರುವ ಸನ್ನಿವೇಶ. ಎರಗಿ ಬಂದ ಕಷ್ಟಗಳಿಗೆ ಕೊರಗಿ, ನಡುಗಿ ಕುಗ್ಗಬಾರದು, ಕುಗ್ಗಿ ಅಗ್ಗವಾಗಬಾರದು, ಅಗ್ಗವಾಗಿ ಬದುಕನ್ನು ಕುಗ್ಗಿಸಬಾರದು. ಅವಕಾಶವೆಂಬುದು ಭರವಸೆಯ ದ್ಯೋತಕವಾದುದು. ನಮ್ಮ ಸಾಧನೆಗಳು ಅವಕಾಶವಾಗಿ ಬೆಳಕಾಗಿ ಬಂದಾಗ ವ್ಯಕ್ತಿಯ ಶಕ್ತ-ವ್ಯಕ್ತಿತ್ವ ಅನಾವರಣವಾಗಲು ಸಾಧ್ಯ. ಕೆಲವೊಮ್ಮೆ ಅವಕಾಶ ಬಂದಾಗ ನಾವು ತಯಾರು ಆಗಿರುವುದಿಲ್ಲ ನಾವು ತಯಾರಾಗಿದ್ದಾಗ ಅವಕಾಶಗಳು ಒದಗಿ ಬರದಿರಬಹುದು.

ನಕ್ಕು ಬಿಡು ಗೆಳೆಯ, ಇದು ಆನಂದದ ನಿಲಯ, ಕಷ್ಟ ಕಾರ್ಪಣ್ಯಗಳ ನೊಗಹೊತ್ತು ಸಾಗಲು ಯಾತನೆಯ ಬನದೊಳಗೆ ನೋಯುವುದು ಹೃದಯ,

ಅದೃಷ್ಟದ ಆಟವನ್ನು ಆಡದೆ ಒದಗಿದ ಅವಕಾಶಗಳ ಬಾಚಿತಬ್ಬುತಲಿ ನೊಂದನೋವನ್ನು ನಗುತ್ತಲೇ ಸ್ವೀಕರಿಸಿ- ಬದುಕ ಬೆಳಕಾಗಿಸಲು ಬಯಲು ಆಲಯಕೆ ನೀನೇ ಒಡೆಯ.

ಗೆಳೆಯ ರಾಘವೇಂದ್ರ ಸಿ.ಎಸ್‌. ಅವರು ಹೇಳುವಂತೆ “ನಿಮ್ಮ ಸಾಮರ್ಥಯ ಅದ್ವಿತೀಯ, ಪ್ರತಿಭೆ ಅನುಪಮವಾದುದು, ನೀವು ಇದೇ ರೀತಿ ಎತ್ತರ ಮಟ್ಟಕ್ಕೆ ಬೆಳೆಯಬೇಕು, ನಿಮ್ಮ ಅಗಾಧವಾದ ಪ್ರತಿಭೆಗೆ ಇನ್ನೂ ಅವಕಾಶಗಳು ಒದಗಿ ಬರುತ್ತವೆ’ ಎಂಬ ಮಾತುಗಳು ನನ್ನನ್ನು ಜೀವಂತಿಕೆಗೊಳಿಸಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು, ಹೆಜ್ಜೆಗಳನ್ನು ಇಡಲು ಸಾಧ್ಯವಾಗಿರುವುದಕ್ಕೆ ಕಾರಣವಾಗಿದೆ. ಕೆಲವು ವೇಳೆ ಇದಕ್ಕೆ ವಿರುದ್ಧವಾದ ಭಾಗವು ಇರುತ್ತದೆ. ಹೇಗೆಂದರೆ ಹಲ್ಲು ಇದ್ದವರಿಗೆ ಕಡಲೆ ಇಲ್ಲ-ಕಡಲೆ ಇದ್ದವರಿಗೆ ಹಲ್ಲು ಇಲ್ಲ ಎಂದು ಹೇಳಲಾ ಗುತ್ತದೆ ಭಾಗ್ಯ ಎಲ್ಲರಿಗೂ ಒಂದೇ ಸಮನಾಗಿರುವುದಿಲ್ಲ.

ಒಂದು ಇದ್ದರೆ ಇನ್ನೊಂದು ಇರುವುದಿಲ್ಲ ಎನ್ನುವುದಕ್ಕೆ ಕಡಲೆಯ ಭಾಗ್ಯ ಹಾಗೂ ಹಲ್ಲಿನ ಭಾಗ್ಯವನ್ನು ಈ ಗಾದೆಯಲ್ಲಿ ಎತ್ತಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಅವಕಾಶದ ವಿಚಾರವನ್ನು ತೆಗೆದುಕೊಂಡರೆ ಕೆಲವರಿಗೆ ಪ್ರತಿಭೆ ಇರುತ್ತದೆ ಅದರ ಪ್ರದರ್ಶನಕ್ಕೆ ಬೇಕಾದ ಅವಕಾಶವಿರದೆ ಆ ಪ್ರತಿಭೆ ಕರಗಿ ಹೋಗುತ್ತದೆ, ಇನ್ನೂ ಕೆಲವು ಏನೂ ಪ್ರತಿಭೆ ಇರದ ಯಕಶ್ಚಿತ ಜೀವವೊಂದು ಅವಕಾಶಗಳನ್ನು ದರೋಡೆ ಮಾಡುತ್ತ ಎತ್ತರ ಏರು ಶಿಖರದಲ್ಲಿ ಅಹಂಕಾರದ ಪ್ರಾಣಸ್ನೇಹಿತನಂತೆ ವರ್ತಿಸುತ್ತಾರೆ, ಇನ್ನೂ ಕೆಲವು ವೇಳೆ ಪ್ರತಿಭೆ ಮತ್ತು ಅವಕಾಶಗಳ ಸಮಭಾವದಿಂದ ಐಕ್ಯಗೊಂಡು ಚರಿತ್ರಾರ್ಹವಾದ ಸಾಧನೆಗಳ ರೇಖೆಗಳು ಜೀವ ತಳೆದು ಬದುಕಿನ ಪುಸ್ತಕದಲ್ಲಿ ದಾಖಲೆಯನ್ನು ಮೂಡಿಸುತ್ತಿರುತ್ತವೆ. ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಅಂಜದೆ ಅಳುಕದೆ ಸಾಗಬೇಕು. ಅಂಜಿ ಕುಳಿತರೆ ಬದುಕು ಬಣ್ಣಮಯವಾಗದೆ ಕಮರುವುದು, ನೀರಸ ಭಾವದಲ್ಲಿ ಬಿದ್ದು ಒದ್ದಾಡುವುದು. ಕಣ್ಣು ಮುಚ್ಚಿ ಕುಳಿತು ಜಗತ್ತು ಕತ್ತಲು ಎಂದು ಜರಿದರೆ ಬೆಳಕಿನ ಲೋಕ ನಮ್ಮಿಂದ ದೂರವೇ ಉಳಿಯುತ್ತದೆ. ಅದನ್ನು ಗ್ರಹಿಸುವ ಅವಕಾಶವಿದ್ದರೂ, ಸಾಮರ್ಥಯವಿದ್ದರೂ ನಮ್ಮ ಕೈಗೆ ದಕ್ಕಲಾರದು. ಅವಕಾಶವಿದ್ದಲ್ಲಿ ಪ್ರತಿಭೆಯ ಅನಾವರಣಕ್ಕೆ ಮುಂದಾಗಿ. ಅವಕಾಶಗಳು, ಅವಕಾಶದ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇರುತ್ತವೆ. ಗಾಳಿ ಬಂದಾಗ ತೂರಿಕೋ, ಅವಕಾಶವಿದ್ದಾಗ ಬಳಸಿಕೋ ಎಂಬುದು ಕೂಡ ಅವಕಾಶದ ಸದ್ಬಳಕೆಯನ್ನೇ ಒತ್ತಿ ಹೇಳುತ್ತದೆ.

ಕಣ್ಣು ಮುಚ್ಚಿ ಕುಳಿತರೆ ಕತ್ತಲು ಮಾತ್ರ ಕಾಣಿಸಿಕೊಳ್ಳುತ್ತದೆ ಆದರೆ ಕಣ್ಣು ತೆರೆದರೆ ಬೆಳಕಿನೊಂದಿಗೆ ಬದುಕು ಕೂಡ ಕಾಣಿಸಿಕೊಳ್ಳುತ್ತದೆ. ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆಯದಿದ್ದರೂ, ನೂರು, ಸಾವಿರ ಅವಕಾಶಗಳನ್ನು ನಮ್ಮೆದುರು ತೆರೆದಿಡುತ್ತದೆ. ಎಂಥ ಕೆಟ್ಟ ಸಂದರ್ಭದಲ್ಲೂ ನಮ್ಮೆದುರು ಆಯ್ಕೆಗಳಿರುತ್ತವೆ ಎಂಬ ನೇಮಿಚಂದ್ರರ ಸ್ಪೂರ್ತಿದಾಯಕವಾದ ಮಾತುಗಳು ಸದಾವಕಾಶದ ಆಶಯವನ್ನು ಬದುಕ ಬದಲಿಸಬಹುದು ಎಂಬ ಹೊತ್ತಿಗೆಯಲ್ಲಿನ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನವು ಸಾರುತ್ತದೆ. ಅವಕಾಶ ಒಮ್ಮೆ ಬಂದು ಕದ ತಟ್ಟಿ ಕರೆಯುತ್ತದೆ ಅದರ ಕಡೆ ಗಮನ ಕೊಡದೆ ಹೋದರೆ ನಮ್ಮ ಚೈತನ್ಯ ಶಕ್ತಿಯೇ ಕರಗುತ್ತದೆ. ಆಂತರ್ಯದಲ್ಲಿ ಹುದುಗಿರುವ ಅದೆಷ್ಟೋ ವಿಭಿನ್ನತೆಗಳನ್ನು ಕಾಣಲು ಸಾಧ್ಯವಿಲ್ಲ.

ಒಬ್ಬ ವ್ಯಕ್ತಿ ಬದುಕಿನ ಬವಣೆಯನ್ನು ನೀಗಿಸಲು ಸಾಧ್ಯವಿಲ್ಲದೆ ತನ್ನನ್ನು ತಾನು ಕೊಂದುಕೊಳ್ಳಲು ನಿರ್ಧರಿಸಿ ಒಂದು ಹೊಳೆಯ ಹತ್ತಿರ ಬಂದು ನಿಂತು ಭಗವಂತನನ್ನು ಪ್ರಾರ್ಥಿಸುತ್ತಾನೆ. ದೈವದ ಕೃಪೆಯಿಂದ ಕಾಕತಾಳೀಯ ಎಂಬಂತೆ ದೇವರೇ ಪ್ರತ್ಯಕ್ಷನಾಗಿ “ನೋಡಪ್ಪ ನೀನು ಸಾಯಬಾರದು ಬದುಕಬೇಕು ಅದಕ್ಕೆ ನಿನಗೆ ಈ ಹೊಳೆಯಲ್ಲಿ ಸಾಕಷ್ಟು ರತ್ನಗಳಿವೆ. ಆದರೆ ಒಂದು ಮಾತ್ರ ಹೊಳೆಯುವ ಅಮೂಲ್ಯರತ್ನ, ಅದು ಅಪರಂಜಿಯಂಥಹ ಬಂಗಾರದ ರತ್ನ. ಒಂದೊಂದೇ ರತ್ನವನ್ನು ತೆಗೆದುಕೊಂಡು ಹಣೆ ಮೇಲೆ ಇಡಬೇಕು. ಯಾವುದು ಹೊಳೆಯುವುದೋ ಅದು ಮಾತ್ರವೇ ಸಾಕಷ್ಟು ಮೌಲ್ಯ ಉಳ್ಳದ್ದು, ಹೊಳೆಯದೆ ಇರುವುದನ್ನು ವಾಪಾಸು ಹೊಳೆಗೆ ಎಸೆದು ಬಿಡಬೇಕು ಎಂಬ ಷರತ್ತಿನೊಂದಿಗೆ ಭಗವಂತ ಅಂತರ್ಧಾನವಾದನು. ಆ ಕ್ಷಣದಿಂದಲೇ ವ್ಯಕ್ತಿಯು ರತ್ನದ ಪರೀಕ್ಷೆ ಪ್ರಾಂಭಿಸುತ್ತಾನೆ.

ಒಂದೊಂದು ರತ್ನವನ್ನು ತೆಗೆದುಕೊಂಡು ಹಣೆಯಲ್ಲಿ ಇಡಲು ಪ್ರಾರಂಭಿಸಿದನು. ಮೊದಲು ಇಟ್ಟ ರತ್ನ ಹೊಳೆಯಲಿಲ್ಲ, ಎರಡನೆಯದೂ ಹೊಳೆಯಲ್ಲಿಲ್ಲ… ಹೀಗೆ ಹತ್ತಾರು ರತ್ನಗಳ ಹೊಳಪಿನ ಕಾದಾಟ ನಡೆಯುತ್ತ ಇರಲಾಗಿ ಭರಾಟೆಯ ಪರೀಕ್ಷೆಯೇ ಶರವೇಗದಲ್ಲಿ ಸಾಗಿದಾಗ ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದಾಯಿತು. ಈ ಆತುರದಲ್ಲಿ ರತ್ನವನ್ನು ಎತ್ತಿಕೊಂಡು ಹಣೆಗೆ ಹಣೆಗೆ ಇಟ್ಟ ಆ ರತ್ನ ಹೊಳೆಯಿತು.

ಆದರೆ ಆತುರದ ಕಾರಣದಿಂದ ಆ ರತ್ನವನ್ನು ಹೊಳೆಗೆ ಎಸೆದ. ಒಂದು ಕ್ಷಣ ಸಂಯಮ ಕಳೆದುಕೊಂಡು ಆತುರ ಪಟ್ಟಿದಕ್ಕೆ ಅವನಿಗೆ ಸಿಕ್ಕಂಥಹ ಅನರ್ಘ್ಯ ಅವಕಾಶವನ್ನು ಕಳೆದುಕೊಳ್ಳುವಂತಾಯಿತು. ಆತನ ಬದುಕು ಮತ್ತಷ್ಟು ದುಸ್ತರವೇ ಆಯಿತು. ಆದ್ದರಿಂದ ನಮ್ಮ ಜೀವನದಲ್ಲಿ ಅವಕಾಶ ಬರುವುದು ಒಮ್ಮೆ ಮಾತ್ರ. ಒದಗಿ ಬಂದ ಅವಕಾಶವನ್ನು ಬದಿಗೆ ಸರಿಸಿದರೆ ನಾವು ಯಾರ ಗಮನಕ್ಕೂ ಬಾರದೆ ಬದಿಗೆ ಸರಿಯಲೇಬೇಕಾಗುತ್ತದೆ. ಒಮ್ಮೆಯ ಅವಕಾಶ ಮತ್ತೂಂದಷ್ಟು ಅವಕಾಶ ಗಳಿಗೆ ದಾರಿ ತೋರುವುದು ಖಂಡಿತ ಸತ್ಯ.

ಮೊದಲಿಗೆ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಅವಕಾಶ ಒದಗಿ ಬಂದಾಗ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡದ್ದಕ್ಕೆ ಮುಂದೆ ಪದವಿ ಕಾಲೇಜಿನಲ್ಲಿ ಬೋಧನೆ ಮಾಡಲು ಅವಕಾಶ ಲಭಿಸಿ ಸಾಧ್ಯವಾದದ್ದು, ಅಂತೆಯೇ ಪತ್ರಿಕೆಗಳಲ್ಲಿ ಬರೆದ ಬರಹಗಳಿಗೆ ಹಲವು ಮಂದಿ ನೀವು ತುಂಬಾ ಚೆನ್ನಾಗಿ ಬರೆಯುವಿರಿ ಇನ್ನೂ ಈ ರೀತಿಯ ಬರವಣಿಗೆ ನಿಮ್ಮಿಂದ ಸಾಧ್ಯವಾಗುತ್ತದೆ ಬರೆಯಿರಿ ಎಂದ ಅವರ ಮಾತುಗಳೇ ನನ್ನ ಬರವಣಿಗೆಗೆ ಅವಕಾಶವಾಗುತ್ತಿದೆ. ಒಟ್ಟಿನಲ್ಲಿ ಅವಕಾಶವು ಒದಗಿ ಬಂದಾಗ ಒಪ್ಪಿಕೊಂಡು ಅಪ್ಪಿಕೊಳ್ಳುವ ಇಲ್ಲವೇ ಕೈ ಚೆಲ್ಲುವ ನಿರ್ಣಯದಿಂದ ನಮ್ಮ ಸೋಲು-ಗೆಲುವು ನಿರ್ಧಾರವಾಗುತ್ತದೆ.

ಸೋತೆನೆಂದು ಕುಗ್ಗಬೇಡ ಗುರಿಯ ಮೇಲಿರಲಿ ಕಣ್ಣು – ಗೆದ್ದೆನೆಂದು ಸಂಭ್ರಮವೂ ಬೇಡ ಸಾಧನೆ ಎಂಬುದು ಅನುಗಾಲವು ಮಾಗುವ ಹಣ್ಣು. ಸೋಲಿರಲಿ ಗೆಲುವಿರಲಿ ನಮ್ಮ ಪ್ರಯತ್ನಗಳು ಸಾಗುತ್ತಲೇ ಇರಲಿ. ಒಮ್ಮೆ ಪ್ರಯತ್ನಿಸಿ ಮತ್ತೂ ಪ್ರಯತ್ನಿಸಿ ಒಂದು ದಿನ ಅದು ನಮ್ಮ ದಿನವೇ ಆಗುತ್ತದೆ. ಇದರಲ್ಲಿ ಅನುಮಾನವಿಲ್ಲ.

 ಪರಮೇಶ ಕೆ. ಉತ್ತನಹಳ್ಳಿ

ಮೈಸೂರು

ಟಾಪ್ ನ್ಯೂಸ್

Stampede: ಪುಷ್ಪ 2 ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ತಾಯಿ ಮೃತ್ಯು, ಮಗ ಗಂಭೀರ

Stampede: ಪುಷ್ಪ 2 ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ತಾಯಿ ಮೃತ್ಯು, ಮಗ ಗಂಭೀರ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-reels

Reels: ರೀಲ್ಸ್‌ ನ ರಿಯಲ್‌ ರಗಳೆಗಳು…

15-uv-fusion

UV Fusion: ಬಾಂಧವ್ಯ ಬೆಸೆಯುವ ಹಬ್ಬಗಳ ಆಚರಣೆ

14-uv-fusion

UV Fusion: ಮೊದಲು ನಾವು ಕನ್ನಡಿಗರಾಗೋಣ..!

13-tulsi

Tulsi Pooja: ತುಳಸಿ ಪೂಜೆ ಹಿನ್ನೆಲೆ ಏನು ಗೊತ್ತಾ?

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Stampede: ಪುಷ್ಪ 2 ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ತಾಯಿ ಮೃತ್ಯು, ಮಗ ಗಂಭೀರ

Stampede: ಪುಷ್ಪ 2 ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ತಾಯಿ ಮೃತ್ಯು, ಮಗ ಗಂಭೀರ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.